37.4 C
ಪುತ್ತೂರು, ಬೆಳ್ತಂಗಡಿ
March 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ ಧರ್ಮಸ್ಥಳಕ್ಕೆ ಪ್ರವೇಶ

ಧರ್ಮಸ್ಥಳ: ಭಗವಾನ್ ಸತ್ಯಸಾಯಿಬಾಬಾರ ಜನ್ಮಶತಮಾನೋತ್ಸವದ ಅಂಗವಾಗಿ ದೇಶದಾದ್ಯಂತ ಸಂಚರಿಸುತ್ತಿರುವ “ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ”ವು ಧರ್ಮಸ್ಥಳಕ್ಕೆ ಆಗಮಿಸಿತು.

ಈ ರಥಯಾತ್ರೆ ಭಗವಾನ್ ಶ್ರೀ ಸತ್ಯಸಾಯಿಬಾಬಾರ ಪ್ರೀತಿ, ಸೇವೆ, ಸತ್ಯ, ಧರ್ಮ, ಶಾಂತಿ ಮತ್ತು ಅಹಿಂಸೆಯ ಸಂದೇಶಗಳನ್ನು ಸಮಾಜದ ಎಲ್ಲ ವರ್ಗದ ಜನರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿರುವ ಈ ರಥವು ಧರ್ಮಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಭಕ್ತರು ಭಕ್ತಿಭಾವದಿಂದ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರೇಮ ಪ್ರವಾಹಿನಿ ರಥವನ್ನು ಬರಮಾಡಿಕೊಂಡು, ಭಗವಾನ್ ಸತ್ಯಸಾಯಿಬಾಬಾರ ಆದರ್ಶಗಳು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿವೆ ಎಂದು ಹೇಳಿದರು. ಸಮಾಜದಲ್ಲಿ ಸೇವಾ ಮನೋಭಾವ, ಪ್ರೀತಿ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಬಲಪಡಿಸುವುದರಲ್ಲಿ ಸತ್ಯಸಾಯಿ ಚಳವಳಿ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಥದೊಂದಿಗೆ ಭಗವಾನ್ ಸತ್ಯಸಾಯಿ ಬಾಬಾರ ಜೀವನ ಮತ್ತು ಸಂದೇಶಗಳನ್ನು ಪರಿಚಯಿಸುವ ಪ್ರದರ್ಶನ, ಭಕ್ತಿಗೀತೆಗಳು ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದರ್ಶನ ಪಡೆದು ಆಶೀರ್ವಾದ ಪಡೆದರು.

ಭಗವಾನ್ ಶ್ರೀ ಸತ್ಯಸಾಯಿಬಾಬಾರ ಜನ್ಮದಿನದ ಶತವರ್ಷ ಸಂಭ್ರಮಾಚರಣೆಯ ಅಂಗವಾಗಿ ಪ್ರೇಮ ಪ್ರವಾಹಿನಿ ರಥಯಾತ್ರೆ ದೇಶದ ವಿವಿಧ ತೀರ್ಥಕ್ಷೇತ್ರಗಳು ಮತ್ತು ನಗರಗಳಲ್ಲಿ ಸಂಚರಿಸಿ ಜನರಲ್ಲಿ ಮಾನವೀಯ ಮೌಲ್ಯಗಳ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.

ಕರ್ನಾಟಕ ರಾಜ್ಯದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪದ್ಮನಾಭನ್ ಪೈ, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್, ಯೋಜನೆಯ ಟ್ರಸ್ಟಿ ಡಾ. ಹರೀಶ್ ಕೃಷ್ಣಸ್ವಾಮಿ, ದೇವಳದ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ರಾವ್, ರಾಜೇಂದ್ರ ದಾಸ್ ಉಪಸ್ಥಿತರಿದ್ದರು.

Related posts

ನ.14: ಮಡಂತ್ಯಾರು ಸಹಕಾರಿ ಸಂಘದ ನೇತೃತ್ವದಲ್ಲಿ 72ನೇ ಸಹಕಾರಿ ಸಪ್ತಾಹ, ಪೂರ್ವಭಾವಿ ಸಭೆ

Suddi Udaya

ಪಟ್ರಮೆ : ಮುಂಡೂರುಪಳಿಕೆ ನಿವಾಸಿ ವಸಂತಿ ನಿಧನ

Suddi Udaya

ಪಣಕಜೆ : ಕಾರು ಮತ್ತು ಬೈಕ್ ಡಿಕ್ಕಿ: ಬೈಕ್ ಸವಾರ ಅಪಾಯದಿಂದ ಪಾರು

Suddi Udaya

ಧರ್ಮಸ್ಥಳ 27ನೇ ವಷ೯ದ ಭಜನಾ ಕಮ್ಮಟದ ಸಮಾರೋಪ : ಭಜನೆಯಿಂದ ಧಮ೯ ಸಂಸ್ಕೃತಿಯ ಅನಾವರಣ: ಒಡಿಯೂರು ಶ್ರೀ

Suddi Udaya

ಗುರುವಾಯನಕೆರೆ- ಶಕ್ತಿನಗರ ನಗರಲಂಕಾರ ದೀಪ ಲೋಕಾರ್ಪಣೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶ್ರೀ ಗುರು ಪೂಜೋತ್ಸವ: ಸರ್ವೇಶ್ವರೀ ದೇವಿಯ ಪೂಜೆಯಲ್ಲಿ ನೂರಾರು ಮಹಿಳಾ ವೃತಧಾರಿಗಳು ಭಾಗಿ, ಸಾಧಕರಿಗೆ ಸನ್ಮಾನ,

Suddi Udaya
error: Content is protected !!