September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಧರ್ಮಸ್ಥಳ ನೇತ್ರಾನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ “ಯಾತ್ರಾ ಆತಿಥ್ಯ” ಲೋಕಾರ್ಪಣೆ

ಬೆಳ್ತಂಗಡಿ: ನೇತ್ರಾನಗರ ಧರ್ಮಸ್ಥಳದಲ್ಲಿ ನಿರ್ಮಾಣಗೊಂಡ ನೂತನ ಸಂಸ್ಥೆ “ಯಾತ್ರಾ ಆತಿಥ್ಯ” ಇದರ ಉದ್ಘಾಟನಾ ಸಮಾರಂಭವು ಡಿ.5 ರಂದು ಉಜಿರೆಯ ಶ್ರೀ ಜನಾರ್ಧನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹಾಗೂ ಮಾಜಿ ಸಚಿವ, ಪ್ರಸನ್ನ ಎಜುಕೇಶನ್ ನ ಟ್ರಸ್ಟ್ ಅಧ್ಯಕ್ಷ ಗಂಗಾಧರ ಗೌಡ ರವರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ರಂಜನ್ ಜಿ ಗೌಡ, ರಾಘವೇಂದ್ರ ಬೈಪಡಿತ್ತಾಯ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಗುರುವಾಯನಕೆರೆ ನಿಸರ್ಗ ಕರ್ಟನ್ ನ ಮಾಲಕ ನಾಗೇಶ್ ಕೋಟ್ಯಾನ್, ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ಶ್ರೀಮತಿ ಅಪರ್ಣಾ ಗೌಡ ಮತ್ತು ಶಿವಕಾಂತ ಗೌಡ, ಮಮತಾ ಮತ್ತು ಶಿವರಾಮ ಗೌಡ ಅತಿಥಿ ಗಣ್ಯರುಗಳನ್ನು ಸ್ವಾಗತಿಸಿ,ಸತ್ಕರಿಸಿದರು. ಆಶಿಷ್ ಎಸ್ ಗೌಡ,ಶೃತ ಎಸ್ ಗೌಡ,ಶ್ರೇಯಸ್ ಎಸ್ ಗೌಡ, ತೇಜಸ್ ಎಸ್ ಗೌಡ ಮತ್ತು ಎಸ್.ಪಿ ಗ್ರೂಪ್ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಸರಿ ಸುಮಾರು 108 ರೂಮ್ಸ್ ಒಳಗೊಂಡಿರುವ ತಾಲೂಕಿನ ಬಲು ದೊಡ್ಡ ವಸತಿಗೃಹ ಕಟ್ಟಡ ಇದಾಗಿದೆ. 42000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಕಟ್ಟಡದಲ್ಲಿ 91 ಪ್ರೀಮಿಯಂ ರೂಮ್ಸ್, 8 ಪ್ರೀಮಿಯಂ ಸೂಟ್ ರೂಮ್ಸ್, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ,ಮಕ್ಕಳ ಆಟದ ಗ್ರೌಂಡ್, ವೇಜ್ ರೆಸ್ಟೊರೆಂಟ್, ನೀರಿನ ಕಾರಂಜಿ,ಸುಂದರವಾದ ಗಾರ್ಡನ್, ಗಿಪ್ಟ್ ಶಾಪ್,ಶಾಪಿಂಗ್ ಸೆಂಟರ್, ಹವಾನಿಯಂತ್ರಿತ ಹಾಗೂ ರಹಿತ ಸೌಲಭ್ಯಗಳಿದ್ದು ಸುಮಾರು ೫೦ ಮಂದಿಗೆ ಉದ್ಯೋಗವಕಾಶ ಸೃಷ್ಟಿಯಾಗಿದೆ.

Related posts

ಲಾಯಿಲದ ಗ್ಯಾಸ್ ಕಚೇರಿಯೊಂದರಲ್ಲಿ ಮ್ಯಾನೇಜರ್ – ಗ್ರಾಹಕರ ನಡುವೆ ಗಲಾಟೆ

Suddi Udaya

ಮರೋಡಿ: ಹಾರೋದ್ದು ನಿವಾಸಿ ಗೀತಾ ನಿಧನ

Suddi Udaya

ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಕ್ರೀಡಾಕೂಟ: ನಾವೂರು ಶಾಲೆ ವಿದ್ಯಾರ್ಥಿ ಜೀವಿತ್ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಬಜಿರೆ ಪಿ.ಎಂ. ಶ್ರೀ ಸ. ಉ. ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಮಡಂತ್ಯಾರು : ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿರ್ದೇಶಕರಾಗಿ ರಕ್ಷಿತ್ ಶಿವರಾಂ ಆಯ್ಕೆ

Suddi Udaya
error: Content is protected !!