
ಉಜಿರೆ: ಅನು ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಇದರ ಶುಭರಾಂಭವು ಮಾ 1ರಂದು ಉಜಿರೆಯ ಶ್ರೀರಾಮ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶೀಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯರವರು ದೀಪ ಪ್ರಜ್ವಲನೆ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಕೋರಿದರು.
ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ನಿವೃತ ಸಿಇಓ ರವೀಂದ್ರ ಶೆಟ್ಟಿ, ನಿವೃತ ಸೇಲ್ಸ್ ಟ್ಯಾಕ್ಸ್ ಅಧಿಕಾರಿ ಲಿಂಗಪ್ಪ ಮೂಲ್ಯ, ಸಂಸ್ಥೆಯ ಮಾಲಕರ ಮಾತ ಪಿತರಾದ ಸೇಸಪ್ಪ ಮೂಲ್ಯ- ಕುಸುಮಾವತಿ,ರೈಡಿಂಗ್ ಜೋಡಿ ಖ್ಯಾತಿಯ ಕಾಮತ್,ಪ್ರದೀಪ್ ಬೆಳ್ತಂಗಡಿ,ಸುಧೀರ್ ಗುರುವಾಯನಕೆರೆ, ಸುದೀಶ್ ಗುರುವಾಯನಕೆರೆ ಹಾಗೂ ಇತರರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಸುನಿಲ್ ಕೆ- ಅನುಷಾ ದಂಪತಿ ಆಗಮಿಸಿದ ಅತಿಥಿ ಗಣ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸತ್ಕರಿಸಿದರು.
ಸುದ್ದಿ ಉದಯ ವಾರಪತ್ರಿಕೆಯ ಮುಖ್ಯಸ್ಥರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ ನಿರೂಪಿಸಿದರು.











