September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಾರ್ಯ: ಅಕ್ರಮ ಗೋ ಮಾಂಸ ಮಾರಾಟ: ಪ್ರಕರಣ ದಾಖಲು

ಬೆಳ್ತಂಗಡಿ: ಬಾರ್ಯ ಗ್ರಾಮದ ಹೊಸವಕ್ಲು ಪ್ರದೇಶದಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಸಿ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆಬ್ರವರಿ 26ರಂದು ರಾತ್ರಿ 7.30 ಗಂಟೆ ಸುಮಾರಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ ಸುತೇಶ್ ಕೆ.ಪಿ. ಅವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಹೊಸವಕ್ಲು ಪ್ರದೇಶದ ಮನೆಯಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತು. ತಕ್ಷಣ ಪಿಸಿ 1966, ಪಿಸಿ 449 ಹಾಗೂ ಚಾಲಕ ಎಪಿಸಿ 102ರೊಂದಿಗೆ ಇಲಾಖಾ ಜೀಪಿನಲ್ಲಿ ರಾತ್ರಿ 8.20 ಗಂಟೆಗೆ ಸ್ಥಳಕ್ಕೆ ತೆರಳಿದರು.

ಪೊಲೀಸರ ಜೀಪ್ ಶಬ್ದ ಕೇಳಿ ಮನೆಯೊಂದರ ಶೆಡ್ ಬಳಿಯಿಂದ ಇಬ್ಬರು ವ್ಯಕ್ತಿಗಳು ಓಡಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಬಳಿಕ ಪಂಚರ ಸಮಕ್ಷಮದಲ್ಲಿ ಶೆಡ್ ಪರಿಶೀಲನೆ ನಡೆಸಿದಾಗ, ನೆಲದ ಮೇಲೆ ಬಿಳಿ ಪ್ಲಾಸ್ಟಿಕ್ ಟರ್ಬಲ್ ಮೇಲೆ ತಲಾ 1ಕೆ.ಜಿ. ತೂಕದ 30 ಪ್ಯಾಕೆಟ್‌ಗಳು, ಮರದ ಬುಟ್ಟಿಯಲ್ಲಿ 20 ಪ್ಯಾಕೆಟ್‌ಗಳು ಹಾಗೂ ಆಟೋ ರಿಕ್ಷಾದಲ್ಲಿ ತಲಾ 2 ಕೆ.ಜಿ. ತೂಕದ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಒಟ್ಟು ಮಾಂಸದ ಅಂದಾಜು ಮೌಲ್ಯ ರೂ.11,200 ಎಂದು ಅಂದಾಜಿಸಲಾಗಿದೆ. ಇದಲ್ಲದೆ ತೂಕದ ಯಂತ್ರ (ಅಂದಾಜು ರೂ.2,000), ಕೆಂಪು ಹಿಡಿಯ ಚಾಕು (ರೂ.100), ವಿವೋ ಮೊಬೈಲ್ ಫೋನ್ (ರೂ.10,000), ಕೆಎ-70-ಎ-1421 ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಆಟೋ ರಿಕ್ಷಾ (ಅಂದಾಜು ರೂ. 1,50,000) ಹಾಗೂ ಮರದ ಬುಟ್ಟಿ (ರೂ.100) ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಹೆಚ್. ಅಬ್ದುಲ್ ರಹಿಮಾನ್, ಅವರ ಪತ್ನಿ ರಹಮತ್ ಕೆ. ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related posts

ಕುತ್ಲೂರು ಉ. ಹಿ.ಪ್ರಾ. ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಕಡಿರ ನಾಗಬನದಲ್ಲಿ ನಾಗದೇವರಿಗೆ ತಂಬಿಲ ಸೇವೆ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ಅರಿವು ಕಾರ್ಯಕ್ರಮ

Suddi Udaya

ತೆಕ್ಕಾರು: ಕುಟ್ಟಿಗಳ ಬಜಾರ್ ಸ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಫೆ. 01: ಬೆಳಾಲು ಡಿಪಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ವಾಲಿಬಾಲ್‌ ಪಂದ್ಯಾಟ

Suddi Udaya

ಸಾವ್ಯ ಕರ್ಪೋಟ್ಟು ಅನುರಾಧ ನಿವಾಸದ ಶ್ರೀಮತಿ ರಾಧಾ ಹೃದಯಾಘಾತದಿಂದ ನಿಧನ

Suddi Udaya
error: Content is protected !!