ಬೆಳ್ತಂಗಡಿ: ಗ್ರಾಮೀಣ ನಿವೇಶನ ಯೋಜನೆಯಡಿ ನಡ ಹಾಗೂ ಕನ್ಯಾಡಿ ಗ್ರಾಮದ ವ್ಯಾಪ್ತಿಯ ಸ.ನಂ.126/ಬಿ ರಲ್ಲಿ ರಚಿಸಲಾದ ನಿವೇಶನಗಳಿಗೆ ನಡ ಗ್ರಾ.ಪಂ. ಆಯ್ಕೆಗೊಳಿಸಿದ್ದ ಅರ್ಹ 34 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಶಾಸಕ ಹರೀಶ್ ಪೂಂಜರು ಮಾ.7ರಂದು ತಾಲೂಕು ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ವಿತರಿಸಿದರು.

ಸ್ವಂತ ನಿವೇಶನದ ಕನಸನ್ನು ನನಸು ಮಾಡಿಕೊಂಡ ಫಲಾನುಭವಿಗಳ ಸಂತೋಷವು ಈ ಸಂದರ್ಭದಲ್ಲಿ ಗಮನ ಸೆಳೆಯಿತು. ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಶ್ರಮಿಸಿದ ನಡ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಸಂಬಂಧಿತ ಅಧಿಕಾರಿಗಳ ಕಾರ್ಯವನ್ನು ಶಾಸಕರು ಈ ಸಂದರ್ಭದಲ್ಲಿ ಶ್ಲಾಘಿಸಿದರು.











