ಬೆಳ್ತಂಗಡಿ: 2025 ಮಾ. 17 ರ ಕಾರ್ಯಾದೇಶದಂತೆ ಉಜಿರೆ ಗ್ರಾಮದ ವಿದ್ಯುತ್ ಘಟಕವನ್ನು 2026 ಮಾ.16 ರೊಳಗೆ ಲೋಕಾರ್ಪಣೆ ಮಾಡಬೇಕಾಗಿದ್ದು ಅರಣ್ಯ ಇಲಾಖೆಯ ಅನುಮತಿ ದೊರೆಯದ ಕಾರಣ ವಿಳಂಬವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಅವರು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಮಾ.9 ರಂದು ಸದನದಲ್ಲಿ ಉಜಿರೆ ಗ್ರಾಮದಲ್ಲಿನ 33 ಕೆ.ವಿ. ವಿದ್ಯುತ್ ಘಟಕವನ್ನು ಯಾವ ಕಾಲಮಿತಿಯೊಳಗೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಕೇಳಿದ ಚುಕ್ಕೆ ಪ್ರಶ್ನೆಗೆ
ಸಚಿವರು ಉತ್ತರಿಸಿದರು.
ಉಜಿರೆ ಗ್ರಾಮದಲ್ಲಿ 33ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು 2025 ಮಾ. 17 ರಂದು ಗುತ್ತಿಗೆ ಆದೇಶ ನೀಡಲಾಗಿದೆ. ಉಪಕೇಂದ್ರದ ಸ್ಥಾಪನೆಗೆ ಮಂಜೂರಾಗಿರುವ ಸರ್ಕಾರಿ ಜಮೀನಿನಲ್ಲಿರುವ ಕೆಲವೊಂದು ಮರು-ಗಿಡಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಇರುವುದರಿಂದ, ಇಲಾಖೆಯ ಮಂಜೂರಾತಿಗಾಗಿ ದಿನಾಂಕ:21.11.2025 ರಂದು ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಅರಣ್ಯ ಇಲಾಖೆಯ ಮಂಜೂರಾತಿ ದೊರೆತ ನಂತರ ಉಪಕೇಂದ್ರದ ಕಾಮಗಾರಿ ಪ್ರಾರಂಭಿಸಬೇಕಾಗಿರುತ್ತದೆ.
33 ಕೆವಿ ಉಪಕೇಂದ್ರಕ್ಕೆ ಅಗತ್ಯವಿರುವ ವಿದ್ಯುತ್ ಮಾರ್ಗ:- 231 ಸಂಖ್ಯೆಯ ಸ್ಮನ್ ಪೋಲ್ ಮತ್ತು 211 ಸಂಖ್ಯೆಯ ಟವರ್ ಗಳನ್ನು , 21.433 8., 33 ವಿದ್ಯುತ್ ಮಾರ್ಗವನ್ನು ನಿರ್ಮಿಸಬೇಕಾಗಿದ್ದು ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದ್ದು, 136 ಸಂಖ್ಯೆಯ 11 ಮೀಟರ್ ಸ್ಮನ್ ಪೋಲ್‌ಗಳು ಹಾಗೂ 91 ಸಂಖ್ಯೆಯ ಟವರ್‌ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿರುತ್ತದೆ.
ಕಾಮಗಾರಿಗೆ ಬೆಳ್ತಂಗಡಿ ತಾಲೂಕು, ಉಜಿರೆ ಗ್ರಾಮದ ಜಮೀನು ಸರ್ವನಂ:393/3ರಲ್ಲಿ 0.96 ಎಕರೆ ಸರ್ಕಾರಿ ಮಂಜೂರಾಗಿರುತ್ತದೆ. ಜಿಲ್ಲಾಧಿಕಾರಿಯವರ ಸಂಬಂಧಪಟ್ಟ ಮೊತ್ತಗಳನ್ನು ಪಾವತಿಸಿ, ಮೆಸ್ಕಾಂ ಹೆಸರಿಗೆ RTC ಆದೇಶದಂತೆ ವರ್ಗಾವಣೆಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.
ಮೆಸ್ಕಾಂನ ಬಂಡವಾಳ ಕಾಮಗಾರಿ ಯೋಜನೆಯಡಿ ಕಾಮಗಾರಿಗೆ ಪರಿಷ್ಕೃತ ಅಂದಾಜು ವೆಚ್ಚದಂತೆ ರೂ.2636.32 ಲಕ್ಷ ನಿಗದಿಪಡಿಸಲಾಗಿದ್ದು, ಜನವರಿ-2026 ರ ಅಂತ್ಯಕ್ಕೆ, ರೂ. 489.13 ಲಕ್ಷ ವಿನಿಯೋಗಿಸಲಾಗಿದೆ. ಕಾಮಗಾರಿಯಲ್ಲಿ ಉಪಕೇಂದ್ರ ಸ್ಥಾಪನೆಗೆ ಬೇಕಾಗಿರುವ ಜಾಗವನ್ನು ಈಗಾಗಲೇ ನಿಗದಿ ಪಡಿಸಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಪ್ರಸ್ತುತ ಸದರಿ ಜಾಗದಲ್ಲಿನ ಮರಗಳನ್ನು ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆ ಆಕ್ಷೇಪಣೆ ಇರುವುದರಿಂದ, ಉಪಕೇಂದ್ರ ನಿರ್ಮಾಣ ಕಾಮಗಾರಿ ಆರಂಭವಾಗಿರುವುದಿಲ್ಲ ಎಂದು ಲಿಖಿತ ಉತ್ತರ ನೀಡಿದ್ದಾರೆ.












