28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮಾ.14-19: ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೆ

ಕೊಯ್ಯೂರು: ಮಾ.14 ರಿಂದ 19 ರವರೆಗೆ ಶ್ರೀ ವೇದಮೂರ್ತಿ ನಂದಕುಮಾರ ತಂತ್ರಿ ನೇತೃತ್ವದಲ್ಲಿ ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೆ ಜರುಗಲಿರುವುದು.

ಮಾ.14ರಂದು ಬೆಳಿಗ್ಗೆ ಪ್ರಾರ್ಥನೆ, ಪ್ರಶ್ನಾಚಿಂತನೆ, ತೋರಣ ಮುಹೂರ್ತ, ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ರಾತ್ರಿ ಉತ್ಸವ, ಮಹಾಪೂಜೆ, ಬಲಿ. ಮಾ.15ರಂದು ಬೆಳಿಗ್ಗೆ ಉತವ, ಕಲಶಾಭಿಷೇಕ, ಮಹಾಪೂಜೆ, ಸಂಜೆ ಶ್ರೀ ಪಂಚದುರ್ಗಾ ಯಕ್ಷಗಾನ ಕಲಾಸಂಘ ಕೊಯ್ಯೂರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ಉತ್ಸವ, ಪಡಿಯಕ್ಕಿ, ಮಹಾಪೂಜೆ, ಬಲಿ, ಮಾ.16ರಂದು ಬೆಳಿಗ್ಗೆ ದರ್ಶನ ಬಲಿ, ಕಲಶಾಭಿಷೇಕ, ಮಹಾಪೂಜೆ, ಚಂಡಿಕಾ ಹೋಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಕೊಟ್ಟಿಗೆ ಕೆಲಸ, ಮಹಾರಥೋತ್ಸವ ಮಹಾಪೂಜೆ, ಭೂತಬಲಿ, ಕವಾಟ ಬಂಧನ, ಕೊಯ್ಯರು ದೇವಸ್ಥಾನ ಶಾಲಾ ಮಕ್ಕಳಿಂದ ಯಕ್ಷಗಾನ ಬಯಲಾಟ, ಮಾ.೧೭ರಂದು ಬೆಳಿಗ್ಗೆ ಕವಾಟ ಉದ್ಘಾಟನೆ, ಅಭಿಷೇಕ, ಪ್ರಸನ್ನ ಪೂಜೆ ಮೂಲಸ್ಥಾನ ಗುಂಡದಿAದ ಭಂಡಾರದ ಆಗಮನ, ಮಹಾಪೂಜೆ, ನಾಸಿಕ್ ಬ್ಯಾಂಡ್, ಬಣ್ಣದ ಕೊಡೆಗಳು, ಭಜನಾ ತಂಡಗಳು, ಕೀಲುಕುದುರೆ-ವಿಶೇಷ ಆಕರ್ಷಣೆ, ಭಜನಾ ಶ್ರೀ ಪಂಚದುರ್ಗಾ ಭಜನಾ ತಂಡದವರಿಂದ ಭಜನಾ ಕಾರ್ತಕ್ರಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಬೆಳ್ತಂಗಡಿ ಶೆಟ್ಟಿ ಆರ್ಟ್ ಗಿರಿಧರ ಶೆಟ್ಟಿ ಬಳಗದವರಿಂದ ವಿನೂತನ ಶೈಲಿತ ನೃತ್ಯ, ಅಜ್ಜೆರ್ ಅಂಚಿ-ಅಜ್ಜಿ ಇಂಚಿ ತುಳು ಹಾಸ್ಯ ಸಾಂಸಾರಿಕ ನಾಟಕ, ರಾತ್ರಿ ಧರ್ಮದೈವಗಳ ನೇಮೋತ್ಸವ, ಶ್ರೀ ದೇವರ ಉತ್ಸವ, ಶ್ರೀ ಉಳ್ಳಾಲ್ತಿ ನೇಮೋತ್ಸವ, ಮಾಹಾಪೂಜೆ, ಕೊಳ್ಳೂರು ಭಾಸ್ಕರ ಮತ್ತು ಬಳಗದವರಿಂದ ವಿಶೇಷ ಚೆಂಡೆ ಸೇವೆ, ಜಿಲ್ಲಾ ಪ್ರಶಸ್ತಿ ವಿಜೇತ ಶ್ರೀ ಹರಿದಾಸ ಡೋಗ್ರ ಇವರಿಂದ ಸ್ಯಾಕ್ಸ್ಫೋನ್ ವಾದನ, ಮಾ.18ರಂದು ಬೆಳಿಗ್ಗೆ ಕಲಶಾಭಿಷೇಕ, ಮಾಹಾಪೂಜೆ, ರಾತ್ರಿ ಅವಭೃತ, ಸ್ನಾನ, ಧ್ವಜಾವರೋಹಣ, ಮಹಾಪೂಜೆ, ರಾತ್ರಿ ಕಲ್ಕಡ ಕಲ್ಲುರ್ಟಿ ನೇಮೋತ್ಸವ, ಮಾ.19ರಂದು ಸಂಪ್ರೋಕಣೆ-ಮಹಾಪೂಜೆ, ಮಾ.24ರಂದು ಜಾತ್ರಾ ಪ್ರಯುಕ್ತ ಮೇಳದವರಿಂದ “ಬನತ ಬೆಮ್ಮೆರ್” ಯಕ್ಷಗಾನ ಬಯಲಾಟ ನಡೆಯಲಿದೆ.

Related posts

ಮೇ 8: ಮಾಜಿ ಜಿ.ಪಂ. ಉಪಾಧ್ಯಕ್ಷ ತುಂಗಪ್ಪ ಬಂಗೇರರ ನೇತೃತ್ವದಲ್ಲಿ ಬಿ.ಎಸ್. ಯಡಿಯೂರಪ್ಪ ‘ಅಭಿಮಾನೋತ್ಸವ’ ಕಾರ್ಯಕ್ರಮ

Suddi Udaya

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಬೀಳ್ಕೊಡುಗೆ ಮತ್ತು ಗೌರವಾರ್ಪಣೆ

Suddi Udaya

ಧರ್ಮಸ್ಥಳ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ: ಪ್ರಸನ್ನ ಪಿ ಯು ಕಾಲೇಜಿನ ವಿದ್ಯಾರ್ಥಿ ಚಂದನ್ ಬಿ.ಯು. ಬೆಳ್ಳಿ ಪದಕ

Suddi Udaya

ಧರ್ಮಸ್ಥಳದಲ್ಲಿ 53ನೇ ವರ್ಷದ ಪುರಾಣ ಕಾವ್ಯ ವಾಚನ – ಪ್ರವಚನ ಉದ್ಘಾಟನೆ

Suddi Udaya

ಎಕ್ಸೆಲ್ ಉಪನ್ಯಾಸಕರಿಂದ ಸಾಂಸ್ಕೃತಿಕ ವೈಭವ

Suddi Udaya
error: Content is protected !!