September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿವರದಿ

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್‌ನಲ್ಲಿ ತೆನೆ ಹಬ್ಬ: ಬೆಳ್ತಂಗಡಿ ನಗರದಲ್ಲಿ ಸಂಭ್ರಮದ ಮೆರವಣಿಗೆ

ಬೆಳ್ತಂಗಡಿ: ಏಸು ಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನವಾದ ಸೆ.8 ರಂದು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನಲ್ಲಿ ಮೊಂತಿ ಫೆಸ್ತ್(ತೆನೆ ಹಬ್ಬ)ವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.


ಬೆಳ್ತಂಗಡಿ ಬಸ್‌ನಿಲ್ದಾಣದ ಬಳಿ ಚರ್ಚ್‌ನ ಧರ್ಮಗುರುಗಳಾದ ರೆ|ಫಾ ವಾಲ್ಟರ್ ಡಿ’ಮೊಲ್ಲೋ ನೇತೃತ್ವದಲ್ಲಿ ಭತ್ತದ ತೆನೆಗಳಿಗೆ ವಿಶೇಷ ಪೂಜೆ ನಡೆಯಿತು. ನಂತರ ಅಲ್ಲಿಂದ ಅಲಂಕೃತ ವಾಹನದಲ್ಲಿ ಬೆಳ್ತಂಗಡಿ ಮುಖ್ಯ ಪೇಟೆಯ ಮೂಲಕ ಚರ್ಚ್ ರೋಡಿಗಾಗಿ ತೆನೆಯನ್ನು ಮೆರವಣಿಗೆ ಮೂಲಕ ಚರ್ಚ್‌ಗೆ ತರಲಾಯಿತು. ಚರ್ಚ್‌ನಲ್ಲಿ ಹಬ್ಬದ ಬಲಿ ಪೂಜೆ ನಡೆದು ಧರ್ಮಗುರುಗಳು ಹೊಸ ತೆನೆಯ ಆಶೀರ್ವಚನ ನೆರವೇರಿಸಿದರು.

ಬಳಿಕ ಪ್ರತಿಯೊಬ್ಬರ ಮನೆಗೂ ಭತ್ತದ ತೆನೆಗಳನ್ನು ವಿತರಿಸಲಾಯಿತು. ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಂಧುಗಳು, ಚರ್ಚ್ ಆಡಳಿತ ಮಂಡಳಿಯ ಸದಸ್ಯರು, ಮಕ್ಕಳು, ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹಬ್ಬದ ಪೂರ್ವಭಾವಿಯಾಗಿ ಒಂಭತ್ತು ದಿನಗಳ ಕಾಲ ನಡೆದ ನೊವೆನಾ ಪ್ರಾರ್ಥನೆಯಲ್ಲಿ ಮಕ್ಕಳು ಪ್ರತಿದಿನ ಮನೆಗಳಿಂದ ಹೂವುಗಳನ್ನು ಕೊಂಡೊಯ್ದು ಅರ್ಪಿಸಿರುವುದು ವಿಶೇಷವಾಗಿದೆ.

Related posts

ಪಟ್ರಮೆ ಒಕ್ಕೂಟದ ವತಿಯಿಂದ ಪಟ್ರಮೆ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

Suddi Udaya

ಜು.7: ಧರ್ಮಸ್ಥಳದಲ್ಲಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ : ಅಜಿಕುರಿಯಲ್ಲಿ ಹೆಜ್ಜೇನು ದಾಳಿ: ಹಲವರಿಗೆ ಗಾಯ ಆಸ್ಪತ್ರೆಗೆ ದಾಖಲು

Suddi Udaya

ಸೇನೆಗೆ ಆಯ್ಕೆಯಾದ ರಂಜಿತ್ ಪೂಜಾರಿಯವರಿಗೆ ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯಿಂದ ಸನ್ಮಾನ

Suddi Udaya

ಸೌಜನ್ಯ ಪ್ರಕರಣವನ್ನು ಮರು ತನಿಖೆ ಒಳಪಡಿಸುವಂತೆ ದ.ಕ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

Suddi Udaya

ನಿಡ್ಲೆ ಹಾಗೂ ಪಟ್ರಮೆಯಲ್ಲಿ ಕಾಡಾನೆ ಪ್ರತ್ಯಕ್ಷ

Suddi Udaya
error: Content is protected !!