25.1 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಫೋಟೊಗ್ರಾಫಿ ಸ್ಫರ್ಧೆ: ಡಾ. ಚಂದ್ರಹಾಸ್ ಚಾರ್ಮಾಡಿ ಪ್ರಥಮ

ಬೆಳ್ತಂಗಡಿ: ಬ್ಲಾಕ್ ಬಾಕ್ಸ್ ಸ್ಟುಡಿಯೋ ಆಯೋಜಿಸಿದ ಆನ್ ಲೈನ್ ಫೋಟೊಗ್ರಾಫಿ ಸ್ಪರ್ಧೆಯಲ್ಲಿ ಡಾ. ಚಂದ್ರಹಾಸ್ ಚಾರ್ಮಾಡಿಯವರು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಡಾ|| ಡಿ.ವೀರೇಂದ್ರ ಹೆಗ್ಗಡೆ ಮತ್ತು ಡಾ|| ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನಿಲ್ ಕುಮಾರ್ ಎಸ್.ಎಸ್. ರವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ರಾಜ್ಯದಾದ್ಯಂತ 8 ಲಕ್ಷ ಪ್ರಸರಣವನ್ನು ಹೊಂದಿರುವ ನಿರಂತರ’ ಪತ್ರಿಕೆಯ ಸಂಪಾದಕರಾದ ಡಾ.ಚಂದ್ರಹಾಸ್ ಚಾರ್ಮಾಡಿಯವರು ಕಳೆದ 15 ವರ್ಷಗಳಿಂದ ಸೌತ್ ಕೆನರಾ ಫೋಟೋಗ್ರಾಫರ್ಸ್ ಆಸೋಸಿಯೇಶನ್ ಬೆಳ್ತಂಗಡಿ ವಲಯದ ಸದಸ್ಯರಾಗಿದ್ದಾರೆ. ಬೆಳ್ತಂಗಡಿ ಪತ್ರಕರ್ತರ ಸಂಘದ ಸದಸ್ಯರು ಆಗಿರುವ ಇವರು ರಾಜ್ಯ ಸರಕಾರದ ಆಕ್ರೆಡೆಶನ್ ಪಡೆದಿರುವ ಪತ್ರಕರ್ತರಲ್ಲಿ ಓರ್ವರಾಗಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ, ಕನ್ನಡದಲ್ಲಿ ಎಂ.ಎ., ಹಂಪಿ ವಿಶ್ವವಿದ್ಯಾನಿಲಯದಡಿ ಪಿಹೆಚ್‌.ಡಿ. ಪದವಿಯನ್ನು ಪಡೆದಿದ್ದಾರೆ.

ಇವರ ಸುಮಾರು ಎರಡು ಸಾವಿರದಷ್ಟು ಬರಹಗಳು ರಾಜ್ಯದ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ನೂರೊಂದು ಯಶೋಗಾಥೆಗಳು’, ‘ನುಡಿಬರಹ’, ‘ಕೆರೆಯ ಕಥೆಗಳು’, ‘ಅಂಗಡಿ ಮಜಲು’ ಮುಂತಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ‌. ಇವರಿಗೆ ಈಗಾಗಲೇ ಪತ್ರಕರ್ತರಿಗೆ ಕೊಡಲ್ಪಡುವ ಪ.ಗೋ.ಪ್ರಶಸ್ತಿ, ಸೌರಭ ರಾಜ್ಯ ಪ್ರಶಸ್ತಿ, ಕೆಡಬ್ಲ್ಯುಜೆ ಪ್ರಶಸ್ತಿಗಳು ದೊರೆತಿವೆ.

Related posts

ಹುಣ್ಸೆಕಟ್ಟೆ ಪಲ್ಕೆ ನಿವಾಸಿ ನಾರಾಯಣ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಉಜಿರೆ “ಕನಸಿನ ಮನೆ” ಕೆ. ಮೋಹನ್ ಕುಮಾರ್‌ರ ವಿಭಿನ್ನ ಕಲ್ಪನೆಯಲ್ಲಿ ತಲೆಎತ್ತಿ ನಿಂತಿದೆ-ಬ್ರಹ್ಮಕಲಶೋತ್ಸವದಲ್ಲಿ ಮನಸೆಳೆಯುತ್ತಿರುವ “ಸುಪ್ರಸಾದ” ಭೋಜನಾಲಯ

Suddi Udaya

ಕರಾಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಭಜನಾ ತರಬೇತಿ ಕಾರ್ಯಾಗಾರ

Suddi Udaya

ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ ಕೆ.ಗೌಡ ಹಾಗೂ ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಭಾರೀ ಮಳೆಯಿಂದಾಗಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತಕ್ಷಣದ ಸಹಾಯಕ್ಕಾಗಿ ಸಂಪರ್ಕಿಸುವಂತೆ ಶ್ರಮಿಕ‌ ಶಾಸಕರ ಕಾರ್ಯಾಲಯ ಮನವಿ

Suddi Udaya

ಲಾಯಿಲ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!