September 6, 2026
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಶ್ರೀ ಧ.ಮ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಅಭಿವ್ಯಕ್ತಿ ಧಾರೆ ಬೇಸಿಗೆ ಶಿಬಿರ ಉದ್ಘಾಟನೆ

ಉಜಿರೆ: ಶ್ರೀ ಧ.ಮ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಅಭಿವ್ಯಕ್ತಿ ಧಾರೆ ಬೇಸಿಗೆ ಶಿಬಿರ-2026 ಉದ್ಘಾಟನೆ ಮಾ.21ರಂದು ನಡೆಯಿತು. ಶ್ರೀ ಧ.ಮ. ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂತೋಷ್ ಆಲ್ಬರ್ಟ್ ಸಲ್ಡಾನ್ಹ ದೀಪ ಪ್ರಜ್ವಲಿಸಿ, ಹಾಳೆ ತಟ್ಟೆಗೆ ಬಣ್ಣ ಸಿಂಪಡಿಸಿ ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ರಜೆಯ ಸದೂಪಯೋಗವನ್ನು ಪಡೆದುಕೊಳ್ಳಿ. ನೂರಾರು ರೂಪಾಯಿ ಖರ್ಚು ಮಾಡಿ ಹೊರಗಡೆ ತರಬೇತಿ ಪಡೆಯುವುದಕ್ಕಿಂತ ಇಲ್ಲಿ ಇರುವ ಅವಕಾಶವನ್ನು ಸದುಪಯೋಗಗೊಳಿಸಿ ಎಂದರು.

ಇನ್ನೋರ್ವ ಅತಿಥಿ ಎಸ್.ಡಿ.ಎಮ್ ಸ್ಪೋರ್ಟ್ಸ್ ಕ್ಲಬ್ ಉಜಿರೆ ಕಾರ್ಯದರ್ಶಿ ರಮೇಶ್ ಎಚ್ ಇವರು ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಿ ಮತ್ತು ತಮ್ಮ ಸಂಸ್ಥೆಯಲ್ಲಿ ಹಲವಾರು ಅವಕಾಶಗಳು ಕ್ರೀಡಾ ವಿದ್ಯಾರ್ಥಿಗಳಿಗೆ ಇದೆ ಅದರ ಉಪಯೋಗವನ್ನು ಪಡೆದುಕೊಳ್ಳಿ. ಕ್ರೀಡಾ ವಿದ್ಯಾರ್ಥಿಗಳಿಗೆ ಫ್ರೀ ಎಜುಕೇಶನ್ ಮತ್ತು ತರಬೇತಿ ವಸತಿ ನಿಲಯಗಳು ತಮ್ಮ ಸಂಸ್ಥೆಯಲ್ಲಿ ಇದೆ ಎಂದರು.

ರತ್ನಮಾನಸದ ನಿಲಯ ಪಾಲಕರಾದ ಯತೀಶ್ ಕುಮಾರ್ ಇವರು ಶಿಬಿರದಲ್ಲಿ ಕಳಿಸುವ ಎಲ್ಲಾ ಅವಕಾಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯನಿ ವಿದ್ಯಾ ಟಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಎಸ್.ಡಿ.ಎಮ್ ಪದವಿ ಕಾಲೇಜಿನ ವಿದ್ಯಾರ್ಥಿ ಭೂಷಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಂಗ ಚಟುವಟಿಕೆಯನ್ನು ನಡೆಸಿಕೊಡಲು ಸಂಪನ್ಮೂಲ ವ್ಯಕ್ತಿಗಳಾದ ಎಸ್. ಡಿ. ಎಮ್. ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಅನ್ವೇಶ್, ಕನಿಷ್ಕ ಲಾವಣ್ಯ ಇವರುಗಳು ವಿದ್ಯಾರ್ಥಿಗಳಿಗೆ ರಂಗ ತರಬೇತಿಯನ್ನು ನೀಡಿದರು. 9ನೇ ತರಗತಿ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ವಿದ್ಯಾರ್ಥಿಗಳಾದ ದನ್ವೀನ್ ಸ್ವಾಗತಿಸಿ, ಸಮ್ನಾಜ್ ವಂದಿಸಿದರು. ಪಾವನಿ ನಿರೂಪಿಸಿದರು. ಬೇಸಿಗೆ ಶಿಬಿರ ಮತ್ತು ಕ್ರೀಡಾ ಶಿಬಿರದ ಸಂಯೋಜಕರಾದ ಶ್ರೀರಾಮ್, ಲಲಿತಾ ಎಂ ಶೆಟ್ಟಿ, ಪರಮೇಶ್ವರ್ ಇವರ ನೇತೃತ್ವದಲ್ಲಿ ಜರಗಿತು.

Related posts

ಕನ್ಯಾಡಿ ಸೇವಾಭಾರತಿಯಿಂದ 7 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

Suddi Udaya

ವೇಣೂರು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರವೀಂದ್ರರಿಗೆ ಎ.ಎಸ್.ಐ. ಯಾಗಿ ಬಂಟ್ವಾಳ ನಗರ ಠಾಣೆಗೆ ಭಡ್ತಿ

Suddi Udaya

ನಿಡ್ಲೆ ಗ್ರಾಮ ಸೇವಾ ಸಮಿತಿ ನೇತೃತ್ವದಲ್ಲಿ ‘ಅಯೋಧ್ಯಾ ದೀಪ’ ಯಕ್ಷಗಾನ ಬಯಲಾಟ

Suddi Udaya

ಮೊಗ್ರು: ಕೋರಿಯಾರು ಎಂಬಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya
error: Content is protected !!