37.9 C
ಪುತ್ತೂರು, ಬೆಳ್ತಂಗಡಿ
March 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನಾಳ: ದ್ವಿತೀಯ ವರ್ಷದ ಶ್ರೀ ದುರ್ಗಾ ಕಪ್ ಹಿರಿಯರ ಕ್ರಿಕೆಟ್ ಪಂದ್ಯಾಟ

ನಾಳ: 40 ವರ್ಷ ಮೇಲ್ಪಟ್ಟ ವಯೋಮಾನದ ಹಿರಿಯ ಕ್ರೀಡಾಪಟುಗಳ ಶ್ರೀದುರ್ಗಾ ಕಪ್ ಕ್ರಿಕೆಟ್ ಪಂದ್ಯಾಟ ಮಾ.2ರಂದು ನಾಳ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿಯಲ್ಲಿ ನಡೆಯಿತು.

ನಾಳ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ರಾಘವೇಂದ್ರ ಅಸ್ರಣ್ಣ ದೀಪ ಪ್ರಜ್ವಲನೆಗೊಳಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.

ಸಂಜೆ ನಡೆದು ಸಮಾರೋಪ ಸಮಾರಂಭದಲ್ಲಿ ಕಳಿಯ ಗ್ರಾ.ಪಂ. ಪ್ರಭಾರ ಪಿಡಿಒ ಕುಂಞ, ನಾಳ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಉಪನ್ಯಾಸಕ ಕೇಶವ ಬಂಗೇರ, ಹಿರಿಯ ಕ್ರೀಡಾಪಟುಗಳಾದ ತುಕರಾಮ್ ಪೂಜಾರಿ, ಸುರೇಶ್ ಕುಮಾರ್ ಆರ್.ಎನ್., ಪ್ರಶಸ್ತಿ ವಿತರಿಸಿದರು.

ಸುಂದರ ನಾಯ್ಕ್ ಕುಳಾಯಿ, ಶರತ್ ಕುಮಾರ್ ಕುಳಾಯಿ, ಸುಭಾಷಿಣಿ ಜನಾರ್ದನ ಗೌಡ ಕುಳಾಯಿ, ವಿಕ್ರಂ ವಂಜಾರೆ ಹಾಗೂ ಸಿದ್ದಪ್ಪ ಗೌಡ ಹಾಕೋಟೆ ಅವರು ಪಂದ್ಯಾಟವನ್ನು ಸಂಘಟಿಸಿದ್ದರು.

ಲೀಗ್ ಮಾದರಿಯಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಟದಲ್ಲಿ ಆರು ತಂಡಗಳು ಭಾಗವಹಿಸಿದ್ದವು. ದುರ್ಗಾಪರಮೇಶ್ವರಿ ವಾರಿಯರ್ಸ್ ಎಸ್. ಆರ್ ತಂಡ ಪ್ರಥಮ ಸ್ಥಾನವನ್ನು, ಜ್ಯೋತಿ ಎಂಟರ್ ಪ್ರೈಸಸ್ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಶ್ರೀ ದುರ್ಗಾ ವಾರಿಯರ್ಸ್ ನಾಳ ತೃತೀಯ ಸ್ಥಾನವನ್ನು, ಶುಭೋದಯ ಕುಳಾಯಿ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

Related posts

ಮುಮ್ತಾಜ್ ಇವರ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ಲಕ್ಕಿ ಡ್ರಾ: ರೂ. 250/- ಗೆ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗ ಮತ್ತು ಮನೆ

Suddi Udaya

ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷರಾಗಿ ಶುಭಕರ್ ಪೂಜಾರಿ, ಕಾರ್ಯದರ್ಶಿಯಾಗಿ ರಕ್ಷಿತ್ ಬಂಗೇರ

Suddi Udaya

ಕಲ್ಮಂಜ : ಕಲ್ಲೆ ನಿವಾಸಿ ದೇವಕಿ ಕೊಳ್ತಿಗೆ ನಿಧನ

Suddi Udaya

ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಐದನೇ ವರ್ಷದ ದೀಪಾವಳಿ ದೋಸೆ ಹಬ್ಬ

Suddi Udaya

ಉಜಿರೆ : ಕರಿಗಂಧ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ತರಬೇತಿ

Suddi Udaya

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ವಿವೇಕ್ ಎನ್ ಡಿ ಎ ಕ್ಲಿಯರ್

Suddi Udaya
error: Content is protected !!