November 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪಿಎಂ ಶ್ರೀ ಸರ್ಕಾರಿ ಮಾದರಿ ಬೆಳ್ತಂಗಡಿ ಶಾಲೆಗೆ ಧರ್ಮಸ್ಥಳದ ‘ಜ್ಞಾನ ವಿಕಾಸ’ ತಂಡ ಭೇಟಿ: ಸ್ಮಾರ್ಟ್ ಕ್ಲಾಸ್ ವೀಕ್ಷಣೆ

​ಬೆಳ್ತಂಗಡಿ: ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ಶ್ರೀ ವಿಠಲ ಪೂಜಾರಿಯವರು ಭೇಟಿ ನೀಡಿ, ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ನೂತನ ಸೌಲಭ್ಯಗಳನ್ನು ವೀಕ್ಷಿಸಿದರು.

ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿಶೇಷ ಅನುದಾನದಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ (Smart Class) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಡಿಜಿಟಲ್ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ಒದಗಿಸಲಾಗಿದ್ದು, ಇದರ ಕಾರ್ಯನಿರ್ವಹಣೆ ಮತ್ತು ಉಪಯುಕ್ತತೆಯ ಬಗ್ಗೆ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಠಲ ಪೂಜಾರಿ ಮಾತನಾಡಿ “ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಶಿಕ್ಷಣ ಲಭಿಸುವಂತಾಗಬೇಕು ಎನ್ನುವುದು ಪೂಜ್ಯ ಹೆಗ್ಗಡೆಯವರ ಆಶಯವಾಗಿದೆ. ಈ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯು ಮಕ್ಕಳ ಜ್ಞಾನಾರ್ಜನೆಗೆ ಹೊಸ ಆಯಾಮ ನೀಡಲಿದೆ,” ಎಂದರು.

ಈ ಸಂದರ್ಭದಲ್ಲಿ ಜ್ಞಾನ ವಿಕಾಸ ವಿಭಾಗದ ತಾಲೂಕು ಸಮನ್ವಯಾಧಿಕಾರಿ ಮಧುರ, ಬೆಳ್ತಂಗಡಿ ವಲಯದ ಮೇಲ್ವಿಚಾರಕ ರವಿ, ಒಕ್ಕೂಟದ ಅಧ್ಯಕ್ಷ ದಯಾನಂದ, ಯಶೋಧ ಹಾಗೂ ಚರಣ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದದವರು ಸ್ವಾಗತಿಸಿ, ವಂದಿಸಿದರು.

Related posts

ಚಾರ್ಮಾಡಿ: ಅರಣ್ಯ ಇಲಾಖೆಯಿಂದಸತ್ತ ಆನೆಯ ದಫನ: ಆನೆಯ ಎರಡು ದಂತ ಸ್ವಾಧೀನ ಪಡಿಸಿಕೊಂಡ ಅಧಿಕಾರಿಗಳು

Suddi Udaya

ಉಜಿರೆ : ಎಸ್. ಡಿ. ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ‘ಗೋಡೆ ಬರಹ’ ಅನಾವರಣ”

Suddi Udaya

ಮೇ 4: ವಿದ್ಯುತ್ ನಿಲುಗಡೆ

Suddi Udaya

ಎಸ್‌ಡಿಎಂ ಪಾಲಿಟೆಕ್ನಿಕ್‌ನಲ್ಲಿ ಪೂಲ್ ಕ್ಯಾಂಪಸ್ ಡ್ರೈವ್: 250 ಡಿಪ್ಲೊಮಾ ವಿದ್ಯಾರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿ

Suddi Udaya

ಬೆಳ್ತಂಗಡಿ : ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆ

Suddi Udaya

ಜೆಸಿಐ ಮಡಂತ್ಯಾರು ವತಿಯಿಂದ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ

Suddi Udaya
error: Content is protected !!