25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಭಕ್ತಿ ಪಾರಮ್ಯಕ್ಕೆ ಅಣಿಯಾದ ಮಲೆಂಗಲ್ಲು ಬ್ರಹ್ಮಕಲಶೋತ್ಸವ

ಬೆಳ್ತಂಗಡಿ: 500 ಅಡಿ ಎತ್ತರದಲ್ಲಿರುವ ಏಕ ಶಿಲೆಯ ಮೇಲೆ ಶಿವ ಪಾರ್ವತಿ ಜೊತೆಯಾಗಿ ನೆಲೆಸಿರುವ ತಾಲೂಕಿನ ಪದ್ಮುಂಜದ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಅದ್ಧೂರಿಯಿಂದ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾರ್ಗದರ್ಶನ ದೊಂದಿಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿಜೃಂಭಣೆಯಿಂದ ನಡೆದ ಬ್ರಹ್ಮಕಲಶೋತ್ಸವಕ್ಕೆ ಮಾ.6 ರಂದು ತೆರೆಬಿರುವುದರೊಂದಿಗೆ
ಭಕ್ತಿ ಪಾರಮ್ಯಕ್ಕೆ ಮಲೆಂಗಲ್ಲು ಬ್ರಹ್ಮಕಲಶೋತ್ಸವ ಸಾಕ್ಷಿಯಾಗಿದೆ.

ಬ್ರಹ್ಮಕಲಶೋತ್ಸವ:
ಮಾ.5ರಂದು ಬ್ರಹ್ಮಕಲಶ ಪೂಜೆ, ಪರಿಕಲ ಪೂಜೆ, ಭಜನಾ ಕಾರ್ಯಕ್ರಮ, ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಹಾಗೂ ಛತ್ರಪತಿ ಶಿವಾಜಿ ನಾಟಕ ಪ್ರರ್ದನಗೊಂಡಿತು. ಮಾ. ೬ರಂದು ಬೆಳಿಗ್ಗೆ ೫ರಿಂದ ಮಹಾಗಣಪತಿ ಹೋಮ, ಗಂಟೆ ೧೦-೪೪ ರಿಂದ ೧೧-೫೦ ವರೆಗೆ ನಡೆಯುವ ವೃಷಭ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠೆ ಮಧ್ಯಾಹ್ನ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ರಾತ್ರಿ ಶ್ರೀದೇವರಿಗೆ ಮಹಾರಂಗಪೂಜೆ ಹಾಗೂ ಪಿಲಿಚಾಮುಂಡಿ ದೈವದ ನರ್ತನ ಸೇವೆ ನಡೆಯಿತು. ಪುತ್ತೂರು ವಿದ್ಯಾಲಕ್ಷ್ಮಿ ಬಳಗದಿಂದ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕೊಡಿಕಲ್ ಮಕ್ಕಳ ಮೇಳದಿಂದ ಶಿವಲೀಲಾರ್ಣವ ಯಕ್ಷಗಾನ, ಉಪ್ಪಿನಂಗಡಿ ಸುಸ್ವರ ಮೆಲೋಡಿಸ್‌ನಿಂದ ಭಕ್ತಿ ಭಾವ ಗಾನಸಂಗಮ, ಅಡೆಂಜ ಅಂಗನವಾಡಿ ಪುಟಾಣಿಗಳಿಂದ ಚಿಣ್ಣರಚಿಲಿಪಿಲಿ, ಕಲ್ಲಡ್ಕ ವಿಠಲ್ ನಾಯಕ್ ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ಹಾಗೂ ಬೈಂದೂರು ಚೈತನ್ಯ ಕಲಾವಿದರಿಂದ ರಾಘು ಮಾಸ್ಟ್ರು ನಾಟಕ ಮೈಮನ ಸೆಳೆಯಿತು.

ಸಂಭ್ರಮ ಮನೆ ಮಾಡಿತ್ತು:
ಕಳೆದ ಮಾ.೧ ರಿಂದ ೬ ರವರೆಗೆ ಪದ್ಮುಂಜದಲ್ಲಿ ಬ್ರಹ್ಮಕಲಶೋತ್ಸವದ ಕಳೆ ತುಂಬಿತ್ತು. ನಾಡಿನ ಏಕೈಕ ಏಕಶಿಲಾ ಶಿವ-ಪಾರ್ವತಿಯರನ್ನು ದರ್ಶನಕ್ಕಾಗಿ ಸಾವಿರಾರೂ ಭಕ್ತರು ಕ್ಷೇತ್ರಕ್ಕೆ ದಿನಂಪ್ರತಿ ಆಗಮಿಸಿದರು. ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು, ದೀಪಾಲಂಕರ, ನಗರದಲಂಕಾರದಿಂದ ಭಕ್ತರನ್ನು ಕ್ಷೇತ್ರ ಬರಸೆಳೆಯುತ್ತಿತ್ತು. ಅನ್ನಛತ್ರದಲ್ಲಿ ಉತ್ತಮ ವ್ಯವಸ್ಥೆ ಮಾಡಲಾಗಿತ್ತು ಸಾವಿರಾರೂ ಮಂದಿ ಅನ್ನಪ್ರಾಸದ ಸ್ವೀಕರಿಸಿದರು. ಕ್ಷೇತ್ರದ ಪ್ರತಿಯೊಂದು ಕಾರ್ಯದಲ್ಲಿ ಸ್ವಯಂ ಸೇವಕರು ಅಚ್ಚಕಟ್ಟಾದ ವ್ಯವಸ್ಥೆಯಿಂದ ಆರು ದಿನಗಳ ಉತ್ಸವ ವಿಜ್ರಭೃಣೆಯಿಂದ ನಡೆದಿದೆ.

