September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವಿಧಿವಿಜ್ಞಾನ ಕ್ಷೇತ್ರ ಉದ್ಯೋಗಕ್ಕಾಗಿ ನಡೆಸಿದ ಫೋರೆನ್ಸಿಕ್‌ ಸೈನ್ಸ್‌ ಅರ್ಹತಾ ಪರೀಕ್ಷೆಯಲ್ಲಿ ಎಕ್ಸೆಲ್ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

ಗುರುವಾಯನಕೆರೆ: ಸಾಧನೆಗಳ ಮೂಲಕ ರಾಜ್ಯದ ಶೈಕ್ಷಣಿಕ ಭೂಪಟದಲ್ಲೇ ಅನನ್ಯ ಸ್ಥಾನಗಳಿಸಿದ ಧರ್ಮಸ್ಥಳದ ಹತ್ತಿರವಿರುವ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸೆಲ್ ಪದವಿ ಪೂರ್ವ ವಿದ್ಯಾಸಂಸ್ಥೆಯು ನೀಟ್, ಜೆ.ಇ.ಇ, ಸಿಇಟಿ, ನಾಟ ಮುಂತಾದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳನ್ನು ಸಾಧಕರಾಗುವಂತೆ ಮಾಡಿ ರಾಷ್ಟ್ರದಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಇದರ ಜೊತೆಗೆ ವಿಜ್ಞಾನ ಕ್ಷೇತ್ರದ ವಿವಿಧ ವೃತ್ತಿಪರ, ಕೌಶಲ್ಯಯುತ ತರಬೇತಿಗಳನ್ನು ನೀಡುತ್ತಾ , ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣವಾಗಿದೆ. ವಿಧಿ ವಿಜ್ಞಾನ ಕ್ಷೇತ್ರಕ್ಕಾಗಿ ಇನ್ಸ್ಟಿಟ್ಯೂಟ್ ಆಫ್ ಫೋರೆನ್ಸಿಕ್‌ ಸೈನ್ಸ್‌ ನಡೆಸಿದ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಿದ ಎಕ್ಸೆಲ್ ನ ಎಲ್ಲಾ ವಿದ್ಯಾರ್ಥಿಗಳು ಅತ್ಯತ್ತಮ ಸಾಧನೆಯನ್ನು ಮಾಡಿರುತ್ತಾರೆ.


ವಿದ್ಯಾರ್ಥಿಗಳಾದ ಮನೋಜ್ಞಾ ಎಸ್. ಸಂಜನಾ ಎಲ್. ಐಶ್ವರ್ಯ ಗೋಪಿ, ಶಿಫ್ರಾ ಸರಿನಾ ಮಾಬೆನ್, ತುಶಿತಾ ಜಿ.ಸಿ. ಚಿಂತನ ಕೆ ಆರ್, ಕೀರ್ತನ್ ಜಿ, ಚಿರಾವಿ ಎಂ.ಆರ್. ಇವರು ಉತ್ತಮ ಫಲಿತಾಂಶವನ್ನು ಪಡೆದುಕೊಂಡು , ಸಾಧನೆ ಮೆರೆದಿದ್ದಾರೆ.


ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಸರಕಾರಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸೀಟುಗಳನ್ನು ಪಡೆದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಎಕ್ಸೆಲ್ ಪದವಿ ಪೂರ್ವ ಕಾಲೇಜು ಗ್ರಾಮೀಣ ಭಾಗದ ಮತ್ತು ನಗರದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ವೈದ್ಯರಾಗುವ ಕನಸಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ.

Related posts

ನಾಳ ದೇಗುಲದ ಗದ್ದೆಯಲ್ಲಿ ನೇಜಿ ನಾಟಿ

Suddi Udaya

ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಖಂಡಿಸಿ ಪಡಂಗಡಿ ಗರ್ಡಾಡಿ ಶಕ್ತಿ ಕೇಂದ್ರದ ವತಿಯಿಂದ ಪ್ರತಿಭಟನೆ

Suddi Udaya

ಮಾ.19-26: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ದುರ್ಗಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕನ್ಯಾಡಿ-1: ನಿವೃತ್ತ ಶಿಕ್ಷಕ ದಿ| ವೆಂಕಪ್ಪ ಗೌಡ ರವರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಪಡಂಗಡಿ ಗ್ರಾ.ಪಂ. ಗ್ರಂಥಾಲಯಕ್ಕೆ ಪ್ರವೀಣ್ ರೈ ರವರಿಂದ 54 ಪುಸ್ತಕಗಳ ಕೊಡುಗೆ

Suddi Udaya

ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ: ಹರೀಶ್ ಪೂಂಜ

Suddi Udaya
error: Content is protected !!