37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಶಿಬಾಜೆ ಶ್ರೀಧರ ಕೊಲೆ ಪ್ರಕರಣ: ತನಿಖೆ ಆರಂಭಿಸಿದ ಎಸ್ಐಟಿ ಅಧಿಕಾರಿಗಳು

ಬೆಳ್ತಂಗಡಿ : ಶಿಬಾಜೆಯಲ್ಲಿ ಶ್ರೀಧರ ಕೊಲೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿ ಸಭೆ ನಡೆಸಿ ತನಿಖೆ ಆರಂಭಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿಬಾಜೆ ಸಾರ ಫಾರ್ಮ್ ಗುತ್ತು ಮನೆ ಎಂಬಲ್ಲಿ ತೋಟದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ (30) ಎಂಬಾತನನ್ನು 17-12-2022 ರಂದು ಹಲ್ಲೆ ನಡೆಸಿ ಬಳಿಕ 18-12-2022 ರಂದು ಕೊಲೆ ಮಾಡಿ ತೋಟದಲ್ಲಿ ಬೆತ್ತಲೆಗೊಳಿಸಿ ಹಾಕಿದ್ದರು ಎಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದರು.

ಈ ಪ್ರಕರಣ ಸಂಬಂಧ ತನಿಖೆ ಸರಿಯಾಗಿ ನಡೆಸಿಲ್ಲ ಎಂದು ಸಿಐಡಿ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿದ್ದರು. ಮತ್ತೆ ತನಿಖೆ ಸರಿಯಾಗಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ದಲಿತ ಸಂಘಟನೆ ಹೋರಾಟಗಾರರು ವಿಶೇಷ ತನಿಖಾ ದಳದಿಂದ ರಚಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದರು ಅದರಂತೆ ಫೆ.20 ರಂದು ಕರ್ನಾಟಕ ಸರಕಾರ ಹೈಕೋರ್ಟ್ ಸೂಚನೆಯಂತೆ ಎಸ್.ಐ.ಟಿ ರಚಿಸಿ ಆದೇಶ ಮಾಡಿದ್ದರು.

ಶ್ರೀಧರ ಕೊಲೆ ಪ್ರಕರಣದ ಎಸ್‌.ಐ.ಟಿ ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ ಹರೀಶ್.ಎಂ.ಆರ್, ಇನ್ಸ್‌ಪೆಕ್ಟರ್ ಡಾ.ನವೀನ್ ಕುಮಾರ್ ,ಸಬ್ ಇನ್ಸ್‌ಪೆಕ್ಟರ್ ಪುನೀತ್ ನೇತೃತ್ವದ ಸುಮಾರು 10 ಮಂದಿಯ ತಂಡ ಮಾ.2 ರಂದು ಬೆಳಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಬೆಂಗಳೂರು ಸಿಐಡಿ ಕಚೇರಿಯಲ್ಲಿದ್ದ ಶ್ರೀಧರ ಕೊಲೆ ಪ್ರಕರಣದ ದಾಖಲೆಗಳನ್ನು ಸಂಗ್ರಹಿಸಿ ಮೊದಲ ಹಂತದ ಸಭೆ ನಡೆಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.

Related posts

ಉಜಿರೆ: ಹೆಗ್ಗಡೆಯವರ ಜೀವನ, ಸಾಧನೆ ಯುವಜನತೆಗೆ ಮಾದರಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ಕರಂಬಾರು ಗುತ್ತು ಸುಮಿತ್ರ ಹೆಗ್ಡೆಯವರ ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿ

Suddi Udaya

ಝೀ ಕನ್ನಡ ದ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ಗೆ ಗುರುವಾಯನಕೆರೆಯ ಪ್ರತಿಭೆ ತ್ರಿಷಾ ಆಯ್ಕೆ

Suddi Udaya

ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತ: ನ್ಯಾಯತರ್ಪು ಕೊಡಿಯಡ್ಕ ತಿಮ್ಮಪ್ಪ ಗೌಡ ನಿಧನ

Suddi Udaya

ಬಳಂಜ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಿ.ಎಸ್.ಸಿ ಕೇಂದ್ರ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ಕಕ್ಕಿಂಜೆಯಲ್ಲಿ ಶಾಸಕ ಹರೀಶ್ ಪೂಂಜರಿಂದ ಮತಯಾಚನೆ

Suddi Udaya
error: Content is protected !!