22.8 C
ಪುತ್ತೂರು, ಬೆಳ್ತಂಗಡಿ
March 12, 2026
ಕರಾವಳಿ

ಕೋಳಿ ಅಂಕಕ್ಕೆ ನಿರ್ಬಂಧ: ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯಿಂದಬಂದಾರಿನಲ್ಲಿ ಮಾ.೧೫ ರಂದು ಸಭೆ

ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಈ ಕೋಳಿ ಅಂಕಕ್ಕೆ ಜೂಜು ಮಸ್ತಿ ಅನ್ನುವ ಹಣೆಪಟ್ಟಿ ಕಟ್ಟಿ ಸರಕಾರ ಹಾಗೂ ಪೊಲೀಸ್ ಇಲಾಖೆ ನಿರ್ಬಂಧ ಹೇರುವ ಮುಖಾಂತರ ಈ ನಾಡಿನ ಜನತೆಯ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡಿದೆ ಆದ್ದರಿಂದ ಜಿಲ್ಲಾ ಸಾಂಪ್ರದಾಯಿಕ ಹಿತರಕ್ಷಣಾ ವೇದಿಕೆ ವತಿಯಿಂದ ತಾಲೂಕಿನ ಬಂದಾರು ಗ್ರಾಮದ ಪಾಣೆಕಲ್ಲಿನಲ್ಲಿ ಮಾ.೧೫ ರಂದು ತಾಲೂಕು ಮಟ್ಟದ ಸಭೆ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಬೆಳ್ಳಿಯಪ್ಪ ಗೌಡ ತಿಮರಗುಡ್ಡ ಹೇಳಿದರು.

ಅವರು ಬೆಳ್ತಂಗಡಿ ಕಾರ್ಯನಿರತ ಪರ್ತಕರ್ತರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾ.೧೧ ರಂದು ಮಾತನಾಡಿದರು. ತುಳುನಾಡಿನ ಕ್ರೀಡೆಗಳಲ್ಲಿ ಕಂಬಳದಷ್ಟೇ ಮುಂಚೂಣಿಯಲ್ಲಿರುವ ಒಂದು ಕ್ರೀಡೆ ಕೋಳಿ ಅಂಕ”, ಇದನ್ನು ಕ್ರೀಡೆ ಅನ್ನುವುದಕ್ಕಿಂತ ನಂಬಿಕೆ ಅಂತ ನಂಬುವವರೇ ಹೆಚ್ಚು. ಕೋಳಿ ಅಂಕ ಅನ್ನುವುದು ಪ್ರಾಚೀನ ಕಾಲದಿಂದ ಆಚರಿಸಿಕೊಂಡು ಬಂದಿದ್ದು. ಇಲ್ಲಿಯ ತನಕ ಯಾವುದೇ ತೊಂದರೆಯಾದದ್ದು ಇಲ್ಲ. ಇದು ಅದರದ್ದೇ ಆದ ಚೌಕಟ್ಟಿನಲ್ಲಿ ನಡೆಯುತ್ತದೆ ಎಂದರು.

ಇದು ಇಲ್ಲಿನ ದೈವಾರಾಧನೆ ಪ್ರಮುಖ ಅಂಗ. ಪ್ರಾಚೀನ ಸಂಪ್ರದಾಯದ ಪ್ರಕಾರ ಕೋಳಿ ಅಂಕವು ದೈವಗಳ ನೇಮೋತ್ಸವದ ಮೊದಲು ನಡೆದರೆ, ಇನ್ನು ಕೆಲವು ಕಡೆ ದೈವನರ್ತನದ ಸಂದರ್ಭ ನಡೆಯುತ್ತದೆ. ಮತ್ತೆ ಕೆಲವು ಕಡೆಗಳಲ್ಲಿ ನೇಮೋತ್ಸವ ಮುಗಿದ ನಂತರ ನಡೆಯುತ್ತದೆ. ಹಾಗೆಯೇ ದೈವದ ಗೊನೆಮುಹೂರ್ತದ ನಂತರ ಕೋಳಿಗೂಟ ವಾಡಿಕೆಯಲ್ಲಿ ಇರುತ್ತದೆ ಎಂದು ತಿಳಿಸಿದರು.

ಅದಲ್ಲದೆ ಈ ಮೊದಲು ಕಂಬಳಕ್ಕೆ ನಿರ್ಬಂಧ ಹೇರಿ ಈಗ ಅದು ಕೂಡ ಸಾಂಪ್ರದಾಯಿಕವಾಗಿ ನಡೆಯುತ್ತಿಲ್ಲ ಅನ್ನುವ ಬೇಸರ ನಾಡಿನ ಜನತೆಗೆ ಇದೆ. ಹಾಗೆ ಇನ್ನು ತೆಂಗಿನಕಾಯಿ ಕುಟ್ಟುವುದೂ ಒಂದು ಸಾಂಪ್ರದಾಯಿಕ ಕ್ರೀಡೆ. ಇದು ವರ್ಷದ ಒಂದು ಶುಭದಿನದಂದು ಆಚರಿಸಲಾಗುತ್ತದೆ. ಅದಕ್ಕು ಪೊಲೀಸ್ ಕಡಿವಾಣ ಇದೆ. ಆದುದರಿಂದ ಮುಂದಿನ ದಿನಗಳಲ್ಲಿ ಈ ಎಲ್ಲಾ ಆಚರಣೆಗಳನ್ನು ಮುಂದುವರಿಸಲು ನಾವೆಲ್ಲರೂ ಒಂದಾಗಿ ಒಟ್ಟಾಗಿ ಸೇರೋಣ ಬನ್ನಿ ಎಂದು ಕರೆ ನೀಡಿದರು.

