22.2 C
ಪುತ್ತೂರು, ಬೆಳ್ತಂಗಡಿ
September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿಸಂಘ-ಸಂಸ್ಥೆಗಳು

ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ವತಿಯಿಂದ 15ನೇ ವರ್ಷದ ಶನಿಪೂಜೆ

ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ವತಿಯಿಂದ 15 ನೇ ವರ್ಷದ ಶನಿಪೂಜೆ ಯು. ಕೆಳ ಅನಂತ ಅಸ್ರಣ್ಣ ಅವರ ಪೂಜಾ ವಿಧಾನ ಮೂಲಕ ನಡೆಯಿತು.

ಸಭಾ ಕಾರ್ಯಕ್ರಮ ದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಪ್ರಖರ ವಾಗ್ಮಿ, ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋದನ, ಪರಿಸರ ರಕ್ಷಣೆ, ಸ್ವದೇಶೀ, ನಾಗರೀಕ ಕರ್ತವ್ಯ ದ ಬಗ್ಗೆ ಸವಿವಾರವಾಗಿ ಮಾತನಾಡಿದರು.

ಶಾಸಕ ಹರೀಶ್ ಪೂಂಜ ರವರು ಮಹಿಳಾ ಘಟಕದ ಎಲ್ಲಾ ಸದಸ್ಯರಿಗೆ ಸೀರೆ ನೀಡಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯಕಾರಣಿ ಸಮಿತಿ ಅಧ್ಯಕ್ಷ ಹರೀಶ್ ಮರೆಜಲ್, ಮಹಿಳಾ ಘಟಕ ಅಧ್ಯಕ್ಷೆ ಪವಿತ್ರ ಪಯ್ಯಬೆಟ್ಟು, ಟ್ರಸ್ಟ್ ಅಧ್ಯಕ್ಷ ರಕ್ಷಿತ್ ಆರ್ ಗುರುರಕ್ಷಾ, ಭಾಗವಹಿಸಿದ್ದರು.

ವಿದ್ಯಾ ರಕ್ಷಿತ್ ಸ್ವಾಗತಿಸಿ, ಶಶಿ ಆಚಾರ್ಯ ಧನ್ಯವಾದವಿತ್ತರು. ನಂತರ ಕಾಪು ರಂಗತರಂಗ ಕಲಾವಿದರಿಂದ ಶೋಬಜಿ ಎಂಬ ನಾಟಕ ನಡೆಯಿತು.

Related posts

ಕನ್ಯಾಡಿಯ ಶ್ರೀ ಗುರುದೇವ ಮಠದಲ್ಲಿ 169ನೇ ವಷ೯ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ

Suddi Udaya

ಅರಸಿನಮಕ್ಕಿಯಲ್ಲಿ ಹತ್ಯಡ್ಕ – ರೆಖ್ಯ ಗ್ರಾಮಗಳ ಬಿಜೆಪಿ ಶಕ್ತಿಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ/ ಉಪಾಧ್ಯಕ್ಷರ ಆಯ್ಕೆ

Suddi Udaya

ಬೆಳ್ತಂಗಡಿ: ಆಸ್ಪತ್ರೆಯ ಶೆಡ್ಡಿನಲ್ಲಿ ನಿಲ್ಲಿಸಿದ್ದ ಪಶು ವೈದ್ಯಾಧಿಕಾರಿ ಯವರ ಬೈಕ್ ಕಳವು

Suddi Udaya

ಮಧ್ವ ಯಕ್ಷಕೂಟ ಮಡಂತ್ಯಾರು ವಲಯ ಸಮಿತಿ ಪೂರ್ವಭಾವಿ ಸಭೆ:ನೂತನ ಸಮಿತಿ ಅಧ್ಯಕ್ಷರಾಗಿ ರವಿಶಂಕರ್ ಶೆಟ್ಟಿ ಆಯ್ಕೆ

Suddi Udaya

ಸವಣಾಲು: ಕೋಡಿಮುಗೇರು ಶ್ರೀ ಬ್ರಹ್ಮಮುಗೇರ ಗುಳಿಗ ಮತ್ತು ಸ್ವಾಮಿ ಕೊರಗಜ್ಜ ದೈವಗಳ ಪುನರ್ ಪ್ರತಿಷ್ಠಾಪನ : ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!