ಆಕರ್ಷಿಸಣೀಯ ಸ್ಥಳ:
“ಮಲೆ” ಎಂದರೆ ಕಾಡು, ಈ ಕಾನನದ ನಡುವೆವಿರುವ ನಂದಿ ಆಕಾರದ ಕಲ್ಲಿನ ಮೇಲೆ ಉಮಾಮಹೇಶ್ವರ ದೇಗುಲವಿದೆ. ಹೀಗಾಗಿ ಇಲ್ಲಿಗೆ ಮಲೆಂಗಲ್ಲು ಹೆಸರು ಬಂದಿದೆ. 500 ಅಡಿ ಎತ್ತರದಲ್ಲಿರುವ ಈ ಪುಣ್ಯಕ್ಷೇತ್ರಕ್ಕೆ ಬಂದು ಸುತ್ತಲು ಕಣ್ಣು ಹಾಯಿಸಿದರೆ ಸುತ್ತಲು ಹಚ್ಚಹಸಿರಿನಿಂದ ಕೂಡಿರುವ ಪ್ರಕೃತಿಯ ಸಿರಿ ಕಣ್ಣಿಗೆ ಮೊದ, ಮನಸ್ಸಿಗೆ ಹಿತ ನೀಡುತ್ತದೆ. ಈ ಪುಣ್ಯ ಕ್ಷೇತ್ರವು ತನ್ನ ಮಹಿಮೆಯೊಂದಿಗೆ ಭಕ್ತರನ್ನು ಸಲಹುವುದರೊಂದಿಗೆ ಪ್ರವಾಸಿತಾಣವಾಗಿ ಆಕರ್ಷಿಸುತ್ತಿದ್ದು ಸರಕಾರ ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಮತಷ್ಟು ಅಭಿವೃದ್ಧಿ ಕಾರ್ಯ ನಡೆಸಿದಲ್ಲಿ ನಾಡಿನ ಅತೀ ಸುಂದರ ದೇಗುಲವಾಗುವ ಎಲ್ಲ ಲಕ್ಷಣಗಳನ್ನು ಈ ಕ್ಷೇತ್ರವು ಹೊಂದಿದೆ

ಅನುವAಶೀಯ ಮೊತ್ತೇಸರರು ಚಿದಾನಂದ ರಾವ್ ಕೊಲ್ಲಾಜೆ, ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಮೇಲಾಂಟ ಮೊಗರೋಡಿ, ಜಿರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಶಂಕರ್ ನಾಯಕ್ ಮಾರುತಿಪುರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ ಕೊಲ್ಲೊಟ್ಟು, ಸಂಚಾಲಕ ಹರ್ಷ ಮೇಲಾಂಟ, ಆಡಳಿತ ಮಂಡಳಿ ಕಾರ್ಯದರ್ಶಿ ಜಿತೇಶ್ ಜೈನ್ ಅಡೆಂಜ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಪ್ರಫುಲ್ಲಚಂದ್ರ ಅಡ್ಯಂತಾಯ ಮೊಗರೋಡಿ, ಆಡಳಿತ ಮಂಡಳಿ ಕೋಶಾಧಿಕಾರಿ ರಕ್ಷಿತ್ ಪಣೆಕರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಗೌಡ ಮುಚ್ಚೂರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಮಲೆಂಗಲ್ಲು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ರಘುಪತಿ ಭಟ್ ಮತ್ತು ಧನ್ಯ ಕುಮಾರ್ ಪದ್ಮುಂಜ, ಕೋಶಾಧಿಕಾರಿ ಉದಯ ಕುಮಾರ್ ಮೇಲಾಂಟ, ಪ್ರಧಾನ ಅರ್ಚಕ ವಿಜಯ ಕುಮಾರ್ ಭಟ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.

Related posts

ನಿಡ್ಲೆ : ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ

Suddi Udaya

ದಂತ ವೈದ್ಯಕೀಯದಲ್ಲಿ ಅತ್ಯುತ್ತಮ ಸಾಧನೆ ತೋರಿದ ಬೆಳ್ತಂಗಡಿಯ ಹಮ್ನಾ ಜಝೀಲಾ

Suddi Udaya

ನಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜಯಲಕ್ಷ್ಮಿಗೆ ಶ್ರದ್ಧಾಂಜಲಿ ಸಮರ್ಪಣೆ

Suddi Udaya

ವೇಣೂರಿನ ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ನಿರ್ಮಲ ಚಿತ್ತ ಲಹರಿ’ ಕವನ ಸಂಕಲನ ಬಿಡುಗಡೆ

Suddi Udaya

ಫ್ರೆಂಡ್ಸ್ ಬದ್ಯಾರು ತಂಡ ಸದಸ್ಯರಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರಾಜೇಶ್ ರವರಿಗೆ ಧನಸಹಾಯ

Suddi Udaya

ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ: ಬೆಳ್ತಂಗಡಿಯ ಸುಬ್ರಹ್ಮಣ್ಯ ಶಾಸ್ತ್ರಿ ಸಹಿತ ಮೂವರನ್ನು ಬಂಧಿಸಿದ ಬೆಂಗಳೂರು ಸಿಸಿಬಿ ಪೊಲೀಸರು

Suddi Udaya
error: Content is protected !!