25.4 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವೇಣೂರು: ಎಕ್ಸೆಲ್ ನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸುಮಂತ್ ಕುಮಾರ್ ಜೈನ್ ರಿಂದ ಮಾರ್ಗದರ್ಶನ

ವೇಣೂರು : ಇಲ್ಲಿನ ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ 2025 -26 ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ ಇವರು ಮಾ.13ರಂದು ಮಾರ್ಗದರ್ಶನ ಮಾಡಿದರು.

ಶಾಲೆಯ ವಿದ್ಯೋದಯ ಕ್ಯಾಂಪಸ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಾರದಾ ಮಾತೆಗೆ ಪುಷ್ಪಾರ್ಚನೆ ಮಾಡಿ, ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ವಿತರಿಸಿ ಮಾತನಾಡಿದ ಅವರು, 10ನೇ ತರಗತಿಯ ಪರೀಕ್ಷೆ ಎಂಬುದು ವಿದ್ಯಾರ್ಥಿ ಜೀವನದ ಸತ್ವ ಪರೀಕ್ಷೆಯ ಕಾಲ. ಮುಂದಿನ ಉನ್ನತ ವ್ಯಾಸಂಗಕ್ಕೆ ಇದೇ ಭದ್ರ ಅಡಿಪಾಯ. ಹಾಗಾಗಿ ಸಮಯವನ್ನು ಸದ್ವಿನಿಯೋಗ ಮಾಡಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆ ಇದರ ಮುಖ್ಯ ಶಿಕ್ಷಕಿ ಸಹನಾ ಜೈನ್, ಶೈಕ್ಷಣಿಕ ನಿರ್ದೇಶಕಿ ನಿಶಾ ಪೂಜಾರಿ, ದಾಖಲಾತಿ ವಿಭಾಗದ ಮೋಹನ್ ಕಾನರ್ಪ ಮತ್ತು ಹರ್ಷಿತಾ, ಆಡಳಿತಾಧಿಕಾರಿ ಶಾಂತಿರಾಜ್ ಜೈನ್, ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ ಮುಖ್ಯ ಶಿಕ್ಷಕಿ ಸುಜಾತ ಬಿ ಮತ್ತು ಎಲ್ಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ವಿಜ್ಞಾನ ವಿಭಾಗದ ಶಿಕ್ಷಕಿ ಕಾವ್ಯಶ್ರೀ. ಎನ್ ಕಾರ್ಯಕ್ರಮವನ್ನು ಸಮಗ್ರವಾಗಿ ನಿರ್ವಹಿಸಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ಸಹಕರಿಸಿದರು.

Related posts

ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಉಜಿರೆ ಅನುಗ್ರಹ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಆ.15ರಿಂದ ಶೃಂಗೇರಿಯ ಶಾರದಾಂಬೆ ದರ್ಶನಕ್ಕೆ ‘ವಸ್ತ್ರ ಸಂಹಿತೆ’ ಜಾರಿ!

Suddi Udaya

ಮಾಜಿ ಶಾಸಕರಾದ ಕೀರ್ತಿಶೇಷ ಕೆ. ವಸಂತ ಬಂಗೇರರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ

Suddi Udaya

ಸೆ.15: ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘ ಅರಸಿನಮಕ್ಕಿ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಕನ್ಯಾಡಿ : ಪಡ್ಪು- ಬೊಳಿಯೆಂಜಿ- ಮೂಡಬೆಟ್ಟು ರಸ್ತೆ ಅಭಿವೃದ್ಧಿಗೆ 3 ಕೋಟಿ ಅನುದಾನ ಮಂಜೂರು: ರಕ್ಷಿತ್ ಶಿವರಾಂ

Suddi Udaya
error: Content is protected !!