September 6, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕೊಕ್ಕಡ: ಎಂಡೋ ಪೀಡಿತ ವಿಶೇಷ ಚೇತನರಿಗೆ ಉಚಿತ ಬಸ್ ಪಾಸ್ ವಿತರಣೆ

ಕೊಕ್ಕಡ: ಕೊಕ್ಕಡ ವ್ಯಾಪ್ತಿಯಲ್ಲಿನ ಹಾಗೂ ತಾಲೂಕಿನ ಇತರ ಭಾಗಗಳ ಎಂಡೋಸಲ್ಫಾನ್ ಸಂತ್ರಸ್ತ ವಿಶೇಷ ಚೇತನರಿಗೆ ಸರ್ಕಾರದಿಂದ ನೀಡುವ ಉಚಿತ ಬಸ್ ಪಾಸನ್ನು ವಿತರಣಾ ಶಿಬಿರವು ಆ.9ರಂದು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಈ ಶಿಬಿರದಲ್ಲಿ ತಾಲೂಕಿನ 170 ಜನ ಎಂಡೋ ಪೀಡಿತ ವಿಶೇಷ ಚೇತನರು ತಮ್ಮ ಉಚಿತ ಪಾಸನ್ನು ನವೀಕರಣ ಮಾಡಿಸಿ ಪ್ರಯೋಜನ ಪಡೆದುಕೊಂಡರು. ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಲು ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಹತ್ತು ಜನ ಕಾರ್ಯಕರ್ತ ಸಿಬ್ಬಂದಿಯವರು ಸಹಕಾರ ನೀಡಿ ನಡೆಸುವುದರೊಂದಿಗೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಯ 3 ಜನ ಸಿಬ್ಬಂದಿಯವರು ಇದ್ಧು ಉಚಿತ ಬಸ್ ಪಾಸ್ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವೈಧ್ಯಾಧಿಕಾರಿ ಕಛೇರಿಯ ಡಾ| ನವೀನ್ ಕುಲಾಲ್ ರವರು ಹಾಗೂ ಜಿಲ್ಲಾ ಎಂಡೋ ಸೆಲ್ ನ ನೋಡಲ್ ಅಧಿಕಾರಿ ಸಾಜು, ತಾಲೂಕಿನ ವಿಶೇಷ ಚೇತನರ ಮೇಲ್ವಿಚಾರಕ ಜೋನ್ ಬ್ಯಾಪ್ಟಿಸ್ಟ್, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳಾದ ರಕ್ಷಿತ್, ಸೋಮನಾಥ್ ಉಪಸ್ಥಿತರಿದ್ದರು.

ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಸಂಪೂರ್ಣ ಸಹಕಾರದಿಂದ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು…

Related posts

ಅಳದಂಗಡಿ ಪೇಟೆಯಲ್ಲಿ ಶಾಸಕ ಹರೀಶ್ ಪೂಂಜರವರಿಂದ ಮತಯಾಚನೆ

Suddi Udaya

ಸೆ.28: ಬಳಂಜದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ ಸಾರ್ವಜನಿಕ ಶ್ರೀ ಶಾರದೋತ್ಸವ

Suddi Udaya

ಪದ್ಮುಂಜ ಸಿಎ ಬ್ಯಾಂಕ್ ಸಿಬ್ಬಂದಿ ಚಿದಾನಂದ ಗೌಡ ನಿಧನ

Suddi Udaya

ದ.ಕ.ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಜೊತೆ ರಕ್ಷಾ ಸಮಿತಿ ಸದಸ್ಯರಿಂದ ಸಮಿತಿ ಸಭೆ ಹಾಗೂ ರೋಗಿಗಳ ಭೇಟಿ

Suddi Udaya

ಸಿಯೋನ್ ಆಶ್ರಮದಲ್ಲಿ ಸಂಭ್ರಮದ ಓಣಂ ಆಚರಣೆ

Suddi Udaya

ಬೆಳ್ತಂಗಡಿ: ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!