37.4 C
ಪುತ್ತೂರು, ಬೆಳ್ತಂಗಡಿ
March 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಡಾ. ಟಿ. ವಿ. ಜೋಸೆಫ್ ರಸ್ತೆ” ನಾಮಫಲಕ ಅನಾವರಣ – ಕಾರುಣ್ಯ ಸ್ಪರ್ಶಂ ಯೋಜನೆಯಡಿ ಚಿಕಿತ್ಸಾ ಸಹಾಯಧನ

ಕಳೆಂಜ: ದಿವಂಗತ ಡಾ. ಟಿ. ವಿ. ಜೋಸೆಫ್ ಅವರ 41ನೇ ದಿನದ ಪುಣ್ಯ ಸ್ಮರಣೆ ಅಂಗವಾಗಿ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ (ರಿ.) ವತಿಯಿಂದ ಆಯೋಜಿಸಲಾದ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ಚಿಕಿತ್ಸಾ ಸಹಾಯಧನ ಹಸ್ತಾಂತರ ಕಾರ್ಯಕ್ರಮವು ಕಳೆಂಜದ ಸೇಂಟ್ ಸೆಬಾಸ್ಟಿಯನ್ ಚರ್ಚ್ ಸಭಾಂಗಣದಲ್ಲಿ ನೆರವೇರಿತು.

ಸಭಾ ಕಾರ್ಯಕ್ರಮಕ್ಕೆ ಪೂರ್ವವಾಗಿ ಕಾಯರ್ತಡ್ಕ – ಶಿಬರಾಜೆ ರಸ್ತೆಗೆ “ಡಾ. ಟಿ. ವಿ. ಜೋಸೆಫ್ ರಸ್ತೆ” ಎಂದು ನಾಮಕರಣ ಮಾಡಿ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಅಕ್ರಮ–ಸಕ್ರಮ ಸಮಿತಿ ಬೆಳ್ತಂಗಡಿ ತಾಲೂಕಿನ ಸದಸ್ಯರಾದ ಶ್ರೀಧರ್ ಎಸ್ ಅವರು ನಾಮಫಲಕವನ್ನು ಅನಾವರಣಗೊಳಿಸಿದರು.

ನಂತರ ನಡೆದ ಸಭೆಯಲ್ಲಿ ದಿವಂಗತ ಡಾ. ಜೋಸೆಫ್ ಟಿ. ವಿ ಅವರ ಸ್ಮರಣಾರ್ಥ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಘದ ಅಧ್ಯಕ್ಷರಾದ ಅಗಸ್ಟೀನ್ ಟಿ. ಎ ಅವರು ಸ್ವಾಗತ ಹಾಗೂ ಪ್ರಸ್ತಾವಿಕ ನುಡಿಯನ್ನು ನೀಡಿದರು. ಬಳಿಕ ಗಣ್ಯ ಅತಿಥಿಗಳಿಂದ ದೀಪ ಪ್ರಜ್ವಲನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ CBK ಕಾರುಣ್ಯ ಸ್ಪರ್ಶಂ ಯೋಜನೆ ಅಡಿಯಲ್ಲಿ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಘಟನೆಯಿಂದ ಸಂಗ್ರಹಿಸಲಾದ ₹5,45,971/- ಮೊತ್ತವನ್ನು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ, ಮಗುವಿನ ತಂದೆಯಾದ ಬಿಜು ಪಟ್ಟತ್ತಾನಂ ಅವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಳೆಂಜ ಮತ್ತು ಬಟ್ಯಾಲ್ ಧರ್ಮಗುರುಗಳಾದ ಫಾ. ಸುನಿಲ್ ಪೂವತಿಂಗಲ್ ಮಾತನಾಡಿ, ಡಾ. ಜೋಸೆಫ್ ಅವರ ಸೇವಾ ಮನೋಭಾವ ಹಾಗೂ ಮಾನವೀಯತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಡಾ. ಜೋಸೆಫ್ ಅವರ ಸ್ನೇಹಿತ ಹಾಗೂ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಘದ ಗೌರವಾಧ್ಯಕ್ಷರಾದ ಸೆಬಾಸ್ಟಿಯನ್ ಪಿ. ಟಿ ಅವರು ಡಾಕ್ಟರ್ ಅವರ ಸೇವಾ ಜೀವನವನ್ನು ಸ್ಮರಿಸಿದರು. ಮುಖ್ಯ ಭಾಷಣಕಾರರಾಗಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಅತಿಥಿಗಳಾಗಿ ಕೃಷ್ಣಪ್ಪ (ಮುಖ್ಯೋಪಾಧ್ಯಾಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ), ಪದ್ಮನಾಭ ಗೌಡ (ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ನಿಡ್ಲೆ) ಹಾಗೂ ಚಂದ್ರಶೇಖರ ಗೌಡ (ಅಸಿಸ್ಟೆಂಟ್ ಪ್ರಿನ್ಸಿಪಾಲ್, ಅಭ್ಯಾಸ್ ಕಾಲೇಜ್, ಕಾಶಿಬೆಟ್ಟು) ಅವರು ಮಾತನಾಡಿ ಡಾ. ಜೋಸೆಫ್ ಅವರ ಸೇವಾ ಜೀವನವನ್ನು ಸ್ಮರಿಸಿದರು.

