ಉರುವಾಲು: ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಶ್ರೀ ದೇವಿಯ ಪ್ರತಿಷ್ಠಾ ಮಹೋತ್ಸವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು. ಶುಭಾಶ್ರೀರ್ವಾದಗಳೊಂದಿಗೆ ಎಡಪದವು ಶ್ರೀ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಹಾಗೂ ಶ್ರೀ ಮಂಜುನಾಥ ಭಟ್ ಅಂತರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಿಂದ ನಡೆಯುತ್ತಿದೆ.

ಮಾ.5 ರಂದು ಗಣಯಾಗ, 108 ಕಲಶ ಅಧಿವಾಸ, ಅಧಿವಾಸ ಹೋಮ, ಶಾಂತಿ ಹೋಮ, ಶಿಖರ ಪ್ರತಿಷ್ಠೆ ಬೆಳಗ್ಗೆ 7-20ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠೆ, ಕಲಶನ್ಯಾಸ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಶತಕಲಶಾಭಿಷೇಕ, ಶ್ರೀ ಭೈರವ ಸಾನ್ನಿಧ್ಯ. ಶ್ರೀ ಮಹಮ್ಮಾಯಿ ಪ್ರತಿಷ್ಠೆ, ನವಕ ಕಲಶಾಭಿಷೇಕ, ಪರ್ವ ಆರಾಧನೆ, ದುರ್ಗಾ ಹೋಮ, ನಿತ್ಯ ನೈಮಿತ್ತಿಕ ನಡಾವಳಿ ನಿರ್ಣಯ, ಪ್ರಸನ್ನ ಪೂಜೆ, ಕಟೀಲು ಮೇಳದ ದೇವರಿಗೆ ಮಹಾಪೂಜೆ, ಪಲ್ಲ ಪೂಜೆ. ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಪ್ರತಿಷ್ಠಾ ಮಹೋತ್ಸವದ ಕಾರ್ಯಾಧ್ಯಕ್ಷ ಚೆನ್ನಕೇಶವ ಅರಸಮಜಲ್, ರಾಘವ ನಾಯ್ಕ ಶ್ರೀ ಜಲದುರ್ಗಾ, ಪ್ರಧಾನ ಕಾರ್ಯದರ್ಶಿ ಚಿದಾನಂದ ನಾಯ್ಕ ಕುಪ್ಪೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಪ್ರದೀಪ ನಾಯ್ಕ ಆನಡ್ಕ ಹಾಗೂ ಕೃಷ್ಣಪ್ಪ ನಾಯ್ಕ ಕೋಶಾಧಿಕಾರಿ ಪುಷ್ಟಾನಂದ ನಾಯ್ಕ ಗಜಂತೋಡಿ, ಉರುವಾಲು ಮಹಮ್ಮಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ವಿನೋದ್ ನಾಯ್ಕ ಶ್ರೀ ಜಲದುರ್ಗಾ, ಉಪಾಧ್ಯಕ್ಷ ಚಿದಾನಂದ ನಾಯ್ಕ ಮತ್ರಕುಮೇರು, ಕಾರ್ಯದರ್ಶಿ ಉಮೇಶ್ ನಾಯ್ಕ 2 ಎಂಜಿರಪಲ್ಕೆ, ಉರುವಾಲು ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಸೀತಾರಾಮ ನಾಯ್ಕ, ಕೋಶಾಧಿಕಾರಿ ಹರೀಶ್ ನಾಯ್ಕ ಕುಪ್ಪೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಹೆಚ್.ಎಲ್. ಉಪಾಧ್ಯಕ್ಷ ಶೇಖರ್ ನಾಯ್ಕ ಹಲೇಜಿ, ಕಾರ್ಯದರ್ಶಿ ಕಿಶನ್ ನಾಯ್ಕ ಮಜ್ಜೆ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಆನಡ್ಕ ಸಹಿತ ಮತ್ತಿತರರು ಉಪಸ್ಥಿತರಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮ ಬಯಲಾಟ ನಡೆಯಲಿದೆ.











