March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಬೈಕ್ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ : ಪಶ್ಚಿಮ ಬಂಗಾಳದ ದಾಖಲೆಗಳಿಲ್ಲದ ಬೈಕ್ ಅನ್ನು ಖರೀದಿಸಿ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಚಲಾಯಿಸುತ್ತಿದ್ದ ಬೈಕ್ ಹಾಗೂ ಸವಾರನನ್ನು ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಪತ್ತೆಹಚ್ಚಿದ್ದು, ಹೆಚ್ಚಿನ ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಪ್ರಕರಣ ದಾಖಲಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ಶೇಕುಂಞ ಮಗನಾದ ನವಾಜ್ (19) ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಅನ್ನು ಮಾ.5 ರಂದು ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿ ಬೆಳ್ತಂಗಡಿ ಸಂಚಾರಿ ಸಬ್ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಪಿ ಮತ್ತು ಸಿಬ್ಬಂದಿ ಶಿವಾನಂದ ಎಂಬವರು ತಡೆದು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದಾಗ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೈಕ್ ಅನ್ನು ಉಪಯೋಗಿಸುತ್ತಿರುವುದು ಬಹಿರಂಗಗೊಂಡಿದೆ.

ಹೆಲ್ಮೆಟ್ ಧರಿಸದೆ ಗುರುವಾಯನಕೆರೆ ಕಡೆಯಿಂದ ಬಂದ CRT9988 ನಂಬರ್ RX 100 ಬೈಕ್ ನಲ್ಲಿ ಬಂದ ಯುವಕನನ್ನು ಪರಿಶೀಲಿಸಿದಾಗ ಬೈಕ್ ನಂಬರ್ ಹಾಗೂ ಆತ ನೀಡಿರುವ ದಾಖಲೆಗಳು ಹೊಂದಾಣಿಕೆಯಾಗದೆ ಇದ್ದು ಚಾಸಿಸ್ ನಂಬರ್ ಮತ್ತು ಇಂಜಿನ್ ನಂಬರ್ ಪರಿಶೀಲಿಸಿದಾಗ ಅದು ಹಾಗೂ ಆರ್.ಸಿ ಬುಕ್ ನಲ್ಲಿರುವ ದಾಖಲೆಗಳು ಸರಿಯಾಗಿಲ್ಲದಿರುವುದು ಕಂಡು ಬಂದಿದೆ.

ಈ ಬಗ್ಗೆ ಹೆಚ್ಚಿನ ವಿಚಾರಿಸಿದಾಗ ಬೈಕ್ ಸವಾರನ ಬೈಕ್ ಪಶ್ಚಿಮ ಬಂಗಾಳ ರಾಜ್ಯದ್ದಾಗಿದ್ದು ನಿಜವಾದ ನೋಂದಣಿ ಸಂಖ್ಯೆ WB 26 B2463 ಆಗಿರುತ್ತದೆ. ಬೈಕ್ ನ ಎಫ್.ಸಿ ಮುಗಿದಿರುವ ಕಾರಣ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಅದರಂತೆ ಫೇಸ್ ಬುಕ್ ನಲ್ಲಿ ಬಂದ ಜಾಹೀರಾತನ್ನು ನೋಡಿ ಅದಕ್ಕೆ ಆನ್ ಲೈನ್ ನಲ್ಲಿ ಹಣವನ್ನು ಪಾವತಿಸಿ CRT9988 ನೋದಣಿ ನಂಬರ್ ಹಾಗೂ ದಾಖಲೆಗಳನ್ನು ಖರೀದಿಸಿರುವುದಾಗಿಯೂ ಅದನ್ನು ಈ ಬೈಕ್ ಗೆ ಅಳವಡಿಸಿರುವುದಾಗಿಯೂ ತಿಳಿಸಿದ್ದಾನೆ.

ಈ ಹಿನ್ನಲೆಯಲ್ಲಿ ಯುವಕನ್ನು ಹಾಗೂ ಬೈಕ್ ಅನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಸಬ್ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಪಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಬೈಕ್ ಹೇಗೆ ಇಲ್ಲಿ ಬಂದಿದೆ ಹಾಗೂ ನಕಲಿ ನಂಬರ್ ಪ್ಲೇಟ್ ಹಾಗೂ ದಾಖಲೆ ತಯಾರಿಸುವ ವ್ಯಕ್ತಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿ೦ದ ರಾಜ್ಯ ಮಹಿಳಾಗೋಷ್ಠಿ

Suddi Udaya

ರುಡ್ ಸೆಟ್ ಸಂಸ್ಥೆಯಲ್ಲಿ ರೆಫ್ರಿಜರೇಷನ್ ಮತ್ತು ಏರ್‌ ಕಂಡೀಷನಿಂಗ್ ತರಬೇತಿ ಸಮಾರೋಪ

Suddi Udaya

ಕೊಕ್ಕಡ: ಎಂಡೋ ಪೀಡಿತ ವಿಶೇಷ ಚೇತನರಿಗೆ ಉಚಿತ ಬಸ್ ಪಾಸ್ ವಿತರಣೆ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿಯ ಷಷ್ಠಿ ಮಹೋತ್ಸವ: ಸ್ವರ್ಣ ಅಟ್ಟೆ ಪ್ರಭಾವಳಿ ಸಮರ್ಪಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಬಹುಮಾನ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ವತಿಯಿಂದ “ವೈದ್ಯರೊಂದಿಗೆ ಸಂವಾದ” ಕಾರ್ಯಕ್ರಮ

Suddi Udaya
error: Content is protected !!