22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಮಡಂತ್ಯಾರು ವಲಯ ಮಚ್ಚಿನ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರು ಪ್ರಕಾಶ್ ನಾಯ್ಕ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಕಾರ್ಯಕ್ರಮ ಉದ್ಘಾಟಿಸಿ ವಿಶ್ವ ಸಂಸ್ಥೆ ಗುರುತಿಸಿದ ಆರು ಮಾರಕ ಕಾಯಿಲೆಗಳಲ್ಲಿ ಮಾದಕ ಚಟವು ಕೂಡ ಒಂದು. ಯಾವುದೇ ಚಟಗಳು ಮಿತಿ ಮೀರಿದಾಗ ಅದಕ್ಕೆ ಮನಸ್ಸು ಹೊಂದಿಕೊಳ್ಳುತ್ತದೆ .ಇಡೀ ಪ್ರಪಂಚದಲ್ಲಿ ಒಂದನೆಯ ಸೈಲೆಂಟ್ ಕಿಲ್ಲರ್ ಧೂಮಪಾನ ,ಎರಡನೆಯದ್ದು ಮದ್ಯಪಾನ ಹಾಗಾಗಿ ವಿದ್ಯಾರ್ಥಿಗಳು ಇಂಥಹ ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಕಲಿಕೆಯ ಜೊತೆಗೆ ಜೀವನದ ಪಾಠದಲ್ಲಿ ಕೂಡ ಉತ್ತೀರ್ಣರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜನಜಾಗೃತಿ ತಾಲ್ಲೂಕಿನ ಸಮಿತಿ ಸದಸ್ಯರಾದ ಗೋಪಾಲ್ ಕೊಲಾಜೆ, ವಲಯ ಅಧ್ಯಕ್ಷ ಜಯ ಪೂಜಾರಿ, ಮಚ್ಚಿನ ಸತ್ಯ ನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಹರ್ಷ ಬಳ್ಳಮಂಜ, ಮಚ್ಚಿನ ಸೇವಾಪ್ರತಿನಿಧಿ ಪರಮೇಶ್ವರ್, ಕುದ್ರಡ್ಕ ಸೇವಾಪ್ರತಿನಿಧಿ ಶ್ರೀಮತಿ ನಂದಿನಿ, ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಭಾಗವಹಿಸಿದ್ದರು.

Related posts

ಕನ್ಯಾಡಿ: ಗುರಿಪಳ್ಳ ಪ್ರವೀಣ್ ರೋಡ್ರಿಗಸ್ ರವರ ಮನೆಯ ಮೇಲೆ ಅಬಕಾರಿ ದಾಳಿ: 18 ಲೀ. ಕಳ್ಳಬಟ್ಟಿ ಸಾರಾಯಿ ವಶ

Suddi Udaya

ಪುಂಜಾಲಕಟ್ಟೆ ಕೆ.ಪಿ.ಎಸ್ ಸರಕಾರಿ ಪ.ಪೂ. ಕಾಲೇಜು ವಾರ್ಷಿಕೋತ್ಸವ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರ ಭಾರತಿ ಅಭ್ಯರ್ಥಿಗಳ ಆಯ್ಕೆ

Suddi Udaya

ಕಳಿಯ : ಧಾರಕಾರ ಮಳೆಗೆ ಮನೆಯ ತಡೆ ಗೋಡೆ ಕುಸಿತ

Suddi Udaya

ಬೆಳ್ತಂಗಡಿ ಮಾತೃಶ್ರೀ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಪ್ಲ್ಯಾಟ್, ಶೇ.10 ಡಿಸ್ಕೌಂಟ್ ಸೇಲ್

Suddi Udaya

ಹೋಲಿ ರೆಡಿಮರ್ ಚರ್ಚ್ ನಲ್ಲಿ ಪವಿತ್ರ ಗುರುವಾರ, ಶುಭ ಶುಕ್ರವಾರ ಹಾಗೂ ಈಸ್ಟರ್ ಹಬ್ಬದ ಆಚರಣೆ

Suddi Udaya
error: Content is protected !!