37.4 C
ಪುತ್ತೂರು, ಬೆಳ್ತಂಗಡಿ
March 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ- ಚಂದ್ರ ಜೋಡುಕರೆ ಕೊಲ್ಲಿ ಕಂಬಳ

ಬೆಳ್ತಂಗಡಿ: ಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿ ಬಂಗಾಡಿ,ಕೊಲ್ಲಿ ಇದರ ವತಿಯಿಂದ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ 28ನೇ ವರ್ಷದ ಹೊನಲು ಬೆಳಕಿನ ಕೊಲ್ಲಿ ಕಂಬಳವು ಮಾರ್ಚ್ 15ರಂದು ನಡೆಯಲಿದೆ ಎಂದು ಬಂಗಾಡಿ ಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ ಗೌಡ ಹೇಳಿದರು.

ಅವರು ಮಾ 10ರಂದು ಉಜಿರೆ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಬಾರಿಯ ಕಂಬಳ‌ವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಯುವ ಸಮಿತಿಯು ನಿರ್ಧರಿಸಿದ್ದು ಈಗಾಗಲೇ ಪೂರ್ವ ತಯಾರಿ ಸಿದ್ದತೆಗಳು ನಡೆಯುತ್ತಿದೆ.ಪ್ರಕೃತಿ ರಮಣೀಯವಾದ ಸುಂದರವಾದ ಪ್ರದೇಶದ ಕೊಲ್ಲಿಯಲ್ಲಿರುವ ಕಂಬಳದ ಕರೆ ಜಿಲ್ಲೆಯಲ್ಲಿಯೇ ಪ್ರಸಿದ್ದಿ ಪಡೆದಿದೆ ಎಂದರು.

ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ದೇಯು ನಡೆಯಲಿದ್ದು ಈಗಾಗಲೇ ಸ್ಪರ್ದೇಗೆ ಸುಮಾರು 150ಕ್ಕೂ ಹೆಚ್ಚು ಹೆಸರು ಬಂದಿದೆ. ವಿಜೇತ ತಂಡಗಳಿಗೆ ಏಳೂವರೆ ಪವನ್ ಚಿನ್ನ ಬಹುಮಾನವಾಗಿ ಸಿಗಲಿದೆ. ಉತ್ತಮವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.ಪಕ್ಷಾತೀತವಾಗಿ ನಡೆಯುವ ಈ ಕಂಬಳಕ್ಕೆ ರಾಜಕೀಯ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು,ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಪೂರ್ಣ ಪ್ರಮಾಣದ ಆಶೀರ್ವಾದ ಮಾಡಿದ್ದಾರೆ.ಈ ಕಂಬಳ ಜಾತ್ರೆಯ ಉತ್ಸವದ ರೀತಿಯಲ್ಲಿ ನಡೆಯಲಿದ್ದು ಊರ ಪರವೂರ ಕಂಬಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೇಂದರು.

ಪತ್ರಿಕಾಗೋಷ್ಠಿಯಲ್ಲಿ ಬಂಗಾಡಿ ಕೊಲ್ಲಿ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಕಿಶೋರ್ ವಳಂಬ್ರ,ಸ್ವಾಗತ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಪ್ರ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕೊಕ್ಕರ್ಣೆ,ಕಂಬಳ ಸಮಿತಿ ಕಾರ್ಯದರ್ಶಿಗಳಾದ ಭರತ್ ಕುಮಾರ್ ಬಂಗಾಡಿ,ಮಧುಕರ ಸುವರ್ಣ,ಸ್ವಾಗತ ಸಮಿತಿ ಪ್ರ‌ ಕಾರ್ಯದರ್ಶಿ ದಿನೇಶ್ ಗೌಡ ಕುಳೆಂಜಿರೋಡಿ ಉಪಸ್ಥಿತರಿದ್ದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಐತಿಹಾಸಿಕ ಕಾರ್ಯಕ್ರಮ: ಸ್ವಸಹಾಯ ಸಂಘಗಳಿಗೆ ರೂ.605 ಕೋಟಿ ಲಾಭಾಂಶ ವಿತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ

Suddi Udaya

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ: ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ,ಶೈಕ್ಷಣಿಕ ಕ್ಷೇತ್ರದ ಯುವ ಸಾಧಕ ಸುಮಂತ್ ಕುಮಾರ್‌ ಜೈನ್ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ

Suddi Udaya

ಸಾಹಿತ್ಯ ಸಮ್ಮೇಳನದ ಸಂಯೋಜನಾ ಸಮಿತಿಯಿಂದ ಶಾಸಕ ಹರೀಶ್ ಪೂಂಜರ ಭೇಟಿ: ಕನ್ನಡ ಸಾಹಿತ್ಯ ಸಮ್ಮೇಳನವು ಸುವರ್ಣ ಕರ್ನಾಟಕದ ಆಶಯವನ್ನು ಬಿಂಬಿಸುವಂತಿರಲಿ: ಶಾಸಕ ಹರೀಶ್ ಪೂಂಜ

Suddi Udaya

ಬೆಳಾಲು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ
ಮಕ್ಕಳ ಶಿಕ್ಷಣಕ್ಕಾಗಿ ರೂ. 2೦ ಸಾವಿರ ನೆರವು

Suddi Udaya
error: Content is protected !!