ಸಾರ್ವಜನಿಕ ಅಭಿಮಾನಿ ಬಳಗದ ಪರವಾಗಿ ಶ್ರೀಧರ್ ರಾವ್ (ಆಡಳಿತ ಮೊಕ್ತೇಸರು, ಸದಾಶಿವೇಶ್ವರ ದೇವಸ್ಥಾನ ಕಳೆಂಜ), ಸಲಿಮೋನ್ ಪುದುವೆಟ್ಟು, ಲಕ್ಷ್ಮಣ ಗೌಡ ಪಾಂಗಳ (ಪ್ರಗತಿಪರ ಕೃಷಿಕರು), ಶೆರ್ಲೀ ಶಿಬು (ನರ್ಸಿಂಗ್ ಸೂಪರಿಡೆಂಟ್, SDM ಆಸ್ಪತ್ರೆ ಉಜಿರೆ) ಹಾಗೂ ಜಾರ್ಜ್ (ಸದಸ್ಯರು, ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ) ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಗಂಗಾಧರ ಭಂಡಾರಿ, ಪ್ರೇಮ (ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಕಳೆಂಜ), ಪ್ರಸನ್ನ (ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಕಳೆಂಜ), ಆನಂದ ಗೌಡ (ಅಧ್ಯಕ್ಷರು, ಉಮಾಮಹೇಶ್ವರ ದೇವಸ್ಥಾನ ಕಳೆಂಜ), ಸಂತೋಷ ಕುಮಾರ್ ಜೈನ್ (ಅಧ್ಯಕ್ಷರು, ಗ್ರಾಮಾಭ್ಯುದಯ ಅನುಷ್ಠಾನ ಸಮಿತಿ ಶಿಬರಾಜೆ), ಗಫೂರ್ (ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಪುದುವೆಟ್ಟು), ರೋಯಿ (ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಪುದುವೆಟ್ಟು), ಆನಂದ ಕೃಷ್ಣ ನೂಜಿಲ ಸೇರಿದಂತೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಸಹಾಯಧನ ಸ್ವೀಕರಿಸಿದ ಮಗುವಿನ ತಂದೆಯಾದ ಬಿಜು ಪಟ್ಟತ್ತಾನಂ ಅವರು ಸಹಾಯ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಘದ ಗೌರವ ಸಲಹೆಗಾರರಾದ ಜೋಸೆಫ್ ಕೆ. ಡಿ ಅವರು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿಯಾದ ಶಿಜೋ ಜೋಸೆಫ್ ನಿರೂಪಿಸಿದರು.

ಅನಂತರ ಅಭಿಮಾನಿಗಳು ಹಾಗೂ ಸಾರ್ವಜನಿಕರು ದಿವಂಗತ ಡಾ. ಜೋಸೆಫ್ ಟಿ. ವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಘದ ಉಪಾಧ್ಯಕ್ಷರಾದ ಮ್ಯಾಥ್ಯೂ ವಿ. ಟಿ., ಕೋಶಾಧಿಕಾರಿಯಾದ ರಂಜಿತ್ ಪಿ. ಎಸ್., ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಿದರು.

Related posts

ಉಜಿರೆಯಲ್ಲಿ ನ್ಯೂ ತ್ರಿಲೋಕ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ & ಕಾಸ್ಯೂಮ್ ಸೆಂಟರ್ ಪ್ರಾರಂಭೋತ್ಸವ ಡ್ಯಾನ್ಸ್ ತರಭೇತಿ ಪಡೆಯುವವರಿಗೆ ತ್ರಿಲೋಕ್ ಉತ್ತಮ ವೇದಿಕೆ- ಸುಧೀರ್ ಜೈನ್

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಟಿ ಔಷಧಿಗಳ ಪ್ರಾತ್ಯಕ್ಷಿಕೆ

Suddi Udaya

ಮರೋಡಿ ಗ್ರಾ. ಪಂ. ನಲ್ಲಿ ವಿಕಲಚೇತನರ ಸಮನ್ವಯ ವಿಶೇಷ ಗ್ರಾಮ ಸಭೆ

Suddi Udaya

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಈಜಲು ತೆರಳಿದ ಉಪನ್ಯಾಸಕರಿಬ್ಬರು ನೀರುಪಾಲು: ಬೆಳ್ತಂಗಡಿ ತಾಲೂಕಿನ ನೆರಿಯಾ ನಿವಾಸಿ ಪುನೀತ್ ನಾಪತ್ತೆ, ಮುಂದುವರಿದ ಶೋಧಕಾರ್ಯ

Suddi Udaya

ಬಿಜೆಪಿ ಜಿಲ್ಲಾ ಎಸ್.ಟಿ ಮೋರ್ಚಾ ವತಿಯಿಂದ ಎಸ್.ಟಿ ಮೋರ್ಚಾ ಅಧ್ಯಕ್ಷ ರಾಜೇಶ್ ರವರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

Suddi Udaya

ಮೇಲಂತಬೆಟ್ಟು: ಅಣ್ಣು ಪೂಜಾರಿ ಅಡ್ಕದಬೈಲ್ ನಿಧನ

Suddi Udaya
error: Content is protected !!