28.6 C
ಪುತ್ತೂರು, ಬೆಳ್ತಂಗಡಿ
September 19, 2026
ತಾಲೂಕು ಸುದ್ದಿಲೈಫ್‌ಸ್ಟೈಲ್‌ವರದಿ

ಮಡಿಕೇರಿಯ ಪ್ರಕೃತಿ ಮಡಿಲಲ್ಲಿ ಬೆಳ್ತಂಗಡಿ ಹೆರಾಜೆ ಕುಟುಂಬದ ಸಂಭ್ರಮದ ಕುಟುಂಬ ಮಿಲನ

ಬೆಳ್ತಂಗಡಿ: ಬೆಳ್ತಂಗಡಿಯ ಪ್ರತಿಷ್ಠಿತ ಹೆರಾಜೆ ಕುಟುಂಬದ ಸದಸ್ಯರು ಮಡಿಕೇರಿಯ ಸುಂದರ ಪರಿಸರದ ವಿಸ್ಮ ರೆಸಾರ್ಟ್ನಲ್ಲಿ ಕುಟುಂಬ ಮಿಲನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು.

ಸುಮಾರು 70ಕ್ಕೂ ಹೆಚ್ಚು ಹಿರಿಯ-ಕಿರಿಯ ಸದಸ್ಯರು ಭಾಗವಹಿಸಿದ ಈ ಕುಟುಂಬ ಸಮಾಗಮದಲ್ಲಿ ಭಾಗವಹಿಸಿದರು.
ಆಷಾಢ ಮಾಸದ ಮಳೆಯ ನಡುವೆ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಕುಟುಂಬ ಸದಸ್ಯರು ವಿವಿಧ ಮನರಂಜನಾ ಚಟುವಟಿಕೆಗಳು, ಆಟೋಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಲ್ಲಾಸದ ಕ್ಷಣಗಳನ್ನು ಕಳೆದರು.

ಕುಟುಂಬದ ಹಿರಿಯರಾದ ಪೀತಾಂಬರ ಹೆರಾಜೆ, ಶ್ರೀಮತಿ ಸಂಗೀತ, ಶ್ರೀಮತಿ ಲೋಲಾಕ್ಷಿ, ಶೇಖರ ಬಂಗೇರ,ಜಯರಾಮ ಬಂಗೇರ, ಶ್ರೀಮತಿ ಸುಜಾತಾ, ಕೇಶವ ಪೂಜಾರಿ, ಶ್ರೀಮತಿ ಜಾನಕಿ ಕೇಶವ್, ಶ್ರೀಮತಿ ವಿಮಲಾ ಜಗನ್ನಾಥ್, ಉಮೇಶ್ ಬಂಗೇರ, ಶ್ರೀಮತಿ ಸರಿತಾ ಉಮೇಶ್ ಹಾಗೂ ಶ್ರೀಮತಿ ಲತಾ ಶಿವರಾಮ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ಕುಟುಂಬದ ಸದಸ್ಯರು ಒಟ್ಟಾಗಿ ಸಮಯ ಕಳೆಯುವ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕಿ, ಹೊಸ ನೆನಪುಗಳನ್ನು ಸೃಷ್ಟಿಸಿಕೊಂಡರು. ಈ ಕುಟುಂಬ ಮಿಲನವು ಎಲ್ಲರಿಗೂ ಅವಿಸ್ಮರಣೀಯ ಅನುಭವವಾಗಿ ಮೂಡಿಬಂದಿತು.

Related posts

ದೇಶದಲ್ಲಿ ನೋಂದಾವಣೆಯಾಗದಿರುವ ದೊಡ್ಡ ಸಂಸ್ಥೆ ಆರ್.ಎಸ್.ಎಸ್. ಮಾತ್ರ,: ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ

Suddi Udaya

ಶ್ರೀ ಶಾರದಾಂಭ ಭಜನಾ ಮಂಡಳಿಯಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದ ಸಂಜನಾ ಪೈ ಗೆ ಸನ್ಮಾನ

Suddi Udaya

ಕುವೆಟ್ಟು ಜನಸ್ಪಂದನ ಸಭೆ

Suddi Udaya

ಕನ್ಯಾಡಿ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ : ಬೆಳ್ತಂಗಡಿ ಶ್ರೀ ಗು.ಸ್ವಾ.ಸೇ. ಸಂಘ, ಬಿಲ್ಲವ ಮಹಿಳಾ ವೇದಿಕೆ, ಯುವ ಬಿಲ್ಲವ ವೇದಿಕೆಯ ಪದಾಧಿಕಾರಿಗಳ ಭೇಟಿ

Suddi Udaya

ಕಳಿಯ ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಗೆ ಕೃಷಿಕರಿಂದ ಬಂದ ದೂರು ಅರ್ಜಿ: ಪಂಚಾಯತ್ ನಿಂದ ಸ್ಥಳ ಪರಿಶೀಲಿಸಿ ಇತ್ಯರ್ಥ

Suddi Udaya

ಬೆಳ್ತಂಗಡಿ: ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ

Suddi Udaya
error: Content is protected !!