September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ-ಪೆರೋಡಿತ್ತಾಯಕಟ್ಟೆ, ಆನೆಪಿಲ, ಅಟ್ಲಾಜೆ, ಬಳಂಜ ದೇವಸ್ಥಾನ ರಸ್ತೆ ಡಾಂಬರೀಕರಣ ಹಾಗೂ ಶಾಲಾ ರಂಗಮಂದಿರ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ.2 ಕೋಟಿ ಅನುದಾನ ಮಂಜೂರು

ಬಳಂಜ: ಈ ಭಾಗದ ಜನರ ಕಳೆದ ಹಲವು ವರ್ಷಗಳ ಬೇಡಿಕೆಯಾದ ಬಳಂಜ ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಕೆಲ ರಸ್ತೆಗಳ ಅಭಿವೃದ್ಧಿ ಮತ್ತು ಡಾಮರೀಕರಣಕ್ಕೆ ಶಾಸಕ ಹರೀಶ್ ಪೂಂಜರವರು ರೂ 2ಕೋಟಿ ಅನುದಾನ ಮಂಜೂರುಗೊಳಿಸಿ ಇಲ್ಲಿನ ಜನರ ಬೇಡಿಕೆಯನ್ನು ಪೂರೈಸಿದ್ದಾರೆ.

ಬಳಂಜ, ಸುದೆಗಂಡಿ ಪೆರೋಡಿತ್ತಾಯಕಟ್ಟೆ ಸಂಪರ್ಕ ರಸ್ತೆಯ ಮುಂದುವರಿದ ಕಾಂಕ್ರೀಟ್ ಕಾಮಗಾರಿಗೆ ರೂ 1 ಕೋಟಿ ರೂಪಾಯಿ ಅನುದಾನ ಹಾಗೂ ಬಳಂಜ ಆನೆಪಿಲ ರಸ್ತೆಗೆ ರೂ 50 ಲಕ್ಷ, ಅಟ್ಲಾಜೆ ಬದಿನಡೆ ರಸ್ತೆಗೆ ರೂ 50 ಲಕ್ಷ, ಬಳಂಜ ಶಾಲಾ ಕ್ರೀಡಾಂಗಣದ ರಂಗಮಂದಿರ ನಿರ್ಮಾಣಕ್ಕೆ ರೂ 5ಲಕ್ಷ ಹಾಗೂ ಬಳಂಜ ದೇವಸ್ಥಾನದ ರಸ್ತೆ ಡಾಮರೀಕರಣಕ್ಕೆ ರೂ 5ಲಕ್ಷ ಅನುದಾನ ನೀಡಿದ್ದಾರೆ.

ಜನರ ಬೇಡಿಕೆಗೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜರವರಿಗೆ ಗ್ರಾಮಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Related posts

ಗೇರುಕಟ್ಟೆ ಆಟೋ ಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ

Suddi Udaya

ಸಂತ ತೆರೇಸಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಮಹಾಸಭೆ

Suddi Udaya

ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣ ಆರೋಪಿ ಲಾಯಿಲ ನಿವಾಸಿ ಸಾಜಿಲ್ ಗೆ ಶಿಕ್ಷೆ

Suddi Udaya

ಹೊಸಂಗಡಿ ಹಾಗೂ ಬಡಕೋಡಿ ಗ್ರಾಮದ ಬಂಟ ಸಮುದಾಯದ ಬಂಟ ಗ್ರಾಮ ಸಮಿತಿ ರಚನೆ

Suddi Udaya

ನಿಡ್ಲೆ: 90 ವರ್ಷದ ವಯೋವೃದ್ಧೆ ಸರಸ್ವತಿಯವರಿಂದ ಮತದಾನ

Suddi Udaya
error: Content is protected !!