September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಮಾ.28: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ, ಮಕ್ಕಳ ಕವಿಗೋಷ್ಠಿಗೆ ಆಹ್ವಾನ

ಕಾಸರಗೋಡು: ಮಕ್ಕಳ ಸಾಹಿತ್ಯವನ್ನು ಪುನಶ್ಚೇತನಗೊಳಿಸಿ ಮಕ್ಕಳ ಸಾಹಿತಿಗಳು,ಕವಿ, ಕವಯತ್ರಿಯರು, ಬರಹಗಾರರು, ಸಾಹಿತಿಗಳಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಇದರ ಕೇರಳ ರಾಜ್ಯ ಘಟಕವಾಗಿ 2019 ರಲ್ಲಿ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕವು ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯೋತ್ಸವ, ಮಕ್ಕಳ ಕವಿಗೋಷ್ಠಿ ಮತ್ತು ಕನ್ನಡಪರ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡಿರುತ್ತದೆ.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕನ್ನಡ ಗ್ರಾಮ, ಕಾಸರಗೋಡು ಇದರ ಸಹಯೋಗದಲ್ಲಿ ಕರ್ನಾಟಕ ಸರಕಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇದರ ಸಹಕಾರದಲ್ಲಿ ಕಾಸರಗೋಡು ಮೀಪುಗುರಿ ಪಾರೆಕಟ್ಟೆಯ ಕನ್ನಡ ಗ್ರಾಮದ ಕಾಸರಗೋಡು ಗೋ – ಕುಟೀರದಲ್ಲಿ 2026 ಮಾ.28ರಂದು ಅಪರಾಹ್ನ ಗಂಟೆ 3.30 ಕ್ಕೆ ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ, ಮಕ್ಕಳ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ, ಕಿರಿಯ ಮಕ್ಕಳ ಸಾಹಿತಿಗಳು,ಕವಿ, ಕವಯತ್ರಿಯರು ಹಾಗೂ 1ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿ ಕವಿಗಳು, ಕಾಲೇಜ್ ವಿದ್ಯಾರ್ಥಿ ಕವಿಗಳು ತಮ್ಮ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ವಾಟ್ಸ್ ಪ್ ಮೂಲಕ ಕಳುಹಿಸಬೇಕು. ಮಕ್ಕಳ ಕವನಗಳನ್ನು ವಾಚಿಸಲು ಅವಕಾಶ ನೀಡಲಾಗಿದೆ.
ಭಾಗವಹಿಸಿದ ಕವಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.

ಶಿವರಾಮ ಕಾಸರಗೋಡು, ಅಧ್ಯಕ್ಷರು,ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ,ಕನ್ನಡ ಗ್ರಾಮ, ಗ್ರಾಮರಸ್ತೆ, ಕಾಸರಗೋಡು-671121 ಮೊಬೈಲ್ :-9448572016 ಇವರನ್ನು ಸಂಪರ್ಕಿಸಬಹುದು. ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ “ಕಾಸರಗೋಡು ಗೋ – ಕುಟೀರ”ದಲ್ಲಿ ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ ಮತ್ತು ಮಕ್ಕಳ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

Related posts

ಕೌಟುಂಬಿಕ ಕಲಹ: ಜೀವ ಬೆದರಿಕೆ

Suddi Udaya

ಗ್ರಾಮ ಪಂಚಾಯತ್ ನೌಕರರ ಶ್ರೇಯ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾಗಿ ಸತೀಶ್ ನಾರಾವಿ ಆಯ್ಕೆ

Suddi Udaya

ಅರಣ್ಯ ಇಲಾಖೆಯ ಸಹಯೋಗದಲ್ಲಿ ರಸ್ತೆ ನಿರ್ಮಾಣ ಆಗಲಿ :ಮೋಹನ್ ಗೌಡ ಕಲ್ಮoಜ

Suddi Udaya

ಸುದೆಮುಗೇರು ವೃದ್ಧಾಶ್ರಮದಲ್ಲಿ. ದೇಶದ ಪ್ರಥಮ ಮಹಿಳಾ ಪ್ರಧಾನಿ , ಭೂಸುಧಾರಣಾ ಕಾಯ್ದೆಯ ರೂವಾರಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ

Suddi Udaya

ನೆರಿಯ : ಹಾಡಹಾಗಲೇ ಮನೆಗೆ ನುಗ್ಗಿ ರೂ.3.12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕಣಿಯೂರು ಗ್ರಾ.ಪಂ. ನಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಕೈ ಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya
error: Content is protected !!