ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಅಂಗವಾಗಿ ದೀಪ ಪ್ರದಾನ ಕಾರ್ಯಕ್ರಮವು ಶಾಲಾ ಸಭಾಭವನದಲ್ಲಿ ಮಾ.4ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಫಾ. ಅಬೆಲ್ ಲೋಬೊ ವಹಿಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಪ್ರಾಂಶುಪಾಲ ಫಾ. ವಿಜಯ್ ಲೋಬೊ ಮಾತನಾಡಿ ಕುಟುಂಬದೊAದಿಗೆ ಒಗ್ಗಟ್ಟಾಗಿ ಬದುಕಬೇಕು; ಆದರೆ ಸಂಕಷ್ಟಗಳು ಬಂದಾಗ ಧೈರ್ಯದಿಂದ ಒಬ್ಬಂಟಿಯಾಗಿ ಎದುರಿಸುವ ಮನೋಬಲ ಹೊಂದಿರಬೇಕು ಎಂಬ ಸಂದೇಶವನ್ನು ನೀಡಿದರು. ವಿದ್ಯಾರ್ಥಿಗಳು ಜಗತ್ತಿನ ಬೆಳಕಾಗುವಂತೆ ದೀಪ ಪ್ರಧಾನ ಮಾಡಲಾಯಿತು.
ವಿದ್ಯಾರ್ಥಿನಿ ಜಾಹ್ನವಿ ಎಲ್ಲಾ ಕಿರಿಯ ವಿದ್ಯಾರ್ಥಿಗಳ ಪರವಾಗಿ ಶುಭ ಹಾರೈಸಿದರು. ಕಿರಿಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮನೋರಂಜನಾ ಕ್ರೀಡೆಗಳನ್ನು ನಡೆಸಿಕೊಟ್ಟರು. ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂಸ್ಥೆಗೆ 10ನೇ ತರಗತಿಯ ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ಅನ್ನು ಕಾಣಿಕೆಯಾಗಿ ನೀಡಿದರು.ಸ್ನೇಹಲ್ ಅಡ್ಲಿನ್ ಡಿ’ಸೋಜ ನಿರೂಪಿಸಿದರು. ಗಗನ್ ಡಿ ಸ್ವಾಗತಿಸಿ, ಪಂಚಮ್ ವಂದಿಸಿದರು. ಸಹಶಿಕ್ಷಕ ಗಣೇಶ್ ಹಾಗೂ ಸಹಶಿಕ್ಷಕಿ ಮೇರಿ ಟಿ.ಎಂ ಮಾರ್ಗದರ್ಶನ ನೀಡಿದರು.











