24.6 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮೈಸೂರಿನಲ್ಲಿ ನಾಪತ್ತೆಯಾಗಿದ್ದ ಸ್ಕೂಟರ್ ಉಜಿರೆಯಲ್ಲಿ ಪತ್ತೆ: ಬೆಳ್ತಂಗಡಿ ಸಂಚಾರಿ ಪೊಲೀಸರಿಂದ ಸ್ಕೂಟರ್ ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರ

ಬೆಳ್ತಂಗಡಿ : ಹಣಕಾಸಿನ ವಿಚಾರದಲ್ಲಿ ಸ್ಕೂಟರ್ ವಾಹನವನ್ನು ಮೈಸೂರಿನಲ್ಲಿ ಸ್ನೇಹಿತನೊಬ್ಬ ದೇವಸ್ಥಾನ ಹೋಗಿ ಬರುವುದಾಗಿ ತೆಗೆದುಕೊಂಡು ಹೋಗಿ ವಾಪಸ್ ನೀಡದೆ ಇರುವ ಪ್ರಕರಣವನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ಪತ್ತೆ ಹಚ್ಚಿ ಮಾಲೀಕರಿಗೆ ಮರಳಿ ಸ್ಕೂಟರ್ ಹಸ್ತಾಂತರ ಮಾಡಿದ್ದಾರೆ.

ಮೈಸೂರು ಜಿಲ್ಲೆಯ ಜಯನಗರದ 16 ನೇ ಕ್ರಾಸ್ ,ಐದನೇ ಮೈನ್ ರೋಡ್ ನಿವಾಸಿ ಮಹಾದೇವ ಎಂಬವರ KA-09-JX-7275 ನಂಬರಿನ ಸ್ಕೂಟರ್ ವಾಹನವನ್ನು ಸ್ನೇಹಿತ ಮೈಸೂರು ನಿವಾಸಿ ಗಣೇಶ್ ಎಂಬವರು 3-11-2025 ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ತೆಗೆದುಕೊಂಡು ಹೋದವನು ಈವರೆಗೂ ವಾಪಸ್ ನೀಡದೆ ಇರುವುದರಿಂದ ಗಣೇಶ್ ಬಳಿಯಿರುವ ಸ್ಕೂಟರ್ ಪತ್ತೆ ಹಚ್ಚಿ ವಾಪಸ್ ನೀಡಬೇಕೆಂದು ಮೈಸೂರು ನಗರದ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ 15-01-2026 ರಂದು ತಡವಾಗಿ ಮಹಾದೇವ ಎಂಬವರು ದೂರು ನೀಡಿದ್ದರು. ಆದ್ರೆ ಪೊಲೀಸರಿಗೆ ಸ್ಕೂಟರ್ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.

ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕಿಶೋರ್.ಕುಮಾರ್.ಪಿ ಮತ್ತು ಸಿಬ್ಬಂದಿಗಳು ಮಾ.3 ರಂದು ಉಜಿರೆ ರಸ್ತೆಯಲ್ಲಿ ವಾಹನಗಳ ತಪಾಸಣೆ ವೇಳೆ ಸ್ಕೂಟರ್ ತಡೆದು ನಿಲ್ಲಿಸಿದಾಗ ಸವಾರ ಗಣೇಶ್ ಬಳಿ ಯಾವುದೇ ದಾಖಲೆ ಇಲ್ಲದೆ ಇರುವುದು ಪತ್ತೆಯಾಗಿದೆ. ಹೆಚ್ಚಿನ ವಿಚಾರಣೆಗಾಗಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸ್ಕೂಟರ್ ಸವಾರ ಗಣೇಶ್ ಎಂಬಾತನನ್ನು ವಿಚಾರಣೆ ನಡೆಸಿದಾಗ ಮೈಸೂರಿನ ಸ್ನೇಹಿತ ಮಹಾದೇವ ಜೊತೆ ಹಣದ ವ್ಯವಹಾರ ಸಂಬಂಧಿಸಿದಂತೆ ಸುಳ್ಳು ಹೇಳಿ 4 ತಿಂಗಳ ಹಿಂದೆ ಸ್ಕೂಟರ್ ತಂದು ತನ್ನ ಬಳಿ ಇಟ್ಟುಕೊಂಡಿರುವುದಾಗಿ ಗಣೇಶ್ ಒಪ್ಪಿಕೊಂಡಿದ್ದಾನೆ.ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ಮಾ.4 ರಂದು ಸ್ಕೂಟರ್ ಮಾಲೀಕ ಮೈಸೂರಿನ ಮಹಾದೇವ ಆಗಮಿಸಿ ಸ್ಕೂಟರಿನ ಸೂಕ್ತ ದಾಖಲೆ ಹಾಗೂ ದೂರಿನ ದಾಖಲೆ ಹಾಜರುಪಡಿಸಿದ ಬಳಿಕ ಮಾಲೀಕರಿಗೆ ಮರಳಿ ಸ್ಕೂಟರ್ ಹಸ್ತಾಂತರ ಮಾಡಿದರು.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ಬೆಳ್ತಂಗಡಿ ವೃತ ನಿರೀಕ್ಷಕ ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕಿಶೋರ್.ಕುಮಾರ್.ಪಿ, ಎಎಸ್ಐ ಹರಿಪ್ರಸಾದ್ ಹಾಗೂ ಸಿಬ್ಬಂದಿ ಇಬ್ರಾಹಿಂ ಗರ್ಡಾಡಿ, ಅಭಿಜಿತ್, ಸುರೇಶ್, ಡ್ಯಾನಿ ಮಡಂತ್ಯಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ತರಬೇತಿ

Suddi Udaya

ಬಡಗಕಾರಂದೂರು: ಬಾವಲಿಗುಂಡಿ ಕಿಂಡಿ ಅಣೆಕಟ್ಟು ಬಳಿ ರೂ.3 ಕೋಟಿ ವೆಚ್ಚದ ಕಾಲುವೆ ನಿರ್ಮಾಣಕ್ಕೆ ಭೂಮಿ ಪೂಜೆ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ಘಟಕದ ನೇತೃತ್ವದಲ್ಲಿ ಮಾತೃ ದೇವೋ ಭವ ಗೂಗಲ್ ಮೀಟ್ ಉಪನ್ಯಾಸ ಕಾರ್ಯಕ್ರಮ

Suddi Udaya

ಪೆರ್ಲ ಬೈಪಾಡಿ : ಶಾಸಕ ಹರೀಶ್ ಪೂಂಜರ ಗೆಲುವಿನ ಪ್ರಯುಕ್ತ ಸಿದ್ದಿವಿನಾಯಕ ದೇವಸ್ಥಾನದಲ್ಲಿ ರಂಗಪೂಜೆ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ತೆಕ್ಕಾರು ಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವಕ್ಕೆ ತಾಲೂಕಿನಿಂದ ಹೊರೆ ಕಾಣಿಕೆ; ಸಮಾಲೋಚನ ಸಭೆ

Suddi Udaya
error: Content is protected !!