37.4 C
ಪುತ್ತೂರು, ಬೆಳ್ತಂಗಡಿ
March 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಚಾರ್ಮಾಡಿ ಪ್ರದೇಶದಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಚಿರತೆಗಳು

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಹೊಸಮಠ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದ ಕಾರ್ಮಿಕರೊಬ್ಬರಿಗೆ ಮೂರು ಚಿರತೆಗಳು ಎದುರಾದ ಘಟನೆ ಮಾ.10 ರಂದು ಮುಂಜಾನೆ 4 ಗಂಟೆ ವೇಳೆಗೆ ನಡೆದಿದೆ. ಚಿರತೆಯನ್ನು ಕಂಡ ವ್ಯಕ್ತಿ ಭಯ ಭೀತರಾಗಿ ತಕ್ಷಣವೇ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿ ಚಿರತೆಗಳನ್ನು ಕಾಡಿಗೆ ಅಟ್ಟಲಾಗಿದೆ.

ಕೊಂಚ ಬಿಡುವು ನೀಡಿ ಮತ್ತೆ ಕಾಣಿಸಿದ ಚಿರತೆ:
ಕಳೆದ ಜನವರಿ ಹಾಗೂ ಫೆಬ್ರವರಿ ತಿಂಗಳ ಮಧ್ಯೆದವರೆಗೆ ಬೆಳ್ತಂಗಡಿ ಪಟ್ಟಣ, ಕಲ್ಮಂಜ, ಮುಂಡಾಜೆ, ನಡ, ಕಳಿಯ, ವೇಣೂರು, ಅಂಡಿಂಜೆ, ಸುಲ್ಕೇರಿ, ತಣ್ಣೀರುಪಂತ, ಮಚ್ಚಿನ ಸಹಿತ ನಾನಾ ಗ್ರಾಮಗಳಲ್ಲಿ ಚಿರತೆಗಳು ಸಂಚಾರ ನಡೆಸಿ ಜನರಲ್ಲಿ ಭಯದ ಭೀತಿಯ ವತಾವರಣ ನಿರ್ಮಿಸಿದ್ದವು. ನಡ ಗ್ರಾಮದ ಕನ್ಯಾಡಿ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಮುಂಡಾಜೆಯ ಸೀಟು ಮೂರು ಮಾರ್ಗದ ಬಳಿ ಶಾಲಾ ಬಾಲಕನೋರ್ವನಿಗೆ ಚಿರತೆ ಎದುರಾದ ಘಟನೆಯು ನಡೆದಿತ್ತು. ಅನೇಕ ಗ್ರಾಮಗಳಲ್ಲಿ ಮುಂಜಾನೆ ಟ್ಯಾಪಿಂಗ್ ನಡೆಸುವ ವ್ಯಕ್ತಿಗಳಿಗೆ ಪದೇ ಪದೇ ಚಿರತೆಗಳು ಎದುರಾಗಿದ್ದವು.

ಕಳೆದ 20 ದಿನಗಳಿಂದ ಚಿರತೆಗಳ ಓಡಾಟದ ವರದಿ ಪ್ರಕಟವಾಗಿರಲಿಲ್ಲ ಆದರೆ ಇದೀಗ ಚಿರತೆಗಳು ಮತ್ತೆ ಕಾಣಿಸಿಕೊಂಡಿವೆ. ಒಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಚಿರತೆವಿರುವುದು ಸ್ಪಷ್ಟಗೊಂಡಿದೆ. ಬೆಳ್ತಂಗಡಿ ನಗರಕ್ಕೂ ಚಿರತೆ ಲಗ್ಗೆ ಇಟ್ಟಿದ್ದವು, ನಡ ಗ್ರಾಮದಲ್ಲಿ ಚಿರತೆಯೊಂದು ಬೋನ್‌ನಲ್ಲಿ ಸೆರೆಯಾಗಿತ್ತು.

Related posts

ಉರುವಾಲು :ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಚಪ್ಪರ ಮೂಹೂರ್ತ

Suddi Udaya

ಕರಾಯ ಮೂರ್ತೇದಾರರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ದಿ. ಸಂಜೀವ ಕರ್ಕೇರ ರವರ ಧರ್ಮಪತ್ನಿ ಬುಲೆಕ್ಕಿಲ ಪ್ರೇಮ ಎಸ್. ಕರ್ಕೇರ ಹೃದಯಾಘಾತದಿಂದ ನಿಧನ

Suddi Udaya

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲದಿಂದ 31ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ

Suddi Udaya

ಸಹಾಯ ಹಸ್ತ –ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರಿಂದ ತಯಾರಿಸಲಾದ ಉತ್ಪನ್ನಗಳ ಮಾರಾಟ ಯೋಜನೆ

Suddi Udaya

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಷೂ ಎಸೆದ ಪ್ರಕರಣ ತನಿಖೆ ನಡೆಸಿ ಆರೋಪಿಯ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿ: ರಕ್ಷಿತ್ ಶಿವರಾಂ

Suddi Udaya

ಲಾಯಿಲ ಗ್ರಾ.ಪಂ. ನಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆ

Suddi Udaya
error: Content is protected !!