ಬೆಳ್ತಂಗಡಿ: ಉಜಿರೆ ಉಪವಿಭಾಗ ವ್ಯಾಪ್ತಿಯಲ್ಲಿ ಮಾ.1ರಂದು 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಕಕ್ಕಿಂಜೆ 33/11 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ವಿದ್ಯುತ್ ಸರಬರಾಜು ಆಗುತ್ತಿರುವ 33ಕೆವಿ ಕಕ್ಕಿಂಜೆ ಹಾಗೂ 33ಕವಿ ಪಿಲಿಕ್ಕಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಪ್ರಯುಕ್ತ ವಿದ್ಯುತ್ ವ್ಯತ್ಯಯ ಆಗುವುದರಿಂದ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಪಿಲಿಕ್ಕಳ, ಚಾರ್ಮಾಡಿ, ಮುಂಡಾಜೆ, ದಿಡುಪೆ 11ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ ) ಮೆಸ್ಕಾಂ ಉಜಿರೆ ಉಪವಿಭಾಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






