September 6, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಶ್ರೀ ಮಾತಾ ನಾಲ್ಕೂರು ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

ಬಳಂಜ: ಶ್ರೀ ಮಾತಾ ನಾಲ್ಕೂರು ಇವರ ನೇತೃತ್ವದಲ್ಲಿ ಎಸ್‌ಡಿಎಂ ಆಸ್ಪತ್ರೆ ಉಜಿರೆ ಹಾಗೂ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇವರ ಸಹಯೋಗದೊಂದಿಗೆ ಖ್ಯಾತ ದೈವಾರಾಧಕ ದಿ. ಸುರೇಶ್ ಪೂಜಾರಿ ಹುಂಬೇಜೆ ಇವರ ಸ್ಮರಣಾರ್ಥ ಅಂಗವಾಗಿ ಬೃಹತ್ ರಕ್ತದಾನ ಶಿಬಿರವು ಮಾ.28ರಂದು ಬಳಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು.

ಶಿಬಿರದ ಉದ್ಘಾಟನೆಯನ್ನು ನಾಲ್ಕೂರು ಹುಂಬೆಜೆ ಮನೆಯ ಶ್ರೀಮತಿ ಯಶೋಧ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಎಸ್‌ಡಿಎಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ಧನ, ಎಂ.ಡಿ. ಪೆಥಾಲಜಿಸ್ಟ್ ಡಾ| ಮೇಘ ನಾಯಕ್‌, ಪಂಚಾಯಾತ್ ಅಭಿವೃದ್ಧಿ ಅಧಿಕಾರಿ ಶಶಿಕಲಾ ಎಂ, ಪಂಚಾಯತ್ ಮಾಜಿ ಅಧ್ಯಕ್ಷೆ ಶೋಭಾ ಕುಲಾಲ್, ಮಾಜಿ ಉಪಾಧ್ಯಕ್ಷ ಯಶೋಧರ ಶೆಟ್ಟಿ, ಮಾಜಿ ಸದಸ್ಯ ಬಾಲಕೃಷ್ಣ ಯೈಕುರಿ, ಸುದ್ದಿ ಉದಯ ಉಪ ಸಂಪಾದಕ ಸಂತೋಶ್ ಪಿ ಕೋಟ್ಯಾನ್, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕರಾದ ದಿನೇಶ್ ಪಿ.ಕೆ, ದೇಜಪ್ಪ ಪೂಜಾರಿ ಸುಧಾಮ, ಜೈಮಾತಾ ಬೂತ್ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ, ದುಗ್ಗಯ್ಯ ಪೂಜಾರಿ, ದಿನೇಶ್ ಪೂಜಾರಿ ಅಂತರ, ನಾಲ್ಕೂರು ಶ್ರೀಮಾತಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Related posts

ಸುಣ್ಣದಕೆರೆ -ಶಕ್ತಿನಗರ ಸಂಪರ್ಕ ರಸ್ತೆ ದುರಸ್ಥಿಗೆ ಕುವೆಟ್ಟು ಗ್ರಾ.ಪಂ. ಸದಸ್ಯರಿಂದ ಆಗ್ರಹ

Suddi Udaya

ಬೆಳ್ತಂಗಡಿ: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Suddi Udaya

ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ವತ್ ಸನ್ಮಾನ ಕಾರ್ಯಕ್ರಮ

Suddi Udaya

ಪಡಂಗಡಿ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಮತ್ತು ಸಿರಿ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಬೆಳ್ತಂಗಡಿ: ಜಲಪಾತದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಮೂವರು ಕಾಸರಗೋಡು ಮೂಲದ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

Suddi Udaya
error: Content is protected !!