35.1 C
ಪುತ್ತೂರು, ಬೆಳ್ತಂಗಡಿ
March 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಮಾ 11: ಉಜಿರೆ ಬ್ರಹ್ಮಕಲಶೋತ್ಸವ: “ಧರ್ಮಯಾನ “ಐತಿಹಾಸಿಕ ಶೋಭಾಯಾತ್ರೆ-ಪ್ರಚಾರ ವಾಹನ ಅಭಿಯಾನಕ್ಕೆ ಚಾಲನೆ

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸು ಸಂದರ್ಭದಲ್ಲಿ ಮಾ 11 ರಂದು ಸಂಜೆ ಉಜಿರೆಯ ಐತಿಹಾಸಿಕ ಶೋಭಾಯಾತ್ರೆ “ಧರ್ಮಯಾನ ” ನಡೆಯಲಿದ್ದು ಅದರ ಪ್ರಚಾರವಾಹನ ಅಭಿಯಾನಕ್ಕೆ ಮಾ 7 ರಂದು ಮದ್ಯಾಹ್ನ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಶುಭ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್,ವಿಜಯಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ, ಧರ್ಮಯಾನ ಶೋಭಾಯಾತ್ರೆಯ ಸಂಯೋಜಕ, ಪ್ರಧಾನ ಸಂಚಾಲಕ ಕೆ. ಮೋಹನ ಕುಮಾರ್ ,ಕೆ.ಮೋಹನ ಶೆಟ್ಟಿಗಾರ್, ರವೀಂದ್ರ ಶೆಟ್ಟಿ ಸುರಭಿ, ಚಿತ್ರೇಶ್ ಶೆಟ್ಟಿ, ರವಿಕುಮಾರ್ ಬರಮೇಲು , ಡಾ. ಶ್ರೀಧರ ಭಟ್, ಮಂಜುನಾಥ ಕಾಮತ್, ಪ್ರಸಾದ್ ಬಿ ಎಸ್, ದಿನೇಶ್ ಕೋಟಿಯಾನ್, ವಿಶ್ವನಾಥ್ ಶೆಟ್ಟಿ, ದೇವಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಧರ್ಮದ ನೆಲೆಬೀಡು ಧರ್ಮಸ್ಥಳದ ಧರ್ಮಾಧಿಕಾರಿ ಡಾ!ಡಿ ವೀರೇಂದ್ರ ಹೆಗ್ಗಡೆಯವರು ಧರ್ಮದೇವತೆಗಳ ಪ್ರತಿನಿಧಿಯಾಗಿ ಉಜಿರೆ ಶ್ರೀ ಜನಾರ್ದನ ಕ್ಷೇತ್ರಕ್ಕೆ ಬ್ರಹ್ಮಕಲಶೋತ್ಸವದ ಸಂಭ್ರಮದ ಸುದಿನದಂದು ಉಜಿರೆಗೆ ಆಗಮಿಸುವ ಸಂದರ್ಭದಲ್ಲಿ ಧರ್ಮಯಾತ್ರೆ ಉಜಿರೆಯ ಭಕ್ತರ ಪಾಲಿಗೆ ಅಧ್ಯಾತ್ಮ ಯಾತ್ರೆ ಅವಿಸ್ಮರಣೀಯ ಮಧುರ ಕ್ಷಣವಾಗಲಿದೆ. ಧರ್ಮಸ್ಥಳಕ್ಕೂ ಉಜಿರೆಗೂ ಇರುವ ಅವಿನಾಭಾವ ಸಂಬಂಧವನ್ನು ಬೆಸೆಯುವ ಮತ್ತೊಂದು ಮಹಾಪರ್ವವಾಗಲಿದೆ. ನೂತನ ರಥದಲ್ಲಿ ಉಭಯ ದೇವರ ಬ್ರಹ್ಮರಥೋತ್ಸವವನ್ನು ಸಹಸ್ರ ಸಹಸ್ರ ಭಕ್ತಾದಿಗಳು ಕಣ್ತುಂಬಿಕೊಳ್ಳುವ ಅಪೂರ್ವ ಕ್ಷಣಕ್ಕಾಗಿ ಕಾತುರರಾಗಿದ್ದಾರೆ. ಮಾ 11 ರಂದು ಅಪರಾಹ್ನ ೪ರಿಂದ ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಶ್ರೀ ಜನಾರ್ದನ ದೇವಸ್ಥಾನದ ವರೆಗೆ ನಡೆಯಲಿರುವ ಧರ್ಮಯಾನ ಶೋಭಾಯಾತ್ರೆಯಲ್ಲಿ ಸರ್ವಾಲಂಕೃತ ಮೂರು ರಥಗಳಲ್ಲಿ ಧರ್ಮಾಧಿಕಾರಿ ಡಾ!ಡಿ.ವೀರೇಂದ್ರ ಹೆಗ್ಗಡೆಯವರು, ಉಡುಪಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಗಳವರು , ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ಹಾಗು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರನ್ನು ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಗುವುದು. ಧರ್ಮಯಾನ ಶೋಭಾಯಾತ್ರೆಯಲ್ಲಿ ಸಾವಿರಕ್ಕೂ ಮಿಕ್ಕಿ ಶ್ರೇಷ್ಠ ಕಲಾವಿದರನ್ನೊಳಗೊಂಡ, 25 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಳ್ಳುವಿಕೆ ನಿರೀಕ್ಷೆಯಿದೆ.

ಗ್ರಾಮಾಭಿವೃದ್ಧಿಯೋಜನೆಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್ ಮತ್ತು ಶಶಿಧರ್ ಶೆಟ್ಟಿ ನವಶಕ್ತಿ ಹಾಗು ಎಸ್ ಡಿ ಎಂ ಶಿ ಕ್ಷ ಣ ಸಂಸ್ಥೆಯ ಕಾರ್ಯದರ್ಶಿ ಡಾ!ಸತೀಶ್ಚಂದ್ರ ಎಸ್. ಅವರ ಸಹಕಾರದೊಂದಿಗೆ ನಡೆಯಲಿದ್ದು ಸಮಸ್ತ ಭಕ್ತಾದಿಗಳು ಸಂಭ್ರಮದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Related posts

ಉಜಿರೆ ಮೈಸೂರು ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಪ್ರತಿ ರೂ 1 ಸಾವಿರ ಖರೀದಿಯೊಂದಿಗೆ ಆಕರ್ಷಕ ಗಿಪ್ಟ್

Suddi Udaya

ಗುರುವಾಯನಕೆರೆ ಗೆಳೆಯರ ಬಳಗದ 34 ನೇ ವಷ೯ದ ಸಾರ್ವಜನಿಕ ಶ್ರೀ ಶಾರಾದೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ.

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

Suddi Udaya

ಬಳಂಜ ಬೀಳುವ ಹಂತದಲ್ಲಿದ್ದ ಮನೆಯನ್ನು ಸರಿಪಡಿಸಿದ ಗ್ರಾಮಸ್ಥರು, ಸತೀಶ್ ದೇವಾಡಿಗರ ಸೇವಾ ಮನೋಭಾವ ಶ್ಲಾಘನೀಯ

Suddi Udaya

ಬೆಳಾಲು: ಮಾಚಾರು ನಿವಾಸಿ ಸುಂದರ ಮಡಿವಾಳ ನಿಧನ

Suddi Udaya

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಮುಂಡಾಜೆ ಪ.ಪೂ. ಕಾಲೇಜು ವಿದ್ಯಾರ್ಥಿ ಕೆ.ಎನ್. ಧನುಷ್ ಆಯ್ಕೆ

Suddi Udaya
error: Content is protected !!