ತಾಲೂಕು ಸಮಿತಿ ಮುಖಂಡ ದಿನೇಶ್ ಗೌಡ ಖಂಡಿಗ ಮಾತನಾಡಿ, ನಮ್ಮ ಸಂಪ್ರದಾಯ ಆಚರಣೆಗಳ ಉಳಿವಿಕೆಗಾಗಿ ಸಮಿತಿ ರಚಿಸಲಾಗಿದೆ. ತಾಲೂಕಿನಲ್ಲಿ ಪ್ರಥಮ ಬಾರಿಗೆ ಸಭೆನಡೆಯುತ್ತಿದೆ. ಆದ್ದರಿಂದ ತಾಲೂಕಿನಲ್ಲಿರುವ ೩೫೦ಕ್ಕೂ ಅಧಿಕ ದೈವಸ್ಥಾನದ ಪ್ರಮುಖ ಸಭೆಗೆ ಬರಬೇಕು. ತಮ್ಮ ತಮ್ಮ ದೈವಸ್ಥಾನಗಳಲ್ಲಿ ಎಷ್ಟು ದಿವಸದ ಕೋಳಿ ಅಂಕ ನಡೆಯುತ್ತದೆ ಎಂಬ ಮಾಹಿ ತಿಯನ್ನು ನೀಡಬೇಕು. ಸಾಂಪ್ರದಾಯಿಕ ಕೋಳಿ ಅಂಕಗಳಿಗೆ ಅನುಮತಿ ನೀಡುವಂತೆ ಸದನದಲ್ಲಿ ಧ್ವನಿ ಎತ್ತುವುದಾಗಿ ಶಾಸಕರು ತಿಳಿಸಿದ್ದಾರೆ ಎಂದು ಹೇಳಿದರು.

ಸಮಿತಿಯ ಗೌರವಾಧ್ಯಕ್ಷ ಶಿವಣ್ಣ ಗೌಡ ಇಡ್ಯಾಡಿ ಸವಣೂರು, ಜಿಲ್ಲಾ ಸಮಿತಿ ಸದಸ್ಯ ಗೋಪಿನಾಥ್ ಕಡಬ ಹಾಗೂ ತಾಲೂಕು ಸಮಿತಿ ಮುಖಂಡ ಸೀನಪ್ಪ ಗೌಡ ಕೊಡಮಜೆ ಪತ್ರಿಕಾಗೋಷ್ಠಿಯಲ್ಲಿದ್ದರು.

Related posts

ಉಪ್ಪಿನಂಗಡಿ: ನೇತ್ರಾವತಿ ಮತ್ತು ಕುಮಾರಧಾರ ನದಿಯಲ್ಲಿ ಉಕ್ಕಿ ಹರಿಯುತ್ತಿರುವ ಪ್ರವಾಹ

Suddi Udaya

ವಿವಿಧ ವಿನ್ಯಾಸಗಳ ಚಿನ್ನ ಹಾಗೂ ವಜ್ರದ ಆಭರಣಗಳ ಶೋರೂಮ್ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವಿಸ್ತೃತ ಶೋರೂಮ್; ಮುಳಿಯ ಬ್ರಾಂಡ್ ಅಂಬಾಸಿಡರ್ ರಮೇಶ್ ಅರವಿಂದ್‌ ದೀಪ ಪ್ರಜ್ವಲಿಸಿ ಲೋಕಾರ್ಪಣೆ

Suddi Udaya

ಮೈರಲ್ಕೆ ಓಡಿಲ್ನಾಳ: ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ಬ್ರಹ್ಮಕಲಶ ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನಲ್ಲಿ 3 ದಿನ ನಡೆಯಲಿರುವ ಮೀನು ಮೇಳಕ್ಕೆ ಚಾಲನೆ: ವಿಶೇಷ ಆಕರ್ಷಣೆ ಮೀನಿಗೆ ಗಾಳ ಹಾಕುವ ಸ್ಪರ್ಧೆ

Suddi Udaya

ಭಾರೀ ಮಳೆ ಹಿನ್ನೆಲೆ: ಇಂದು (ಮೇ 30) ದ.ಕ.ಜಿಲ್ಲೆಯ ಶಾಲೆಗಳಿಗೆ ರಜೆಘೋಷಣೆ

Suddi Udaya

ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಕಂಬಳ: ದಿಡುಪೆ ಪರಂಬೇರಿನ ನಾರಾಯಣ ಮಲೆಕುಡಿಯರ ಕೋಣಗಳು, ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ, ಒಂದು ಲಕ್ಷ ನಗದು, 16 ಗ್ರಾಂ ಚಿನ್ನ ಮತ್ತು ಟ್ರೋಫಿ

Suddi Udaya
error: Content is protected !!