24.7 C
ಪುತ್ತೂರು, ಬೆಳ್ತಂಗಡಿ
August 5, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ದ.ಕ. ಫ್ಲವರ್ ಡೆಕೊರೇಷನ್ ಮಾಲಕರ ಸಂಘ: ಬೆಳ್ತಂಗಡಿ ವಲಯದ ಅಧ್ಯಕ್ಷರಾಗಿ ಸೀತಾರಾಮ್ ಆರ್. ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಮ್ ಗೌಡ ಧರ್ಮಸ್ಥಳ

ಬೆಳ್ತಂಗಡಿ: ದ.ಕ. ಫ್ಲವರ್ ಡೆಕೊರೇಷನ್ ಮಾಲಕರ ಸಂಘ ಮಂಗಳೂರು ಇದರ ಬೆಳ್ತಂಗಡಿ ತಾಲೂಕು ವಲಯದ ಪ್ರಥಮ ಸಭೆಯು ಬೆಳ್ತಂಗಡಿ ಸಿ.ವಿ.ಸಿ.ಹಾಲ್ ನಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷ ಸುಲಕ್ಷಣ್ ರೈ, ಪ್ರಧಾನ ಕಾರ್ಯದರ್ಶಿ ಅನಿಲ್ ಕೊಟ್ಟಾರಿ, ಸ್ಥಾಪಕ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ನಿಕಟಪೂರ್ವ ಅಧ್ಯಕ್ಷ ತುಷಾರ್ ಸುರೇಶ್, ಜಿಲ್ಲಾ ಕೋಶಾಧಿಕಾರಿ ಡಿಕ್ಸನ್, ಉಪಾಧ್ಯಕ್ಷರಾದ ವೇಲ್ಲೇಟ್ ವಾಣಿ, ಉಮೇಶ್, ಹಿರಿಯ ಡೆಕೋರೆಟರ್ ವಿಲಿಯಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ತಾಲೂಕು ಘಟಕವನ್ನು ಬಲಿಷ್ಠ ಗೊಳಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸಂಘಟನೆಯ ಏಳಿಗೆಗಾಗಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಉಪಸ್ಥಿರಿದ್ದ ಸದಸ್ಯರು ಅನೇಕ ಧನಾತ್ಮಕವಾದ ಅಭಿಪ್ರಾಯಗಳು,ಸಮಸ್ಯೆಗಳ ಬಗ್ಗೆ,ಮುಂದೆ ಆಗಬೇಕಿರುವ ವ್ಯವಸ್ಥೆಗಳ ಬಗ್ಗೆ ಆಶಯ ವ್ಯಕ್ತಪಡಿಸಿದರು. ಸಭೆಯಲ್ಲಿ ಹೊಸ ಸದಸ್ಯರ ಸೇರ್ಪಡೆಗೊಳಿಸಿ ಅವರನ್ನು ಆತ್ಮೀಯವಾಗಿ ಸಂಘಟನೆಗೆ ಸ್ವಾಗತಿಸಲಾಯಿತು.

ಕೇಂದ್ರ ಸಮಿತಿಯ ಅಧ್ಯಕ್ಷ ಸುಲಕ್ಷಣ್ ಬಿ ರೈ ಮಾತನಾಡಿ ಸಂಘದ ಸದಸ್ಯರಿಗೆ ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಸಂಘ ಸದಾ ನಿಮ್ಮ ಜೊತೆ ನಿಲ್ಲುತ್ತದೆ ಎಂಬ ಭರವಸೆಯನ್ನು ನೀಡಿದರಲ್ಲದೆ ನಾವೆಲ್ಲರೂ ಒಗ್ಗಟ್ಟಾಗಿ ಸಂಘಕ್ಕೆ ದೂರದೃಷ್ಠಿಯ ಬುನಾದಿಯನ್ನು ಹಾಕೋಣ ಎಂದರು.

