37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಅದ್ಧೂರಿಯ ಚಾಲನೆ: ಸುಶಾಸನ’ ಆಡಳಿತ ಕಾಯಾ೯ಲಯ, ‘ಸುರಭಿ’ ಬ್ರಹ್ಮಕಲಶೋತ್ಸವ ಕಾಯಾ೯ಲಯ, ‘ಸಮೃದ್ಧಿ’ ಹಸಿರುವಾಣಿ ಉಗ್ರಾಣ, ‘ಸುಪ್ರಸಾದ’ ಭೋಜನ ಶಾಲೆ, ‘ಸುರುಚಿ’ ಪಾಕಶಾಲೆ ಉದ್ಘಾಟನೆ

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಾರಂಭೋತ್ಸವವು ಮಾ.2ರಂದು ನಡೆಯಿತು.

ಉಡುಪಿ ಹಂಗಾರಕಟ್ಟೆ ಬಾಳೆಕುದ್ರು ಮಠದ ಪರಮಪೂಜ್ಯ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್‌ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಡ ಶ್ರೀ ಸದಾಶಿವರುದ್ರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುಯ೯ಗುತ್ತು, ಬೆಳ್ತಂಗಡಿ ತಾಲೂಕು ರಬ್ಬರ್‌ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ಶೀಧರ ಜಿ. ಭಿಡೆಮನೆ ಮುಂಡಾಜೆ, ಬೆಂಗಳೂರು ಕ್ಷೇಮವನನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್, ಧರ್ಮಸ್ಥಳ ಎಸ್‌.ಕೆ.ಡಿ.ಆರ್‌.ಡಿ.ಪಿ. ಬಿಸಿ ಟ್ರಸ್ಟ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್‌ ಎಸ್‌.ಎಸ್‌. ಭಾಗವಹಿಸಿದ್ದರು.

ವಿವಿಧ ಕಾಯಾ೯ಲಯಗಳ ಉದ್ಘಾಟನೆ: ‘ಸುಶಾಸನ’ ದೇವಳದ ನೂತನ ಆಡಳಿತ ಕಾಯಾ೯ಲಯ ಮತ್ತು ‘ಸುವಾಸ’ ತಂತ್ರಿ ನಿವಾಸ ಹಾಗೂ ಮಾಧ್ಯಮ ಕೇಂದ್ರವನ್ನು ಶ್ರೀ ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಉದ್ಘಾಟನೆ ನೆರವೇರಿಸಿದರು. ‘ಸುರಭಿ’ ಬ್ರಹ್ಮ ಕಲಶೋತ್ಸವ ಕಾಯಾ೯ಲಯವನ್ನು ಶ್ರೀ ಸದಾಶೀವೇಶ್ವರ ದೇವಸ್ಥಾನ ಸುಯ೯ದ ಅನುವಂಶಿಕ ಆಡಳಿತ ಮೊಕ್ತೇಸರಾದ ಡಾ.ಸತೀಶ್ಚಂದ್ರ‌ ಉದ್ಘಾಟಿಸಿದರು. ‘ಸಮೃದ್ಧಿ’ ಹಸಿರುವಾಣಿ ಉಗ್ರಾಣವನ್ನು ಎಸ್.ಕೆ.ಡಿ.ಆರ್.ಡಿ.ಪಿ ಟ್ರಸ್ಟ್ ಧರ್ಮಸ್ಥಳದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಉದ್ಘಾಟಿಸಿದರು. ‘ಸುಪ್ರಸಾದ’ ಭೋಜನ ಶಾಲೆಯನ್ನು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಉದ್ಘಾಟಿಸಿದರು. ಸುರುಚಿ ಪಾಕಶಾಲೆಯನ್ನು ಬೆಂಗಳೂರು ಕ್ಷೀಮವನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಶ್ರದ್ಧಾ ಅಮಿತ್ ಉದ್ಘಾಟಿಸಿದರು. ಮೋಹನ್ ಕುಮಾರ್, ಸಂಜೀವ ಶೆಟ್ಟಿ, ಕುಂಟಿನಿ, ಭಾಸ್ಕರ‌ ಹೆಗ್ಡೆ ವಿವಿಧ ಕಡೆಗಳಲ್ಲಿ ಸ್ವಾಗತಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ರಾಜಗೋಪುರ ನಿರ್ಮಾಣ ಸಮಿತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬಳಂಜ ವಂದಿಸಿದರು.‌ಎಸ್.ಡಿ.ಎಂ. ಸನಿವಾಸ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಶ್ರೀ ಧ.ಮಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಪಾದಯಾತ್ರಿಗಳಿಗೆ ಉಚಿತ ವೈದ್ಯಕೀಯ ಸೇವೆ: ಚಾರ್ಮಾಡಿ, ಮುಂಡಾಜೆ ಶಿಬಿರಗಳ ಉದ್ಘಾಟನೆ

Suddi Udaya

ಕುವೆಟ್ಟು: ಸ.ಉ.ಹಿ. ಪ್ರಾ. ಶಾಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಾಗೂ ಬೀಳ್ಕೊಡುಗೆ ಸಮಾರಂಭ

Suddi Udaya

ರಸ್ತೆ ದಾಟುತ್ತಿರುವ ವೇಳೆ ಓಮ್ನಿ ಕಾರು ಡಿಕ್ಕಿ: ಬಾಲಕ ಆಸ್ಪತ್ರೆಗೆ ದಾಖಲು

Suddi Udaya

ಗುರುವಾಯನಕೆರೆ:ಎಕ್ಸೆಲ್ ನಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಬಗ್ಗೆ ಶಿಕ್ಷಣ ತಜ್ಞರಿಂದ ಕಾರ್ಯಾಗಾರ

Suddi Udaya

ಗೇರುಕಟ್ಟೆ : ಪರಪ್ಪು ಮಸೀದಿಯಲ್ಲಿ ತಾಜುಲ್ ಉಲಮಾ ಉಳ್ಳಾಲ ತಂಙಳ್ ಉರೂಸ್ ಪೋಸ್ಟರ್ ಬಿಡುಗಡೆ

Suddi Udaya

ರೈತ ವಿರೋಧಿ ಕಾಂಗ್ರೆಸ್ ಸರಕಾರದ ನಿಲುವು ವಿರೋಧಿಸಿ ರೈತ ಮೋರ್ಚಾರವರಿಂದ ತಹಶೀಲ್ದಾರರ ಮುಖಾಂತರ ಸಿ.ಎಂ ಸಿದ್ದರಾಮಯ್ಯರಿಗೆ ಮನವಿ

Suddi Udaya
error: Content is protected !!