ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಮಸ್ಯೆ

ತ್ಯಾಜ್ಯ ಎಸೆಯುವವರ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ , ನಾವೂರು ಗ್ರಾಮ ಪಂಚಾಯತ್ ನಿಂದಫಲಕ ಅಳವಡಿಕೆ…!!!

ಬೆಳ್ತಂಗಡಿ: ನಾವೂರು ಗ್ರಾಮದ ಕೈಕಂಬ ಸೇತುವೆಯಲ್ಲಿ ದಿನನಿತ್ಯ ಬಳಕೆಯ ತ್ಯಾಜ್ಯಗಳನ್ನು ತಂದು ಸೇತುವೆ ಕೆಳಗೆ ಹರಿಯುವ ನದಿ ನೀರಿಗೆ ಸುರಿಯುವುದರ ಬಗ್ಗೆ ಇತ್ತೀಚೆಗೆ ಸುದ್ದಿ ಉದಯ ಪತ್ರಿಕೆಯಲ್ಲಿ ಬಂದ ವರದಿ ನಂತರ ನಾವೂರು ಗ್ರಾಮ ಪಂಚಾಯತ್ ಎಚ್ಚರಿಕೆ ಫಲಕ ಜೊತೆಗೆ ಬಹುಮಾನ ದ ಫಲಕ ಅಳವಡಿಸಿದೆ.

ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮದಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ , ಹಾಳೆ ತಟ್ಟೆಗಳು , ಪ್ಲಾಸ್ಟಿಕ್ ಚೀಲಗಳು , ಬಾಟಲ್ ಗಳು , ಲೋಟಗಳು , ಬಿಯರ್ ಬಾಟಲ್ ಗಳು , ಮಕ್ಕಳು ಮತ್ತು ಹಾಸಿಗೆ ಹಿಡಿದಿರುವವರ ಪ್ಯಾಂಪರ್ಸ್ ಸೇರಿದಂತೆ ತ್ಯಾಜ್ಯ ವನ್ನು ಗೋಣಿಯಲ್ಲಿ ತಂದು ನಾವೂರು ಗ್ರಾಮದ ಕೈಕಂಬ ಸೇತುವೆಯಲ್ಲಿ ಸುರಿಯುತ್ತಿರುವ ಬಗ್ಗೆ ಇತ್ತೀಚೆಗಷ್ಟೇ ವರದಿ ಮಾಡಲಾಗಿತ್ತು. ಇದೀಗ ನಾವೂರು ಗ್ರಾಮ ಪಂಚಾಯತ್ ಕೈಕಂಬ ಸೇತುವೆ ಬಳಿ ನದಿಗೆ ತ್ಯಾಜ್ಯ ಎಸೆಯುವವರ ಬಗ್ಗೆ ದಾಖಲೆ ಸಮೇತ ಗ್ರಾಮ ಪಂಚಾಯತ್ ಗೆ ನೀಡಿದರೆ ಅಂತಹ ವ್ಯಕ್ತಿಗಳಿಗೆ 1000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಇನ್ನೂ ತ್ಯಾಜ್ಯ ಎಸೆಯುವವರ ಮೇಲೆ 5000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆಯ ಶಾಶ್ವತ ಫಲಕವನ್ನು ಅಳವಡಿಸಿದೆ. ರಾತ್ರಿ ಸಮಯದಲ್ಲಿ ನದಿಗೆ ತ್ಯಾಜ್ಯ ಎಸೆಯುವವರನ್ನು ತಡೆಯುವುದಾದರು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸುವವರಾರು ಎಂದು ಸಾರ್ವಜನಿಕರಲ್ಲಿ ಪ್ರಶ್ನೆ ಉದ್ಭವಿಸಿದೆ. ಗ್ರಾಮ ಪಂಚಾಯತ್ ಗಳು ಕಸ ಬಿಸಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದರೆ ಮಾತ್ರ ಸ್ವಚ್ಛ ಭಾರತ ಪರಿಕಲ್ಪನೆ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಸಾಧ್ಯ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Related posts

ಬೆಳ್ತಂಗಡಿ: ವಂಚನೆ ಪ್ರಕರಣದಲ್ಲಿ 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya

ಬೆಳ್ತಂಗಡಿ: ಮಿಷ್ ಮಷ್ ಫ್ಯಾನ್ಸಿಯಲ್ಲಿ ಲಕ್ಕಿ ಡ್ರಾ: ರೂ.499 ರ ಹೆಚ್ಚಿನ ಖರೀದಿಗೆ ಲಕ್ಕಿ ಕೂಪನ್

Suddi Udaya

ಬಳಂಜ ಶಾಲಾ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ: ಗುರಿಪಳ್ಳ ನಿವಾಸಿ ಶ್ರದ್ಧಾ ಶೆಟ್ಟಿ ನಿಧನ

Suddi Udaya

ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದ ಪ್ರಾಂತ್ಯಾಧ್ಯಕ್ಷರ ಅಧಿಕೃತ ಭೇಟಿ: ಕಾಪಿನಡ್ಕ ಸ ಕಿ ಪ್ರಾ ಶಾಲೆಗೆ ಕಂಪ್ಯೂಟರ್ ಉಪಕರಣಗಳ ಹಸ್ತಾಂತರ

Suddi Udaya

ಅನಾರೋಗ್ಯದಿಂದ ದಿವಾಕರ ಕುಲಾಲ್ ನಿಧನ

Suddi Udaya
error: Content is protected !!