ನಾವೂರು: ತೋಟದ ಮನೆಗೆ ಸೋಲಾರ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಸುಮಾರು ರೂ.1 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದ ಘಟನೆ ನಾವೂರು ಗ್ರಾಮದಲ್ಲಿ ಮಾ.7ರಂದು ನಡೆದಿದೆ.
ನಾವೂರು ಗ್ರಾಮದ ನಿಂರ್ದಿ ಪುಣ್ಕೆತ್ತಾರು ಮಹೇಂದ್ರ ಎಂ. ರಾವ್ ಎಂಬವರ ತೋಟದ ಮನೆಗೆ ಸೋಲಾರ್ ಸರ್ಕ್ಯೂಟ್‌ನಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಲ್ಯಾಪ್‌ಟಾಪ್, ಮಿಕ್ಸಿ, ಪುಸ್ತಕ, ಬಟ್ಟೆ ಪಾತ್ರೆಗಳು ಮತ್ತು ಮೆಷಿನ್ ವಸ್ತುಗಳು ಸುಟ್ಟು ಅಪಾರ ನಷ್ಟ ಸಂಭವಿಸಿದೆ.













