March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಚಿಂತನಾ ದಿನಾಚರಣೆ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಧರ್ಮಸ್ಥಳದಲ್ಲಿ ಸ್ಕೌಟ್ ಗೈಡ್ಸ್, ಕಬ್ ಬುಲ್ ಬುಲ್ ಹಾಗೂ ಬನ್ನೀಸ್ ಜೊತೆಯಾಗಿ ವಿಶ್ವ ಚಿಂತನಾ ದಿನಾಚರಣೆಯನ್ನು ಆಚರಿಸಲಾಯಿತು.

ವಿಶ್ವ ಚಿಂತನ ದಿನಾಚರಣೆಯ ಪ್ರಯುಕ್ತ ಮಾನವ ಸರಪಳಿಯನ್ನು ಆಯೋಜಿಸಲಾಯಿತು. ಸ್ಕೌಟ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಬಳಿಕ ಸ್ಕೌಟ್ ಗೈಡ್, ಕಬ್ ಬುಲ್ ಬುಲ್ ಬನ್ನಿ ಇದರ ಪ್ರತಿಜ್ಞೆಯೊಂದಿಗೆ ಮುಂದುವರಿದು ಬೇಡನ್ ಪವೆಲ್ ಅವರ ಭಾವಚಿತ್ರಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಮೊದಲುಗೊಂಡು ನಂತರ ಎಲ್ಲಾ ದಳನಾಯಕರುಗಳು ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆ ದಿನದ ಮಹತ್ವದ ಕುರಿತಾಗಿ ಸ್ಕೌಟ್ ವಿದ್ಯಾರ್ಥಿ ಅರುಷ್ ಪಿ ಜೋಶಿ ದಿನದ ಚಿಂತನ ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ಗೈಡ್ ವಿದ್ಯಾರ್ಥಿನಿ ಕುಮಾರಿ ವೈಭವಿ ನಡೆಸಿಕೊಟ್ಟರು. ಬುಲ್ ಬುಲ್ ವಿದ್ಯಾರ್ಥಿನಿ ಕುಮಾರಿ ಶ್ರೇಯಸಿ ವಂದಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸ್ಕೌಟ್ ಮಾಸ್ಟರ್ ಗಳು ಕಬ್ ಮಾಸ್ಟರ್ ಗಳು ಗೈಡ್ ಹಾಗೂ ಬುಲ್ ಬುಲ್ ಲೀಡರ್ ಗಳು ಉಪಸ್ಥಿತರಿದ್ದರು.

Related posts

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಧತ್ತಿ ನಿಧಿಯಿಂದ ಉಚಿತ ಪುಸ್ತಕ ವಿತರಣೆ

Suddi Udaya

ಎಸ್‌ಡಿಎಂ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಉದಯೋನ್ಮುಖ ಪ್ರತಿಭೆ ಬಹುಮಾನ

Suddi Udaya

ಜನತೆಯ ನಾಡಿ ಮಿಡಿತ ಅರಿತು ವಿಕಸಿತ ಭಾರತದ ಬಜೆಟ್ ಮಂಡನೆ: ಶಾಸಕ ಹರೀಶ್ ಪೂಂಜ

Suddi Udaya

ಮಚ್ಚಿನ ಸಹಕಾರಿ ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಬಿ.ಕಾಂ ವಿಭಾಗಕ್ಕೆ ಪ್ರಶಸ್ತಿ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ: ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಗಮನ‌ ಸೆಳೆದ ಕುಣಿತಾ ಭಜನೆ

Suddi Udaya
error: Content is protected !!