September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತ: ನ್ಯಾಯತರ್ಪು ಕೊಡಿಯಡ್ಕ ತಿಮ್ಮಪ್ಪ ಗೌಡ ನಿಧನ

ನ್ಯಾಯತರ್ಪು: ನ್ಯಾಯತರ್ಪು ಗ್ರಾಮದ ಕೊಡಿಯಡ್ಕ ನಿವಾಸಿ, ಪ್ರಗತಿಪರ ಕೃಷಿಕ ತಿಮ್ಮಪ್ಪ ಗೌಡ (70ವ) ಅವರು ಇಂದು(ಮೇ 29) ಮಧ್ಯಾಹ್ನ ಹೃದಯಾಘಾತಕೊಳ್ಳಗಾಗಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.


ಇವರು ಇಂದು ಬೆಳಗ್ಗೆಯಿಂದ ತಮ್ಮ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ ಅವರು ತನ್ನ ಪತ್ನಿ ಸುಶೀಲರಲ್ಲಿ ಎದೆನೋವು ಆಗುತ್ತಿರುವ ಬಗ್ಗೆ ತಿಳಿಸಿದ್ದರು. ನಂತರ ಪಕ್ಕದ ಮನೆಯವರಿಗೆ ವಿಷಯ ತಿಳಿಸಿ ಕೂಡಲೇ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದರೂ, ಯಾವುದೇ ಪ್ರಯೋಜನವಾಗದೆ ಅವರು ಮೃತಪಟ್ಟರೆನ್ನಲಾಗಿದೆ.


ತಿಮ್ಮಪ್ಪ ಗೌಡ ಅವರು ಪ್ರಗತಿಪರ ಕೃಷಿಕರಾಗಿದ್ದು, ಅಡಿಕೆ ಕೊಯ್ಯುವ ವೃತ್ತಿಯಲ್ಲಿ ನೈಪುಣ್ಯತೆಯನ್ನು ಹೊಂದಿದ್ದರು. ಕೃಷಿಯ ಜೊತೆಗೆ ಸ್ಥಳೀಯ ಪರಿಸರದಲ್ಲಿ ಅಡಿಕೆ ಕೊಯ್ಯುವ ಕೆಲಸವನ್ನು ಮಾಡುತ್ತಿದ್ದು, ಸ್ಥಳೀಯ ಪರಿಸರದ ಕೃಷಿಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮೃತರು ಪತ್ನಿ ಸುಶೀಲ, ಓರ್ವ ಪುತ್ರಿ, ಇಬ್ಬರು ಪುತ್ರರು, ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್ ಸೇರಿ ಇಬ್ಬರು ಸಹೋದರಿಯರು, ಬಾವ ಪತ್ರಕರ್ತ ಕೆ.ಎನ್ ಗೌಡ ಹಾಗೂ ಬಂಧು-ವರ್ಗದವರನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.

Related posts

ಬೆಳ್ತಂಗಡಿ : ಎಸ್.ಐ.ಟಿ ತನಿಖೆ ಮುಂದುವರಿಯಲಿ ಅರ್ಜಿದಾರರಿಗೆ ಕಿರುಕುಳ ಬೇಡ ಹೈಕೋರ್ಟ್

Suddi Udaya

ತೋಟತ್ತಾಡಿ : ಚಿಬಿದ್ರೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಸಿದ್ಧತಾ ಸಭೆ

Suddi Udaya

ನಾಳ ಸ.ಹಿ.ಪ್ರಾ.ಶಾಲೆಯಲ್ಲಿ ಮೆಟ್ರಿಕ್‌ ಮೇಳ

Suddi Udaya

ಬೆಳ್ತಂಗಡಿ: ತುಳುನಾಡ್ ಒಕ್ಕೂಟ ಸಂಘಟನೆಯ ಯುವ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಇಳಂತಿಲ: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಸಾವು

Suddi Udaya

ಬಂದಾರು ಸರಕಾರಿ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

Suddi Udaya
error: Content is protected !!