36.1 C
ಪುತ್ತೂರು, ಬೆಳ್ತಂಗಡಿ
March 17, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಯಕ್ಷಗುರು ಮೋಹನ ಬೈಪಾಡಿತ್ತಾಯ ಉಜಿರೆ ಅವರಿಗೆ ತೆಂಕಬೈಲು ಪ್ರಶಸ್ತಿ

ಕಾಸರಗೋಡು ಜಿಲ್ಲೆಯ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಿಂದ ಕೊಡಲ್ಪಡುವ ತೆಂಕಬೈಲು ಪ್ರಶಸ್ತಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಭಾಗವತರು, ಹಿಮ್ಮೇಳದ ಗುರುಗಳಾದ ಮೋಹನ ಬೈಪಾಡಿತ್ತಾಯರಿಗೆ ಉಜಿರೆಯ ಓಡಲದ “ಶ್ರೇಯ” ನಿವಾಸದಲ್ಲಿ ಪ್ರದಾನಿಸಲಾಯಿತು.

ಪ್ರಶಸ್ತಿಯ ಪ್ರಾಯೋಜಕರು ಮತ್ತು ಭಾಗವತರಾದ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ಹಿಮ್ಮೇಳ ಕಲಾವಿದರಾದ ಚಂದ್ರಶೇಖರ ಭಟ್ ಕೊಂಕಣಾಜೆ, ಉಪನ್ಯಾಸಕ,ಕಲಾವಿದ ಜಯಪ್ರಕಾಶ ನಾಕೂರು, ಹವ್ಯಾಸಿ ಭಾಗವತ ವೆಂಕಟ್ರಮಣ ರಾವ್ ಬನ್ನೆಂಗಳ, ಉಪನ್ಯಾಸಕ ಪ್ರೊ. ಜಿ. ಪಿ ಹೆಗಡೆ ಮೋಹನ ಬೈಪಾಡಿತ್ತಾಯರನ್ನು ಅಭಿನಂದಿಸಿ ಮಾತನಾಡಿದರು.

.ಕಲಾವಿದ ವಿಶ್ವನಾಥ ಕೊಯ್ಯೂರು ಪ್ರಶಸ್ತಿ ಪತ್ರ ವಾಚಿಸಿದರು. ಪ್ರಶಸ್ತಿ ಪುರಸ್ಕೃತ ಮೋಹನ ಬೈಪಾಡಿತ್ತಾಯರ ಪತ್ನಿ ಶ್ರೀಮತಿ ಲಲಿತಾ ಅವರನ್ನು ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಮೋಹನ ಬೈಪಾಡಿತ್ತಾಯರು ಭಾಗವತ ತೆಂಕಬೈಲು ದಿ.ತಿರುಮಲೇಶ್ವರ ಶಾಸ್ತ್ರಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು ಪೆರ್ಲ ಯಕ್ಷ ತರಬೇತಿ ಕೇಂದ್ರದ ಕಲಾ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ಸ್ಥಾಪಕ ಮತ್ತು ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಕನ್ಯಾಡಿ ಯಕ್ಷಭಾರತಿ ಸಂಚಾಲಕ, ಭಾಗವತ ಮಹೇಶ ಕನ್ಯಾಡಿ ವಂದಿಸಿದರು .ಅಧ್ಯಾಪಕ ಗೋವರ್ಧನ ಎಮ್. ಮೂಡಬಿದಿರೆ , ಹಿಮ್ಮೇಳ ಕಲಾವಿದ ನಾರಾಯಣ ಶರ್ಮ ಸಹಕರಿಸಿದರು.

Related posts

ಬೆಳ್ತಂಗಡಿ ಎಸ್ ಡಿ ಎಮ್ ಶಾಲೆಯ ವಿದ್ಯಾರ್ಥಿಗಳು ಬುಲ್ ಬುಲ್ಸ್ ಗೀತಾ ಗಾಯನದಲ್ಲಿ ದ್ವಿತೀಯ

Suddi Udaya

ಬಂದಾರು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

Suddi Udaya

ವೀಲ್‌ ಚೇರ್ ಮೇಲೆ ಕುಳಿತುಕೊಂಡು ಎಳನೀರು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗೆ ಆಸರೆಯಾದ ಧರ್ಮಸ್ಥಳ ಸಿ.ಎ ಬ್ಯಾಂಕ್

Suddi Udaya

ನಾರಾವಿ: ಶ್ರೀಮತಿ ಯಮುನಾ ಬಾಂದೋಟ್ಟು ನಿಧನ

Suddi Udaya

ಅಳದಂಗಡಿಯಲ್ಲಿ ಹಿಂದೂ ರುದ್ರಭೂಮಿಗಾಗಿ ಮೀಸಲಾಗಿರುವ ಜಾಗವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya

ಮರೋಡಿ-ಪೆರಾಡಿ ಗ್ರಾಮಗಳಲ್ಲಿ ಮಹಾಮಳೆಗೆ ಅನಾಹುತ, ಅಗತ್ಯ ಕ್ರಮ ಕೈಗೊಂಡ ಪಂಚಾಯತ್ ಆಡಳಿತ

Suddi Udaya
error: Content is protected !!