25.1 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಲಾಯಿಲ: ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

ಬೆಳ್ತಂಗಡಿ: ವಿದ್ಯೆಯ ಜೊತೆಗೆ ತಂತ್ರಜ್ಞಾನದ ಶಿಕ್ಷಣ ಅತಿ ಮುಖ್ಯವಾದದ್ದು. ಒಳ್ಳೆಯ ವಿದ್ಯೆ ಇದ್ದರೆ ಉದ್ಯೋಗದ ಜೊತೆಗೆ ಭವಿಷ್ಯ ಉತ್ತಮವಾಗಿರುತ್ತದೆ. ಉದ್ಯೋಗ ನಮಗೆ ಗೌರವ ತಂದು ಕೊಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಉದಾಸೀನ ಮಾಡದೇ ಈಗಲೇ ಕೆಲಸ ಪಡೆಯುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕರು ಹಾಗೂ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ದುಗ್ಗೇ ಗೌಡ ಅಭಿಪ್ರಾಯಪಟ್ಟರು.

ಕಂಪ್ಯೂಟರ್ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ತರಬೇತಿ ಸಂಸ್ಥೆಯ ಪ್ರಾಂಶುಪಾಲ ರಮೇಶ್ ಮಾತನಾಡಿ ಕಂಪ್ಯೂಟರ್ ಶಿಕ್ಷಣವು ಮುಂದಿನ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ತುಂಬಾ ಸಹಾಯವಾಗಲಿದೆ. ಎಲ್ಲಾ ವಿದ್ಯಾರ್ಥಿಗಳ ಕನಸು ನನಸಾಗಲಿ ಎಂದು ಶುಭ ಹಾರೈಸಿದರು.

ಕಛೇರಿ ಪ್ರಬಂಧಕ ಶ್ರೀ ಅಣ್ಣು ಗೌಡ ಉಪಸ್ಥಿತರಿದ್ದರು. ಲಾಯಿಲ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್- ಗ್ರಾಮೀಣ ಶ್ರೇಷ್ಠತಾ ಕೇಂದ್ರ ತರಬೇತಿ ಸಂಸ್ಥೆಯಲ್ಲಿ ಗುಣಮಟ್ಟದ ಕಂಪ್ಯೂಟರ್ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ತರಬೇತಿಯು ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಯೋಜನೆಯಡಿ ನೋಂದಾಯಿತವಾಗಿದ್ದು, ಕೌಶಲ್ಯ ಯೋಜನೆಯಡಿ ಪ್ರಮಾಣೀಕೃತ ಪ್ರಮಾಣ ಪತ್ರ ಮತ್ತು ಅಂಕಪಟ್ಟಿ ವಿತರಿಸಲಾಯಿತು.

ಒಟ್ಟು 27 ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದುಕೊಂಡಿರುತ್ತಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 13 ಮಂದಿ ಉನ್ನತ ಶ್ರೇಣಿ ಹಾಗೂ 14 ವಿದ್ಯಾರ್ಥಿಗಳು ʼಎʼ ಗ್ರೇಡ್ ನಲ್ಲಿ ಉತ್ತೀರ್ಣರಾಗಿ ಶೇ. 100 ಫಲಿತಾಂಶ ಬಂದಿದೆ. ಕಾರ್ಯಕ್ರಮವನ್ನು ಕಂಪ್ಯೂಟರ್ ತರಬೇತುದಾರೆ ಜಯಶ್ರೀ ನಿರ್ವಹಸಿ, ವಂದಿಸಿದರು.

Related posts

ಕಣಿಯೂರು ನಿವೃತ್ತ ಶಿಕ್ಷಕಿ ಹರ್ಷಲಾರವರಿಗೆ ಕ್ಲಸ್ಟರ್ ವತಿಯಿಂದ ಸನ್ಮಾನ

Suddi Udaya

ಕುವೆಟ್ಟು ಗ್ರಾಮ ಪಂಚಾಯತ್ ನಲ್ಲಿ 80 ನೇ ಸ್ವಾತಂತ್ರ್ಯೋತ್ಸವ

Suddi Udaya

ಜ.22 : ಧರ್ಮಸ್ಥಳದಲ್ಲಿ‌ ಶುಭಾರಂಭಗೊಳ್ಳಲಿದೆ ಕಸ್ತೂರಿ ವೆರೈಟಿ ಸೆಂಟರ್

Suddi Udaya

ಶಿಬಾಜೆ: ಪೆರ್ಲ ಭಜನಾ ಮಂಡಳಿಯ ವತಿಯಿಂದ ರಸ್ತೆಯ ಬದಿಯ ಸ್ಚಚ್ಛತಾ ಕಾರ್ಯ

Suddi Udaya

ತಾಲೂಕಿನ ಆಯ್ದ ಯುವಕ – ಯುವತಿ ಮಂಡಲಗಳಿಗೆ ಕ್ರೀಡಾ ಕಿಟ್ ವಿತರಣೆ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

Suddi Udaya
error: Content is protected !!