July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಮೇಲಂತಬೆಟ್ಟು ವಿಶೇಷಚೇತನರ ಸಮನ್ವಯ ಗ್ರಾಮಸಭೆ

ಬೆಳ್ತಂಗಡಿ; ಮೇಲಂತಬೆಟ್ಟು ಗ್ರಾ.ಪಂ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ವಿಕಲಚೇತನರ ಸಮನ್ವಯ ಗ್ರಾಮಸಭೆಯು ಸರಕಾರಿ ಸುತ್ತೋಲೆಯ ಪ್ರಕಾರ ಫೆ.3ರಂದು ನಡೆಯಿತು.

ಗ್ರಾ.ಪಂ ಅಧ್ಯಕ್ಷೆ ಸವಿತಾ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿ ತಾಲೂಕು ವಿಕಲಚೇತನರ ಸಮನ್ವಯಾಧಿಕಾರಿ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ಇಲಾಖಾ ಸೌಲಭ್ಯಗಳ ಮಾಹಿತಿ ನೀಡಿದರು.

ಇಂದಬೆಟ್ಟು ಗ್ರಾ.ಪಂ ವಿಆರ್‌ಡಬ್ಲ್ಯೂ ಎಂ.ಜೆ ಜೋಸೆಫ್ ವಿಕಲಚೇತನರಿಗೆ ಸ್ಪೂರ್ತಿಯ ಮಾತನ್ನಾಡಿದರು.

ಗ್ರಾ.ಪಂ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಸದಸ್ಯ ಸಂತೋಷ್ ಕುಮಾರ್, ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ ರವರು ಶುಭ ಹಾರೈಸಿದರು. ಸದಸ್ಯರಾದ ಚಂದ್ರಶೇಖರ, ಚಂದ್ರರಾಜ್ ಎಂ, ಪ್ರಭಾಕರ ಆಚಾರ್ಯ ಮತ್ತು ಸುಮಲತಾ ಉಪಸ್ಥಿತರಿದ್ದರು.

ಸಭೆಯಲ್ಲಿ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹಾಗೂ ಸಲಹಾ ಸಮಿತಿ ಅಧ್ಯಕ್ಷ ಅಶ್ರಫ್ ಆಲಿಕುಂಞ ಮುಂಡಾಜೆ ಬ್ಯಾಂಕಿಂಗ್ ಮಾಹಿತಿ ನೀಡಿದರು.

ಪ್ರಭಾರ ಪಿಡಿಒ ನಿರ್ಮಲ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಸೌಭಾಗ್ಯ ಸೊಸೈಟಿ ವ್ಯವಸ್ಥಾಪಕ ಸಹನ್ ಕುಮಾರ್ ಭಾಗಿಯಾಗಿದ್ದರು. ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಗಣೇಶ್ ವರದಿ ಮಂಡಿಸಿದರು.

ಪಂಚಾಯತ್ ಆಡಳಿತ ವಿಭಾಗದ ಅಧಿಕಾರ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಉದ್ಯೋಗ ಖಾತರಿ ಹಾಗೂ ಗ್ರಾಮ ಆಡಳಿತಾಧಿಕಾರಿ, ಆರೋಗ್ಯ ಇಲಾಖೆ ಮತ್ತು ಗ್ರಾ.ಪಂ ಎಲ್ಲಾ ಸಿಬ್ಬಂದಿಗಳನ್ನು ಹಾಗೂ ಶಾಲಾ ಮುಖ್ಯ ಶಿಕ್ಷಕರುಗಳನ್ನು ಸ್ಮರಣಿಕೆಯೊಂದಿಗೆ ವಿಆರ್‌ಡಬ್ಲ್ಯೂ ಗಣೇಶ್ ಅವರು ಗೌರವಿಸಿದರು.

ವಿಕಲಚೇತನರಿಗಾಗಿ ತಲಾ ೫ ಕೆ.ಜಿ ಯಂತೆ ಅಕ್ಕಿ ನೀಡಿದ ಸ್ಟೀಪನ್ ರೊಡ್ರಿಗಸ್ ಸಹಿತ ವಿಕಲಚೇತನರ ಸೇವೆಗಾಗಿ ನೆರವು ನೀಡಿದ ಎಲ್ಲರಿಗೂ ಸ್ಮರಣಿಕೆ ನೀಡಲಾಯಿತು. ವಿಕಲಚೇತನರು ಮತ್ತು ಪೋಷಕರ ಆರೋಗ್ಯ ತಪಾಸಣೆಯನ್ನೂ ನಡೆಸಲಾಯಿತು.
ಇತರ ಪಂಚಾಯತ್ ಗಳಿಂದ ಆಗಮಿಸಿದ ಪುನರ್ವಸತಿ ಕಾರ್ಯಕರ್ತರಾದ ವಿಪುಲ್ ಪೂಜಾರಿ ಉಜಿರೆ, ಚಿರಂಜೀವಿ ಕಣಿಯೂರು ಇವರನ್ನೂ ಪುರಸ್ಕರಿಸಲಾಯಿತು.

Related posts

ಲಾಯಿಲ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಮಾರಿ ಪೂಜೆೋತ್ಸವ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ

Suddi Udaya

ಸೌತಡ್ಕ ದೇವಸ್ಥಾನದಲ್ಲಿ ಪುಷ್ಕರಣಿ ಕೆರೆ, ರಕ್ತೇಶ್ವರಿ ಗುಡಿ, ನಾಗಾಲಯಕ್ಕೆ ಶಿಲಾನ್ಯಾಸ

Suddi Udaya

ಫೆ.6: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಕಿವಿ-ಮೂಗು-ಗಂಟಲು ತಪಾಸಣಾ ಶಿಬಿರ

Suddi Udaya

ಗೇರುಕಟ್ಟೆ ಕುಳಾಯಿ ಶ್ರೀ ಮಹಮ್ಮಾಯಿ ದೇವರಿಗೆ ಗೋಂದಲ ಪೂಜೆ

Suddi Udaya

ಗುರುವಾಯನಕೆರೆ: ಎಕ್ಸೆಲ್ ಕಾಲೇಜು ವತಿಯಿಂದ ನೀಟ್ ಸಾಧಕ ಆದಿತ್ ಜೈನ್ ಗೆ ಸನ್ಮಾನ

Suddi Udaya
error: Content is protected !!