34.2 C
ಪುತ್ತೂರು, ಬೆಳ್ತಂಗಡಿ
March 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ದುರ್ಗಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ವಾರ್ಷಿಕ ಪ್ರತಿಷ್ಠಾ ವರ್ಧಂತಿ

ಬೆಳ್ತಂಗಡಿ:ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ದುರ್ಗಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ವಾರ್ಷಿಕ ಪ್ರತಿಷ್ಠಾ ವರ್ಧಂತಿಯು ಮಾ.19ರಂದು ಪ್ರಾರಂಭಗೊಂಡು ಮಾ.26ರವರೆಗೆ ನಡೆಯಲಿರುವುದು.

ಮಾ.19ರಂದು ಬೆಳಿಗ್ಗೆ ತೋರಣ ಮೂಹೂರ್ತ ಅಂಕಗುಂಟ, ಕೋಳಿಗುಂಟ ಧ್ವಜಾರೋಹಣ, ಪಂಚಾಂಗ ಪೂಜೆ ಪಂಚಾಂಗ ಶ್ರವಣ ಅಂಕುರ ಪೂಜೆ, ಮಧ್ಯಾಹ್ನ ಮಹಾಪೂಜೆ, ಉಗ್ರಾಣ ಮುಹೂರ್ತ, ಪ್ರಸಾದ ವಿತರಣೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ಆಹ್ವಾನಿತ ಭಜನಾ ಮಂಡಳಿಗಳಿಂದ ಭಜನೋತ್ಸವ, ರಾತ್ರಿ ಬಲಿ ಉತ್ಸವ ಹೊರಡುವುದು.

ಮಾ.20ರಂದು ಬೆಳಿಗ್ಗೆ ಪೂಜೆ, ಸಹಸ್ರ ಮೋದಕ ಹೋಮ, ಹನ್ನೆರಡು ಕಾಯಿ ಗಣಹೋಮ, ಅಂಕುರ ಪೂಜೆ, ಹೊರೆಕಾಣೆಕೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಿಲ್ಲೂರು ಶಾಲಾ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ, ರಾತ್ರಿ ಶ್ರೀ ದುರ್ಗಾದೇವೀ ಸನ್ನಿದಿಯಲ್ಲಿ ಬಲಿ ಹೊರಡುವುದು.

ಮಾ.21 ರಂದು ಬೆಳಿಗ್ಗೆ ಪೂಜೆ, ಅಂಕುರ ಪೂಜೆ, ಶ್ರೀ ದುರ್ಗಾಪರಮೇಶ್ವರಿಯ ಬೆಳಗ್ಗಿನ ತುಡರ ಬಲಿ ಉತ್ಸವ, ಶ್ರೀ ದುರ್ಗಾದೇವಿಯ ದರ್ಶನ ಬಲಿ ಉತ್ಸವ, ಬಟ್ಟಲು ಕಾಣೆಕೆ, ಪ್ರಸಾದ ವಿತರಣೆ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ, ಮಿತ್ತಬಾಗಿಲು ಮಲವಂತಿಗೆ ಗ್ರಾಮಸ್ಥರಿಂದ ಕಾರ್ಯಕ್ರಮ ವೈವಿಧ್ಯ, ರಾತ್ರಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ಬಲಿ ಉತ್ಸವ ಹೊರಡುವುದು ಹಾಗೂ ರಂಗಪೂಜೆ, ರಾತ್ರಿ ಸಂಗಮ ಕಲಾವಿದರು ಉಜಿರೆ ಇವರಿಂದ ತುಳು ಹಾಸ್ಯಮಯ ನಾಟಕ “ಕಾಸ್‌ದ ಕಸರತ್ತ್”,.

ಮಾ.22 ರಂದು ಬೆಳಿಗ್ಗೆ ಪೂಜೆ, ಅಂಕುರ ಪೂಜೆ, ತುಡರ ಬಲಿ ಉತ್ಸವ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ, ಕೀರ್ತನಾ ಕಲಾತಂಡ ಮುಂಡಾಜೆ ಇವರಿಂದ ಭಕ್ತಗಾನ-ಯಕ್ಷ ನೃತ್ಯ, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ, ಮುಂಡಾಜೆಯವರಿಂದ ಕಾರ್ಯಕ್ರಮ ವೈವಿಧ್ಯ, ರಾತ್ರಿ ಉತ್ಸವ, ಪಲ್ಲಕ್ಕಿ ಸೇವೆ, ವಸಂತಕಟ್ಟೆ ಪೂಜೆ, ಪ್ರಸಾದ ವಿತರಣೆ.

ಮಾ.23 ರಿಂದ ಬೆಳಿಗ್ಗೆ ಪೂಜೆ, ಅಂಕುರ ಪೂಜೆ, ಬೆಳಗ್ಗಿನ ಉತ್ಸವ, ಮದ್ಯಾಹ್ನದ ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ, ಧೀ ಶಕ್ತಿ ಮಹಿಳಾ ಯಕ್ಷಗಾನ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ಬಲಿ ಉತ್ಸವ ಪೂಜೆ, ಅಶ್ವಥ ಕಟ್ಟೆ ಪೂಜೆ, ವಸಂತ ಕಟ್ಟೆ ಪೂಜೆ, ಮೈಸಂದಾಯ, ರಕ್ತೇಶ್ವರಿ ದೈವಗಳ ನೇಮ, ಮಹಾಪೂಜೆ, ಪ್ರಸಾದ ವಿತರಣೆ.

