March 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕನ್ಯಾಡಿ ಸೇವಾಭಾರತಿಯಿಂದ ಬೆನ್ನುಹುರಿ ಅಪಘಾತಕ್ಕೊಳಗಾದ ರಾಣೆಬೆನ್ನೂರಿನ ಚೈತ್ರಾರಿಗೆ ಗಾಲಿಕುರ್ಚಿ ವಿತರಣೆ

ಕೊಕ್ಕಡ: ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಅದರಂತೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಗಿತ್ತು.

ಈ ತಿಂಗಳಲ್ಲಿ 32 ಗಾಲಿಕುರ್ಚಿಗಳನ್ನು ವಿತರಿಸುವುದಾಗಿ ನಿರ್ಧರಿಸಿದ್ದು ಅರ್ಹ ಫಲಾನುಭವಿ ರಾಣೆಬೆನ್ನೂರಿನ ಕು. ಚೈತ್ರಾ ರವರಿಗೆ ಸೌತಡ್ಕ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ಸಂಸ್ಥೆಯ ಹಿತೈಷಿ ಮತ್ತು ದಾನಿಗಳಾದ ಕೊಕ್ಕಡದ ಗಣೇಶ್ ಪಿ. ಐತಾಳ್ ರವರು ಗಾಲಿಕುರ್ಚಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶ್ರೀಯುತರು ಸೇವಾಧಾಮ ಪುನಶ್ಚೇತನ ಕೇಂದ್ರಕ್ಕೆ ಒಂದು ಹೊತ್ತಿನ ಊಟದ ದೇಣಿಗೆಯನ್ನು ನೀಡಿ ಸಹಕರಿಸಿದರು. ಸೇವಾಭಾರತಿಯ ಉಪಾಧ್ಯಕ್ಷ ಬಾಲಕೃಷ್ಣ ಹಾಗೂ ಸಿಬ್ಬಂದಿ ವರ್ಗದವರು ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ಧನ್ಯವಾದವಿತ್ತರು.

Related posts

ಜು.9: ಸೋಮಂತಡ್ಕ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ 22 ನೇ ಶಾಖೆ ಉದ್ಘಾಟನೆ

Suddi Udaya

ಬೆಳ್ತಂಗಡಿ ಲೋಬೊ ಟಿವಿಎಸ್ ಮೋಟಾರ್ಸ್ ಮಳಿಗೆಯಲ್ಲಿ ಆಯುಧ ಪೂಜೆ

Suddi Udaya

ಫೆ.12: ಉಜಿರೆ ಶ್ರೀ ದುರ್ಗಾ ನಿಲಯದಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ, ಹಾಗೂ ಶ್ರೀ ಶನೀಶ್ವರ ಪೂಜೆ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಮಹಿಳಾ ವಿಭಾಗದ ಮತ್ತು ಯುವ ವಿಭಾಗದ ಪದಾಧಿಕಾರಿಗಳ ಆಯ್ಕೆ

Suddi Udaya

ನೀರಚಿಲುಮೆ ಸಮೀಪದ ಕಾಡಿನಲ್ಲಿ ಆಕಸ್ಮಿಕ ಬೆಂಕಿ

Suddi Udaya

ಅಂಚೆ ವಿತರಕರಾಗಿ ಸೇವೆ ಸಲ್ಲಿಸಿದ ನಿಡ್ಲೆಯ ಮಹೇಶ್ ಬಿರ್ಲಾಜೆ ಹಾಗೂ ಪುದುವೆಟ್ಟು ಅಂಚೆ ಕಚೇರಿಯ ಬಾಲಕೃಷ್ಣ ಸುರುಳಿ ಪದೋನ್ನತಿಗೊಂಡು ವರ್ಗಾವಣೆ : ಧರ್ಮಸ್ಥಳ ಅಂಚೆ ಕಚೇರಿಯಿಂದ ಬಿಳ್ಕೋಡುಗೆ

Suddi Udaya
error: Content is protected !!