36.7 C
ಪುತ್ತೂರು, ಬೆಳ್ತಂಗಡಿ
March 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮಹಿಳಾ ಘಟಕದ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ: ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮಹಿಳಾ ಘಟಕದ ಉದ್ಘಾಟನಾ ಸಮಾರಂಭ ಮಾ.17ರಂದು ಮುಂಡಾಜೆಯ ಶ್ರೀ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಜರಗಿತು.

ನಿಡ್ಲೆಯ ಉದ್ಯಮಿ ಲಲಿತಾ ಲಕ್ಷ್ಮೀಶ ರಾವ್ ಕಾರ್ಯಕ್ರಮ ಉದ್ಘಾಟಿಸಿ ಸಾಧನೆಗೆ ಪ್ರಯತ್ನದ ಜತೆ ಛಲವು ಇರಬೇಕು. ಹಿರಿಯರನ್ನು ಗೌರವಯುತವಾಗಿ ಕಾಣುವುದರೊಂದಿಗೆ ಅವರ ಸಲಹೆ ಸೂಚನೆಗಳೊಂದಿಗೆ ಮುಂದುವರಿದರೆ ಉನ್ನತಿ ಗಳಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಮಾತನಾಡಿ ಮಹಿಳಾ ವಿಭಾಗ ಸ್ಥಾಪನೆಯಿಂದ ಸಂಘದ ಬಲ ಹೆಚ್ಚಿದೆ. ಮಹಿಳೆಯರ ಸಾಧನೆಗಳಿಗೆ ಉತ್ತಮ ವೇದಿಕೆ ನಿರ್ಮಾಣವಾಗಿದೆ ಎಂದರು.

ನೂತನ ಅಧ್ಯಕ್ಷೆ ಅಶ್ವಿನಿ ಎ. ಹೆಬ್ಬಾರ್ ಮಾತನಾಡಿ ಸಂಘಟನೆಗಳು ಸಾಧನೆಗೆ ಪ್ರೇರಣೆ ನೀಡುತ್ತವೆ. ಸಮಾಜದಲ್ಲಿ ಮಹಿಳೆಯರು ಸಾಕಷ್ಟು ಸಾಧನೆಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶಿವಳ್ಳಿ ಮಹಿಳಾ ಘಟಕದ ಅಧ್ಯಕ್ಷೆ ಜಯಾ ಅನಂತ ಕೃಷ್ಣ ಅರ್ಮುಡತ್ತಾಯ, ಸ್ಥಾನಿಕ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ರಾವ್, ಚಿತ್ಪಾವನ ಸಂಘದ ಭಾರತಿ ಫಡಕೆ, ನಾರಾಯಣ ಫಡಕೆ ಶುಭ ಹಾರೈಸಿದರು.

ತಾಲೂಕು ಚಿತ್ಪಾವನ ಸಂಘಟನೆ ಕಾರ್ಯದರ್ಶಿ ಸುಷ್ಮಾ ಭಿಡೆ ಸ್ವಾಗತಿಸಿದರು. ಚಿತ್ರಾ ಭಿಡೆ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ಡಾ. ದೀಪಾಲಿ ಡೋಂಗ್ರೆ ವಂದಿಸಿದರು. ಖಜಾಂಜಿ ಡಾ. ಸುಷ್ಮಾ ಡೋಂಗ್ರೆ ಅತಿಥಿಗಳ ಪರಿಚಯ ನೀಡಿದರು.

Related posts

ಭಾರತೀಯ ಸೇನೆಯಲ್ಲಿ 28 ವರ್ಷಗಳ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಸುಬೇದಾರ್ ಮೇಜರ್ ಶಿವಕುಮಾರ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ಕಾರ್ಯಗಾರ

Suddi Udaya

ಎಸ್.ಡಿ.ಎಂ ಕಾಲೇಜು : ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪೂರ್ವಾಭ್ಯಾಸ ಶಿಬಿರ

Suddi Udaya

ಬಳಂಜ ಗ್ರಾ.ಪಂ. ನಲ್ಲಿ ಕೈ ಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya

ಪಟ್ರಮೆ ದಡಂತಮಲೆ ಅರಣ್ಯದಲ್ಲಿ ಅಕ್ರಮವಾಗಿ ಕಡವೆ ಭೇಟೆ – ಕೊವಿ ಸಹಿತ ಮೂವರನ್ನು ವಶಕ್ಕೆ ಪಡೆದ ಉಪ್ಪಿನಂಗಡಿ ಅರಣ್ಯ ಇಲಾಖೆ

Suddi Udaya

ಸುಲ್ಕೇರಿ ಗ್ರಾ.ಪಂ. ನಲ್ಲಿ ವಿಶೇಷಚೇತನರ ಸಮನ್ವಯ ಗ್ರಾಮಸಭೆ

Suddi Udaya
error: Content is protected !!