ಕೇಂದ್ರ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ತುಷಾರ್ ಸುರೇಶ್ ಶುಭ ಹಾರೈಸಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಿಲ್ ಕೊಟ್ಟಾರಿ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಸಂಘಟನೆ ಬಲಿಷ್ಠವಾಗಿಸಲು ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಫ್ಲವರ್ ಡೆಕೊರೇಟರ್ಸ್ ಮಾಲಕರ ಸಂಘದ ಸ್ದಾಪಕಾಧ್ಯಕ್ಷ ಅಶ್ವಿತ್ ಕೊಟ್ಟಾರಿ ಮಾತನಾಡಿ ಬೆಳ್ತಂಗಡಿ ತಾಲೂಕು ಘಟಕದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು ಮತ್ತು ಬೆಳ್ತಂಗಡಿ ಘಟಕದ ಶಿಸ್ತಿನ ನಿರ್ಧಾರಗಳು ಜಿಲ್ಲೆಗೆ ಮಾದರಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳಿಗೂ ಬೆಳ್ತಂಗಡಿ ವಲಯ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.

ಕೇಂದ್ರ ಸಮಿತಿ ಮಾಜಿ ಕೋಶಾಧಿಕಾರಿ ವಿಲ್ಫೆಡ್ ಪಿಂಟೋ, ಕೇಂದ್ರ ಸಮಿತಿಯ ನಿಕಟಪೂರ್ವ ಕೋಶಾಧಿಕಾರಿ ಸಂಜಯ್ ನಾಯಕ್, ಕೇಂದ್ರ ಸಮಿತಿಯ ಗೌರವಾನ್ವಿತ ಸದಸ್ಯರಾದ ವೇಲ್ಲೇಟ್ ವಾಣಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶುಭಂ ನಾಯಕ್ ಉಪಸ್ಥಿತರಿದ್ದರು.

ಬೆಳ್ತಂಗಡಿ ವಲಯದ ಡೆಕೊರೇಟರ್ಸ್ ಮಾಲಕರ ನೂತನ ಪಧಾದಿಕಾರಿಗಳ ಆಯ್ಕೆ ನಡೆದು ನೂತನ ವಲಯದ ಅಧ್ಯಕ್ಷರಾಗಿ ಸೀತಾರಾಮ್ ಆರ್ ಬೆಳ್ತಂಗಡಿ, ಉಪಾಧ್ಯಕ್ಷರಾಗಿ ಸುರೇಂದ್ರ ಕುಡ್ವ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಮ್ ಗೌಡ ಧರ್ಮಸ್ಥಳ, ಸಂಘಟನ ಕಾರ್ಯದರ್ಶಿಯಾಗಿ ಶಶಿಕಾಂತ್ ಇವರನ್ನು ಆರಿಸಲಾಯಿತು.

Related posts

ಸಿರಿಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಗೆ ನಟಿ ಪ್ರೇಮಾ ಭೇಟಿ

Suddi Udaya

ಜೆಸಿಐ ಬೆಳ್ತಂಗಡಿಯಿಂದ ಜೆಜೆಸಿ ತ್ರಿಷಾರವರಿಗೆ ಗೌರವರ್ಪಣೆ

Suddi Udaya

ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಕೈ ಮತ್ತು ಮೈಕ್ರೊಸರ್ಜರಿ ಸೇವೆಗೆ ಚಾಲನೆ

Suddi Udaya

ಮೈಸೂರಿನಲ್ಲಿ ನಾಪತ್ತೆಯಾಗಿದ್ದ ಸ್ಕೂಟರ್ ಉಜಿರೆಯಲ್ಲಿ ಪತ್ತೆ: ಬೆಳ್ತಂಗಡಿ ಸಂಚಾರಿ ಪೊಲೀಸರಿಂದ ಸ್ಕೂಟರ್ ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರ

Suddi Udaya

ಕುಕ್ಕೇಡಿ-ನಿಟ್ಟಡೆ ಕೋಟಿ ಚೆನ್ನಯ ಸೇವಾ ಸಂಘದ ವತಿಯಿಂದ ಉಚಿತ ಪುಸ್ತಕ ವಿತರಣೆ

Suddi Udaya

ವೇಣೂರು ಸರಕಾರಿ ಪ.ಪೂ. ಕಾಲೇಜಿಗೆ ಶೇ.94.47 ಫಲಿತಾಂಶ

Suddi Udaya
error: Content is protected !!