September 6, 2026
ತಾಲೂಕು ಸುದ್ದಿಧಾರ್ಮಿಕ

ಬಳ್ಳಮಂಜ ಶ್ರೀ ಮಹತೋಭಾರ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ವೈಭವ – ಹೊರೆಕಾಣಿಕೆ ಸಮರ್ಪಣೆ

ಬೆಳ್ತಂಗಡಿ: ‘ಬಳ್ಳೊಡು ಮಂಜಲ್’ ಎಂಬ ನಾಣ್ಣುಡಿಯಂತೆ ಬಳ್ಳದಲ್ಲಿ ಉಧ್ಬವಿಸಿದ ಅನಂತದೇವರ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಬಳ್ಳಮಂಜ ಶ್ರೀ ಮಹತೋಭಾರ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ವೈಭವ ಆರಂಭಗೊoಡಿದೆ. ಹಾಗಾಗಿ ಮಾ. 30 ರಂದು ಕರಾಯ, ಕಲ್ಲೇರಿ, ಉರುವಾಲು, ತಣ್ಣೀರುಪಂತ, ಬಾರ್ಯ, ಕುದ್ರಡ್ಕ ಅಲಕ್ಕೆ ಕಡೆಯಿಂದ ಕಲ್ಲೇರಿ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದದಿಂದ ಭವ್ಯ ಮೆರವಣಿಗೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆಯ ಸಮರ್ಪಣೆಗೊಂಡಿತು.

ವಾಸ್ತು ಶಾಸ್ತ್ರರಿತ್ಯಾ ಪುನರ್ನಿರ್ಮಿಸಿದ ನೂತನ ಧ್ವಜಸ್ಥಂಭ, ನೂತನ ಬ್ರಹ್ಮರಥ ಸಹಿತ ಈಶ್ವರ ದೇವರ ನೂತನ ಶಿಲಾಮಯ ಮಂಟಪ ಗರ್ಭಗೃಹದ ಸಮರ್ಪಣಾ ಪೂರ್ವಕ ಶ್ರೀ ಈಶ್ವರ ದೇವರ ಲಿಂಗ ಪುನಃಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ಬ್ರಹ್ಮರಥದಲ್ಲಿ ಪ್ರಥಮ ಬ್ರಹ್ಮರಥೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇರೆಬೈಲು ಡಾ| ಶಿವಪ್ರಸಾದ ತಂತ್ರಿವರೇಣ್ಯರ ನೇತೃತ್ವದಲ್ಲಿ ವೇದಾಗಮಜ್ಞರಾದ ವೈದಿಕೋತ್ತಮರ ಸಹಯೋಗದೊಂದಿಗೆ ಮಾ.29 ರಿಂದ ಮೊದಲುಗೊಂಡು ಎ.6 ರವರೆಗೆ ಬ್ರಹ್ಮಕಲಶದ ವೈಭವ ನೆರವೇರಲಿದೆ.

ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರ್ಷ ಸಂಪಿಗೆತ್ತಾಯ,ಬ್ರಹ್ಮ ಕಲಶ ಸಮಿತಿ ಅಧ್ಯಕ್ಷ ವಸಂತ ಮರಕಡ, ಉಪಾಧ್ಯಕ್ಷರಾದ ಪ್ರಮೋದ್ ಕುಮಾರ್, ಜಯಪ್ರಕಾಶ್ ಸಂಪಿಗೆತ್ತಾಯ, ವಸಂತಿ ಲಕ್ಷ್ಮಣ್, ಸುಧೀರ್ ಕುಮಾರ್ ಶೆಟ್ಟಿ ಕೊರೊಟ್ಟು, ಅರ್ಚಕ ಲಕ್ಷ್ಮೀಶ ಶಗ್ರಿತ್ತಾಯ, ಡಾ. ಪಿ. ಅನಂತಕೃಷ್ಣ ಭಟ್ ಮಂಗಳೂರು, ಚಂದ್ರಕಾoತ್ ನಿಡ್ಡಾಜೆ, ಹೊನ್ನಪ್ಪ ಕುಲಾಲ್ ಮಾಣೂರು, ನಾರಾಯಣ ಪೂಜಾರಿ ಬಳ್ಳಮಂಜ, ಅವಿನಾಶ್ ಕುಲಾಲ್ ಮಾಣೂರು, ಗೋಪಾಲ ಪೂಜಾರಿ ಕೊಲಾಜೆ, ಪ್ರಶಾಂತ್ ಶೆಟ್ಟಿ ಮೂಡಯೂರು, ತುಳಸಿದಾಸ್ ಪೈ., ಹೊರಕಾಣಿಕೆ ಸಂಚಾಲಕ ಕಮಲಾಕ್ಷ ಸಹಿತ ಮುತ್ತಿತರರು ಇದ್ದರು.

Related posts

ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜ ಅಧ್ಯಕ್ಷರಾಗಿ ಪಿ.ಕೆ. ರಾಜು ಪೂಜಾರಿ

Suddi Udaya

ಸಿ.ಎ ಪರೀಕ್ಷೆಯಲ್ಲಿ ಕುವೆಟ್ಟು ಮೇಗೇಶ್ ಯು. ಶೆಟ್ಟಿ ಉತ್ತೀರ್ಣ

Suddi Udaya

ಬಂದಾರು: ಬುದ್ಧ ಗುರುಪೂರ್ಣಿಮೆಯ ಪ್ರಯುಕ್ತ ಹಣ್ಣಿನ ಗಿಡ ನೆಟ್ಟು ಸಂಭ್ರಮ

Suddi Udaya

ಬಾರ್ಯ ಗ್ರಾ.ಪಂ. ಘನ ತ್ಯಾಜ್ಯ ಘಟಕದ ಉದ್ಘಾಟನೆ ಮತ್ತು ಗ್ರಂಥಪಾಲಕರ ದಿನಾಚರಣೆ

Suddi Udaya

ರಾಜ್ಯಮಟ್ಟದ ಜನಪದ ಗೀತಗಾಯನದಲ್ಲಿ ವಾಣಿ ಕಾಲೇಜಿನ ರೇಂಜರ್ಸ್ ತಂಡ ಪ್ರಥಮ

Suddi Udaya

ಮಲವಂತಿಗೆ: ಚಾರಣಕ್ಕೆ ತೆರಳಿದ್ದ ಎಂಬಿಬಿಎಸ್ ಪದವೀಧರ ಯುವಕ ಹೃದಯಾಘಾತದಿಂದ ಸಾವು

Suddi Udaya
error: Content is protected !!