September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕನ್ಯಾಡಿ ಸೇವಾಭಾರತಿಯಿಂದ ಉಡುಪಿಯಲ್ಲಿ 4 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

ಬೆಳ್ತಂಗಡಿ: ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಅದರಂತೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಗಿತ್ತು.

ಈ ತಿಂಗಳಲ್ಲಿ 32 ಗಾಲಿಕುರ್ಚಿಗಳನ್ನು ವಿತರಿಸುವುದಾಗಿ ನಿರ್ಧರಿಸಿದ್ದು ಮುಂಡ್ಕೂರಿನ ಶಶಿಧರ್, ಚಾರದ ಸಂತೋಷ್ ನಾಯ್ಕ್, ನಂದಿಕೂರಿನ ವಿದ್ಯಾನಾಥ್ ಶೆಟ್ಟಿ, ಹಜಮಾಡಿಯ ಜಗದೀಶ್ ರವರಿಗೆ ಉಡುಪಿ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರರು ಕೆ ವಿಜಯರಾಘವ ರಾವ್, ಭಾರತ್ ವಿಕಾಸ ಪರಿಷತ್ ನ ದಕ್ಷಿಣ ಪ್ರಾಂತ ಸಂಯೋಜಕರಾದ ಹರಿರಾಮ್ ಶೆಣೈ, ಭಾರತ್ ವಿಕಾಸ ಪರಿಷತ್ ಭಾರ್ಗವ ಶಾಖೆಯ ಕಾರ್ಯದರ್ಶಿ ಸುಬ್ರಾಯ ಶೆಣೈ, ಸೇವಾಭಾರತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ತೆಂಕಿಲ್ಲಾಯ ಹಾಗೂ ಉಡುಪಿ URW ಸರ್ವೋತ್ತಮ್ ಅಮೀನ್ ರವರು ಗಾಲಿಕುರ್ಚಿಯನ್ನು ಹಸ್ತಾಂತರಿಸಿ ಶುಭಹಾರೈಸಿದರು.

Related posts

ಬಟ್ಲಡ್ಕ ಜಮಾಅತ್ ನ ಉರೂಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Suddi Udaya

ಬಿಜೆಪಿಯ ಕೇಂದ್ರ ಸರಕಾರ ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್ ದರವನ್ನು ರೂ. 200 ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೂ. 400 ಇಳಿಸುವ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತರ್ಹ: ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌

Suddi Udaya

ಸುರತ್ಕಲ್ ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಸಭಾಂಗಣದ ಲೋಕಾರ್ಪಣೆ

Suddi Udaya

ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ನಾಗಬನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಕನ್ಯಾಡಿ ದೇವರಗುಡ್ಡೆ ಗುರುದೇವ ಮಠಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ:

Suddi Udaya

ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆ ಉದ್ಘಾಟನೆ

Suddi Udaya
error: Content is protected !!