26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ದಿ. ಎನ್ ಪದ್ಮನಾಭ ಮಾಣಿಂಜ ರವರ ಮೊದಲ ವರ್ಷದ ಪುಣ್ಯಸ್ಮರಣೆ ಆಚರಣೆ

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷ ದಿ. ಎನ್ ಪದ್ಮನಾಭ ಮಾಣಿಂಜ ರವರ ಮೊದಲ ವರ್ಷದ ಪುಣ್ಯ ಸ್ಮರಣೆಯನ್ನು ಇತ್ತೀಚೆಗೆ ದಯಾ ವಿಶೇಷಾ ಚೇತನರ ಶಾಲೆ ಹಾಗೂ ಅನುಗ್ರಹ ವೃದ್ಧಾಶ್ರಮ ಬೆಳ್ತಂಗಡಿಯಲ್ಲಿ ಆಚರಿಸಲಾಯಿತು.

ದಿ. ಎನ್ ಪದ್ಮನಾಭ ಮಾಣಿಂಜ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಸೇವೆ ಹಾಗೂ ಸಮಾಜದ ಮೇಲಿನ ಕೊಡುಗಗಳನ್ನು ಸ್ಮರಿಸಲಾಯಿತು.

ವಿಶೇಷ ಚೇತನ ಮಕ್ಕಳೊಂದಿಗೆ ಬೆರೆತು ಸಹಬೋಜನ ನಡೆಸಲಾಯಿತು.

ಸಂಘದ ಅಧ್ಯಕ್ಷ ಭಗೀರಥ ಜಿ, ಮಾತನಾಡಿ ನಮ್ಮನ್ನು ಅಗಲಿದ ದಿವ್ಯ ಚೇತನ ಪದ್ಮನಾಭ ಮಾಣಿಂಜರವರ ಸೇವಾ ಕಾರ್ಯಗಳ ಬಗ್ಗೆ ಸ್ಮರಿಸಿದರು. ಗೌರವಾನ್ವಿತರ ಮೊದಲ ವರ್ಷದ ಪುಣ್ಯಸ್ಮರಣೆಯನ್ನು ದೇವರ ಮಕ್ಕಳೊಂದಿಗೆ ಆಚರಿಸಿರುವುದು ನಿಜಕ್ಕೂ ಖುಷಿಯನ್ನು ನೀಡಿದೆ ಇಲ್ಲಿನ ವ್ಯವಸ್ಥೆ ಹಾಗೂ ಶಿಕ್ಷಕರ ಕಾರ್ಯವೈಖರಿಯ ಬಗ್ಗೆ ಪ್ರಶಂಸೆಯ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ, ನಿರ್ದೇಶಕರಾದ ಚಂದ್ರಶೇಖರ, ಜಯವಿಕ್ರಮ ಕಲ್ಲಾಪು, ದಯಾ ವಿಶೇಷ ಶಾಲೆಯ ಪಾ. ವಿನೋದ್, ಸಮಗದ ವಿಶೇಷಾಧಿಕಾರಿ ಯಂ ಮೋನಪ್ಪ ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ ಕುಮಾರ್, ಕೇಂದ್ರ ಕಚೇರಿ ಅಧಿಕಾರಿ ವರ್ಗ, ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಹದಗೆಟ್ಟ ರಸ್ತೆಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ ಶಿಬಾಜೆ ಗ್ರಾ.ಪಂ.

Suddi Udaya

ಶ್ರೀ ಸೂರ್ಯನಾರಾಯಣ ದೇವರ ತುಳು ಭಕ್ತಿ ಗೀತೆ “ನಾರಾವಿದ ಸೂರ್ಯದೇವೆರ್” ಧ್ವನಿ ಸುರುಳಿ ಬಿಡುಗಡೆ

Suddi Udaya

ಜ.6: ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಮಾತಾ-ಪಿತಾಗುರುದೇವೋಭವ ಕಾರ್ಯಕ್ರಮ

Suddi Udaya

ಫೆ.10: ಪಡಂಗಡಿ ಮಲ್ಲಿಪ್ಪಾಡಿ ಶ್ರೀಸದಾಶಿವ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಶನಿ ಪೂಜೆ

Suddi Udaya

ಅಕ್ರಮ ಪ್ರವೇಶ ಮಾಡಿ ಯುವಕನಿಗೆ ಹಲ್ಲೆ ಮಾಡಿ ಜೀವ ಬೆದರಿಕೆ

Suddi Udaya

ಬೆಳಾಲು: ಶ್ರೀಮತಿ ಸುಲೋಚನಾ ಎಸ್. ಕೆರ್ಮುಣ್ಣಾಯ ನಿಧನ

Suddi Udaya
error: Content is protected !!