September 17, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ವಂಚನೆ ಪ್ರಕರಣ:ಸೊಸೈಟಿಯ ಇಂದಿನ ಮಹಜರು ಅಂತ್ಯಗೊಳಿಸಿದ ಸಿಐಡಿ ತಂಡ

ಬೆಳ್ತಂಗಡಿ: ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ರಿ) ಯಲ್ಲಿ ಗ್ರಾಹಕರ ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂಪಾಯಿ ಹಣವನ್ನು ವಂಚನೆ ಮಾಡಿದ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಸೊಸೈಟಿಯಲ್ಲಿ ಇಂದಿನ ಮಹಜರು ಕಾರ್ಯ ಅಂತ್ಯ ಮಾಡಿ ವಾಪಸ್ ತೆರಳಿದ್ದಾರೆ.

ಬೆಳ್ತಂಗಡಿ ನಗರದ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿರುವ ರಾಮನಗರದ ವಿ.ಆರ್.ನಾಯಕ್ ಕಾಂಪೌಂಡ್ ನಲ್ಲಿರುವ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ಗೆ ಬೆಂಗಳೂರಿನ ಸಿಐಡಿ ಡಿಪೋಸಿಟ್ ಫ್ರಾಂಡ್ ವಿಂಗ್ ಅಧಿಕಾರಿಗಳ ತಂಡ ಮಾ.17 ರಂದು ಬೆಳಗ್ಗೆ 11 ಗಂಟೆಗೆ ಆಗಮಿಸಿ ಸರಕಾರಿ ಪಂಚರ ಸಮ್ಮುಖದಲ್ಲಿ ಸಂಜೆ 7:45 ಗಂಟೆವರೆಗೆ ಮಹಜರು ಮಾಡಿ ವಾಪಸ್ ತೆರಳಿದ್ದು ನಾಳೆ ಮತ್ತೆ ಮಹಜರು ಕಾರ್ಯಾಚರಣೆ ಮುಂದುವರಿಸಲಿದ್ದಾರೆ.

ಬೆಂಗಳೂರು ಸಿಐಡಿ ಡೆಪೋಸಿಟ್ ಫ್ರಾಂಡ್ ವಿಂಗ್ ಇನ್ಸ್‌ಪೆಕ್ಟರ್ ಹರೀಶ್, ಎಎಸ್ಐ ಶಂಕರ್, ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಿಬ್ಬಂದಿ ಕಿರಣ್, ಶಿವರಾಜ್, ಬೆಳ್ತಂಗಡಿ ಕಂದಾಯ ಇಲಾಖೆಯ ಎಸ್.ಡಿ.ಎ ಪ್ರಜ್ವಲ್, ಗ್ರಾಮ ಆಡಳಿತಾಧಿಕಾರಿ ಸತೀಶ್ , ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಇಲಾಖೆಯ ಸಿಡಿಒ ಎನ್.ಜೆ.ಗೋಪಾಲ್, ದೂರುದಾರ ದಯಾನಂದ್ ನಾಯಕ್, ಸಿಐಡಿ ವಾಹನ ಚಾಲಕ ಸುಂದರ್ ಮಹಜರು ವೇಳೆ ಜೊತೆಯಲ್ಲಿದ್ದರು.

Related posts

ಮಾಲಾಡಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

Suddi Udaya

ಲಾಯಿಲ ಬಲಮುರಿ ವಿಘ್ನೇಶ್ವರನ ಸನ್ನಿಧಿಯಲ್ಲಿ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ 108 ಕಾಯಿ ಗಣಹೋಮ

Suddi Udaya

ಕನ್ನಾಜೆ ಶ್ರೀ ದುರ್ಗಾ ಭಜನಾ ಮಂಡಳಿ ವತಿಯಿಂದ ಭಜಕರಿಗೆ ಪುಸ್ತಕ ವಿತರಣೆ

Suddi Udaya

ಉಜಿರೆ ಪಂಚಗವ್ಯ ಚಿಕಿತ್ಸಾ ಶಿಬಿರ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ಉಜಿರೆಯ ಎನ್ ಎಸ್ ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕದ ಸಹಭಾಗಿತ್ವದಲ್ಲಿ ಕಾರ್ಗಿಲ್ ನೆನಪು ಉಪನ್ಯಾಸ ಕಾರ್ಯಕ್ರಮ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳ್ತಂಗಡಿ ಎಸ್.ಡಿ.ಎಂ ಶಾಲಾ ವಿದ್ಯಾರ್ಥಿಗಳು ಕವಾಲಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya
error: Content is protected !!