ಮಾ.24ರಂದು ಬೆಳಿಗ್ಗೆ ಪೂಜೆ, ಶ್ರೀ ದುರ್ಗಾಪರಮೇಶ್ವರಿ ದೇವಿ ದರ್ಶನ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಅಂಕುರ ಪೂಜೆ, ಮಧ್ಯಾಹ್ನದ ಮಹಾಪೂಜೆ,ಪ್ರಸಾದ ವಿತರಣೆ, ಪಲ್ಲಪೂಜೆ, ಅನ್ನ ಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ, ವಿದುಷಿ ಡಾ. ಗಾನ ಪಿಲಿಂಜ ಪುತ್ತೂರು ಇವರಿಂದ ಕರ್ನಾಟಕ ರಾಷ್ಟಿçÃಯ ಸಂಗೀತ ಕಾರ್ಯಕ್ರಮ, ರಾತ್ರಿ ಪಾಂಚಜನ್ಯ ಕಲಾವಿದರು ಉಜಿರೆ ಅಭಿನಯದಲ್ಲಿ ತುಳು ಹಾಸ್ಯಮಯ ನಾಟಕ ” ಆರ್ ಏರ್…?”, ಮಹಾರಥೋತ್ಸವ ಕೊಡಮಣಿತ್ತಾಯ ದೈವದ ನೇಮ, ವಸಂತ ಕಟ್ಟೆ ಪೂಜೆ, ಪ್ರಸಾದ ವಿತರಣೆ, ಶ್ರೀ ಭೂತಬಲಿ, ಶಯನೋತ್ಸವ.

ಮಾ.25ರಂದು ಕವಾಟೋದ್ಘಾಟನೆ, ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಪಂಚ ವಿಂಶತಿ, ಕಲಶಾಭಿಷೇಕ, ಮದ್ಯಾಹ್ನದ ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಧಾರ್ಮಿಕ ಕಾರ್ಯಕ್ರಮ, ದೇವರು ಆರಾಠಕ್ಕೆ ಹೊರಡುವುದು, ಪಿಲಿಚಾಮುಂಡಿ ದೈವದ ನೇಮ, ಅಶ್ವಥ ಕಟ್ಟೆ ಪೂಜೆ, ಅವಭೃತ ಸ್ನಾನ, ದ್ವಜಾವರೋಹಣ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ.

ಮಾ.26 ರಂದು ಬೆಳಿಗ್ಗೆ ಪೂಜೆ, ಸಂಪ್ರೋಕ್ಷಣೆ, ಮದ್ಯಾಹ್ನದ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಕಲ್ಕುಡ-ಕಲ್ಲುರ್ಟಿ ನೇಮೋತ್ಸವ, ದುರ್ಗಾಪರಮೇಶ್ವರಿ ಸನ್ನಿದಿಯಲ್ಲಿ ರಂಗಪೂಜೆ ನಡೆಯಲಿದೆ.

Related posts

ಮಡಂತ್ಯಾರು ಸಿಎ ಬ್ಯಾಂಕ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಮಟ್ಟದ 72ನೇ ಸಹಕಾರ ಸಪ್ತಾಹಕ್ಕೆ ಚಾಲನೆ: ಮಡಂತ್ಯಾರು ನಗರದಲ್ಲಿ ಆದ್ದೂರಿಯ ಮೆರವಣಿಗೆ, ಸಾಧಕ 72 ಮಂದಿಗೆ ಕೃಷಿ ಸಿಂಧೂರ ಪ್ರಶಸ್ತಿ ಹಾಗೂ 86ಮಂದಿ ಸಾಧಕರಿಗೆ ಕ್ಷೀರ ರತ್ನ ಪ್ರಶಸ್ತಿ ಪ್ರದಾನ

Suddi Udaya

ನಾವೂರು ಯುನೈಟೆಡ್ ಸ್ಪೋರ್ಟ್ಸ್ ಹಾಗೂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಮಹಮ್ಮದ್ ಅರ್ಷದ್

Suddi Udaya

ವಿಧಿವಿಜ್ಞಾನ ಕ್ಷೇತ್ರ ಉದ್ಯೋಗಕ್ಕಾಗಿ ನಡೆಸಿದ ಫೋರೆನ್ಸಿಕ್‌ ಸೈನ್ಸ್‌ ಅರ್ಹತಾ ಪರೀಕ್ಷೆಯಲ್ಲಿ ಎಕ್ಸೆಲ್ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

Suddi Udaya

ಚಾರ್ಮಾಡಿ: ಅನ್ನಾರು ಕಾಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಕಾಡಾನೆ ಸಾವು

Suddi Udaya

ಕಳೆಂಜ: ಆರ್ವಿ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಶಿಬರಾಜೆ ಅಂಗನವಾಡಿ ಮಕ್ಕಳಿಗೆ ಕುರ್ಚಿ ಕೊಡುಗೆ

Suddi Udaya

ಮಚ್ಚಿನ: ನೂತನ ವಿದ್ಯುತ್ ಕಂಬ ಅಳವಡಿಕೆ : ಸುದ್ದಿ ಉದಯ ಫಲಶ್ರುತಿ

Suddi Udaya
error: Content is protected !!