September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ “ಮಿನಿಬ್ರಿಡ್ಜ್ ಮಾಸ್ಟರ್ ” ತಾಂತ್ರಿಕ ಸ್ಪರ್ಧೆ

ಉಜಿರೆ : ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪೂಜ್ಯ ಡಾ. ಡಿ . ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯ ಒದಗಿಸುವ ಉದ್ದೇಶದಿಂದ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂಜಿನೀಯರ್ಸ್ ಡೇ ಪ್ರಯುಕ್ತ ಸಿವಿಲ್ ಇಂಜಿನಿಯರಿಂಗ್ ವಿಭಾಗದಿಂದ “ಮಿನಿಬ್ರಿಡ್ಜ್ ಮಾಸ್ಟರ್ ” ಎಂಬ ತಾಂತ್ರಿಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಮಾದರಿ ಸೇತುವೆಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ಪರೀಕ್ಷಿಸಲು ಒಂದು ವೇದಿಕೆಯನ್ನು ಒದಗಿಸಿಕೊಟ್ಟಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ವಿದ್ಯಾಕುಮಾರ್, ಇಂಜಿನಿಯರ್ ಐ ಕೇರ್ ಬಿಲ್ಡರ್ಸ್ ಮತ್ತು ಡೆವೆಲಪರ್ಸ್ ಉಜಿರೆ ದೀಪ ಪ್ರಜ್ವಲನೆ ಮಾಡಿ, ರಚನಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ್ ಜೈನ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ತೃಪ್ತಿ ಶೆಟ್ಟಿ, ಕಾರ್ಯಕ್ರಮದ ಸಂಯೋಜಕ ಅಶ್ವಿನ್ ಮರಾಠೆ ಉಪಸ್ಥಿತರಿದ್ದರು.

ಎ ಸಿ ಸಿ ಇ ಐ ಬೆಳ್ತಂಗಡಿಯ ಪ್ರಮೋದ್ ಮತ್ತು ಚೇತನ್ ಉಪಸ್ಥಿತರಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಈಶ್ವರ್ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

Related posts

ಪಣಕಜೆ ಶ್ರೀಕೃಷ್ಣ ಭಜನಾ ಮಂದಿರದ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ, ಪ್ರ. ಕಾರ್ಯದರ್ಶಿಯಾಗಿ ಸುಜೀತ್ ಕುಮಾರ್

Suddi Udaya

ಕುದ್ಯಾಡಿ ಸ. ಕಿ. ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಉಜಿರೆ:ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಕಲಾ ಸಿಂಧು ಸಾಂಸ್ಕೃತಿಕ ಸಂಘದ ವತಿಯಿಂದ ‘ವೃಕ್ಷಾಬಂಧನ’ ಕಾರ್ಯಕ್ರಮ

Suddi Udaya

ಆರ್ಥಿಕ ಇಲಾಖೆಯ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹೊರಸಂಪನ್ಮೂಲ ನೌಕರರಿಂದ ರಕ್ಷಿತ್ ಶಿವರಾಂ ರವರಿಗೆ ಮನವಿ

Suddi Udaya

ಕುಂಟಿನಿ ಅಲ್ ಬುಖಾರಿ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

Suddi Udaya

ನಿಡ್ಲೆ ಆಯುಷ್ಮಾನ್ ಉಪ ಆರೋಗ್ಯ ಕೇಂದ್ರ ರಾಷ್ಟ್ರಮಟ್ಟದಲ್ಲಿ ಆಯ್ಕೆ

Suddi Udaya
error: Content is protected !!